ಬಳ್ಳಾರಿ: ನಗರದ ಆಯಕಟ್ಟಿನ ಪ್ರದೇಶಗಳಲ್ಲಿ ಪ್ರಭಾವಿಗಳು ಮತ್ತು ರಾಜಕೀಯ ಮುಖಂಡರು ಒತ್ತುವರಿ ಮಾಡಿಕೊಂಡಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಜಮೀನುಗಳನ್ನು ರಕ್ಷಿಸುತ್ತಿರುವ ಹೆಚ್ಚುವರಿ ಜಿಲ್ಲಾಧಿಕಾರಿಗಳ ನೇತೃತ್ವದ ತಂಡದ ಕಾರ್ಯಾಚರಣೆಗೆ ಜನಸಂಗ್ರಾಮ ಪರಿಷತ್ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಸಮಿತಿಯ ಅಧ್ಯಕ್ಷರಾದ, ಹೆಚ್ಚುವರಿ ಜಿಲ್ಲಾಧಿಕಾರಿ(ಎಡಿಸಿ)ಯೂ ಆದ ಮೊಹಮದ್ ಝುಬೇರ ಅವರನ್ನು ಸರ್ಕಾರ ಸದ್ಯ ವರ್ಗಾವಣೆ ಮಾಡಬಾರದು ಎಂದು ಒತ್ತಾಯಿಸಿದೆ.

ಬಳ್ಳಾರಿಯಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಯ ವಿರುದ್ಧ ಕಾನೂನಾತ್ಮಕವಾಗಿ ಹಾಗೂ ಹಲವು ಬಗೆಯಲ್ಲಿ ಹೋರಾಟ ನಡೆಸಿರುವ ಜನಸಂಗ್ರಾಮ ಪರಿಷತ್ ಸದ್ಯ ಹೆಚ್ಚುವರಿ ಜಿಲ್ಲಾಧಿಕಾರಿ ವರ್ಗಾವಣೆ ಮಾಡದಂತೆ ಸರ್ಕಾರಕ್ಕೆ ಪತ್ರ ಬರೆದಿರುವುದು ಮಹತ್ವ ಪಡೆದಿದೆ.

ಪತ್ರದಲ್ಲೇನಿದೆ?: ನಗರದಲ್ಲಿ ಸರ್ಕಾರಿ ಜಮೀನು, ನಿವೇಶನ ಹಾಗೂ ವಿವಿಧ ಮಂಡಳಿಗಳಿಗೆ ಮಂಜೂರಾದ ಭೂಮಿಯನ್ನು ಬೇನಾಮಿ ಹೆಸರಿನಲ್ಲಿ ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಇದನ್ನು ಅರಿತ ಜಿಲ್ಲಾಡಳಿತ ಕಳೆದ ಮಾರ್ಚ್ 6ರಂದು ಎಡಿಸಿ ಅಧ್ಯಕ್ಷತೆಯಲ್ಲಿ ವಿಶೇಷ ಕಾರ್ಯಪಡೆ ಸಮಿತಿ ರಚಿಸಿದ್ದಾರೆ. ಈ ಸಮಿತಿಯು ಏಪ್ರಿಲ್ 10ರಿಂದ ಕಾರ್ಯಾಚರಣೆ ಆರಂಭಿಸಿದ್ದು, ಇದುವರೆಗೆ ಸುಮಾರು 60 ಎಕರೆಯಷ್ಟು ಸರ್ಕಾರಿ ಭೂಮಿಯನ್ನು ವಶಪಡಿಸಿಕೊಂಡಿದೆ. ವಿವಿಧ ವಾರ್ಡ್ಗಳಲ್ಲಿನ ನೂರಾರು ಕೋಟಿ ಬೆಲೆಬಾಳುವ ಆಸ್ತಿಯನ್ನು ಸಂರಕ್ಷಿಸುವಲ್ಲಿ ಈ ತಂಡ ಯಶಸ್ವಿಯಾಗಿದೆ. ಇನ್ನೂ ನೂರಾರು ಎಕರೆ ಭೂಮಿಯ ತೆರವು ಬಾಕಿ ಇದೆ ಎಂದು ಸರ್ಕಾರದ ಗಮನಕ್ಕೆ ತಂದಿದೆ.

