ಬಳ್ಳಾರಿ: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಬಳ್ಳಾರಿ ವಲಯ ಕಚೇರಿಯಲ್ಲಿ ನಡೆದಿದ್ದ ₹16.17 ಕೋಟಿ ವಂಚನೆ ಪ್ರಕರಣದ ಆರೋಪಿಯನ್ನು ನಗರದ ಎಪಿಎಂಸಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದೆ.

2022ರಿಂದ 2026ರವರೆಗಿನ ಅವಧಿಯಲ್ಲಿ ಕೆಐಎಡಿಬಿ ಬಳ್ಳಾರಿ ವಲಯ ಕಚೇರಿಯಲ್ಲಿ ನಕಲಿ ಸಹಿ ಬಳಸಿ, ₹16.17ಕೋಟಿ ಹಣವನ್ನು ಆರೋಪಿ ಸಂತೋಷ್ ಕುಮಾರ್ (33) ಎಂಬಾತ ಅನ್ಯ ಖಾತೆಗಳಿಗೆ ವರ್ಗಾವಣೆ ಮಾಡಿದ್ದ.

ಮಾರ್ಚ್ 20ರಂದು ಈ ಕುರಿತು ಪ್ರಕರಣ ದಾಖಲಾಗಿತ್ತು. ಆರೋಪಿಗಾಗಿ ಹುಡುಕಾಟ ನಡೆದಿತ್ತು. ಏಪ್ರಿಲ್ 15ರಂದು ಆತನನ್ನು ಬಂಧಿಸಿರುವುದಾಗಿ ಪೊಲೀಸ್ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ, ಆರೋಪಿಯನ್ನು ಎರಡು ದಿನಗಳಿಗೆ ಹಿಂದೆಯೇ ಬಂಧಿಸಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಕಳವು ಪ್ರಕರಣಗಳು ಪತ್ತೆ: ಕುರುಗೋಡು ಠಾಣಾ ವ್ಯಾಪ್ತಿಯಲ್ಲಿ ಹಲವು ಕಳ್ಳತನ ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ. ಕಳವಾಗಿದ್ದ ₹1.50 ಲಕ್ಷ ಮೌಲ್ಯದ ಕಾಪರ್ ತಂತಿ, ₹4.50 ಲಕ್ಷ ಮೌಲ್ಯದ ಎಮ್ಮೆ, ₹3.80 ಲಕ್ಷ ಮೌಲ್ಯದ ನಾಲ್ಕು ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣಗಳಲ್ಲಿ ಒಟ್ಟು ಏಳು ಆರೋಪಿಗಳನ್ನು ಬಂಧಿಸಲಾಗಿದೆ .

ಕುಡುತಿನಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮತ್ತೊಂದು ಪ್ರಕರಣದಲ್ಲಿ ₹2.20 ಲಕ್ಷ ಮೌಲ್ಯದ ಲಾರಿಯ 10 ಟೈರ್ ಹಾಗೂ ನಾಲ್ಕು ಡಿಸ್ಕ್ಗಳನ್ನು ವಶಪಡಿಸಿಕೊಂಡು ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪ್ರಕಟಣೆ ಹೇಳಿದೆ.

ಮಾದಕ ದ್ರವ್ಯ ಸೇವನೆ ಪತ್ತೆ ಹಚ್ಚಲು ಮಾರ್ಚ್ 27ರಿಂದ ಏಪ್ರಿಲ್ 14ರವರೆಗೆ ಜಿಲ್ಲೆಯಲ್ಲಿ ನಡೆದ ವಿಶೇಷ ದಾಳಿಯಲ್ಲಿ 766 ಜನರನ್ನು ಪರಿಶೀಲಿಸಲಾಗಿದ್ದು, 63 ಮಂದಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ ಇಬ್ಬರು ಮಾದಕ ದ್ರವ್ಯ ಸೇವನೆ ಮಾಡಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

762 ಜನರ ವಿರುದ್ದ ಅನುಮಾನಸ್ಪದ ಓಡಾಟ ಆಧಾರದಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಯಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಇಲಾಖೆ ಹೇಳಿದೆ.

ಸಂಡೂರು: ತಾಲ್ಲೂಕಿನ ದೋಣಿಮಲೈ (ಎನ್ಎಂಡಿಸಿ ) ಪಟ್ಟಣದಲ್ಲಿ ಮಹಿಳೆಯೊಬ್ಬರು ಚೀಟಿ ವ್ಯವಹಾರದ ಹಣ ವಂಚನೆ ಮಾಡಿ ಪರಾರಿಯಾದ ಘಟನೆ ಈಚೆಗೆ ಜರುಗಿದೆ.

ದೋಣಿಮಲೈ (ಎನ್ಎಡಿಸಿ) ಪಟ್ಟಣದ ನಿವಾಸಿ ಶ್ವೇತಾ ನಾಯ್ಕ ಪರಾರಿಯಾದ ಆರೋಪಿ. ಹಣ ವಂಚನೆ ಮಾಡಿದ ಆರೋಪಿ ಎನ್ನಲಾದ ಶ್ವೇತಾ ಅವರು ಹಲವಾರು ವರ್ಷಗಳಿಂದ ಪಟ್ಟಣದಲ್ಲಿ ಚೀಟಿ ವ್ಯವಹಾರ ನಡೆಸುತ್ತಿದ್ದರು. ಅದೇ ಪಟ್ಟಣದ ನಿವಾಸಿ ಲತಾ ಅವರು ಹಣ ವಂಚನೆ ಮಾಡಿದ ಶ್ವೇತಾ ಅವರ ಬಳಿ 11 ಚೀಟಿಗಳಿಂದ ಒಟ್ಟು ₹38,69,000 ನ್ನು ಪ್ರತಿ ತಿಂಗಳು ಹಂತ ಹಂತವಾಗಿ ಫೋನ್ ಪೇ, ನಗದು ರೂಪದಲ್ಲಿ ಸಂದಾಯ ಮಾಡಿದ್ದಾರೆ.

ಲತಾ ಅವರು ಆರೋಪಿ ಶ್ವೇತಾ ಅವರನ್ನು ಚೀಟಿಯ ಹಣ ಮರಳಿ ಕೊಡುವಂತೆ ಒತ್ತಾಯ ಮಾಡಿದ್ದಾರೆ ಆದರೆ ಶ್ವೇತಾ ಅವರು ಚೀಟಿಯ ಹಣ ನೀಡದೆ, ವಂಚನೆ ಮಾಡಿ ಪಟ್ಟಣದಿಂದ ಪರಾರಿಯಾಗಿದ್ದಾರೆ.

ಲತಾ ಅವರು ನೀಡಿದ ದೂರು ಆಧರಿಸಿ ಸಂಡೂರು ಪೊಲೀಸ್ ಠಾಣೆಯಲ್ಲಿ ಈಚೆಗೆ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-25-1500199210

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.