‘ಒತ್ತುವರಿಯಿಂದಾಗಿ ಎಸ್ಸಿ/ಎಸ್ಟಿ ವಸತಿ ನಿಲಯಗಳು, ಶಾಲೆಗಳು, ಸಮುದಾಯ ಭವನಗಳು ಮತ್ತು ಮಿಲಿಟರಿ ಯೋಜನೆಗಳಿಗೆ ಭೂಮಿ ಸಿಗುತ್ತಿಲ್ಲ. ಇದರಿಂದಾಗಿ ಸರ್ಕಾರದಿಂದ ಬಂದ ಅನುದಾನ ಬಳಕೆಯಾಗದೆ ವಾಪಸ್ ಹೋಗುತ್ತಿದೆ. ಇಂತಹ ಸಮಯದಲ್ಲಿ ಸರ್ಕಾರಿ ಆಸ್ತಿ ರಕ್ಷಣೆ ಮಾಡುತ್ತಿರುವ ಅಧಿಕಾರಿಯ ವರ್ಗಾವಣೆ ಸಲ್ಲದು’ ಎಂದು ಚಾಗನೂರು ಮಲ್ಲಿಕಾರ್ಜುನ ರೆಡ್ಡಿ ನೇತೃತ್ವದ ಸಂಘಟನೆ ಆಗ್ರಹಿಸಿದೆ.

ಬಳ್ಳಾರಿ ತಾಲ್ಲೂಕಿನ ಸ.ನಂ 13/1ರ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಅಂದಿನ ಅಧಿಕಾರಿಗಳು ₹113 ಕೋಟಿ ಪರಿಹಾರ ನಿಗದಿಪಡಿಸಿದ್ದರು. ಇದನ್ನು ಮರು ಪರಿಶೀಲಿಸಿದ ಎಡಿಸಿ ಝುಬೇರ, ವೈಜ್ಞಾನಿಕವಾಗಿ ಕೇವಲ ₹3.70 ಕೋಟಿ ನಿಗದಿ ಮಾಡಿದ್ದರು. ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ ಆಗಬಹುದಾಗಿದ್ದ ಸುಮಾರು ₹109 ಕೋಟಿ ನಷ್ಟ ತಪ್ಪಿಸಿದ್ದಾರೆ ಎಂಬುದನ್ನೂ ಸಂಘಟನೆ ಪತ್ರದಲ್ಲಿ ಉಲ್ಲೇಖಿಸಿದೆ.

ಒತ್ತುವರಿ ತೆರವು ಕಾರ್ಯಾಚರಣೆ ಪೂರ್ಣಗೊಂಡು ಸಮಿತಿಯು ಅಂತಿಮ ವರದಿ ನೀಡುವವರೆಗೆ ಹೆಚ್ಚುವರಿ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಬಾರದು ಎಂದು ಒತ್ತಾಯಿಸಿರುವ ಸಂಘಟನೆ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಿದೆ.

ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮದ್ ಝುಬೇರ ಮತ್ತು ಬಳ್ಳಾರಿ ಉಪ ವಿಭಾಗಾಧಿಕಾರಿ ರಾಜೇಶ ಎಚ್.ಡಿ ಅವರ ವರ್ಗಾವಣೆಗೆ ತೆರೆ ಮರೆಯ ರಾಯಕೀಯ ಪ್ರಯತ್ನ ನಡೆಯುತ್ತಿರುವುದಾಗಿ ಇತ್ತೀಚೆಗೆ ಬಹಿರಂಗವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.