ಬಳ್ಳಾರಿ: ‘ಸರ್ಕಾರ ಆಯೋಜಿಸಬೇಕಾಗಿರುವ ಕೃಷಿ ಮೇಳವನ್ನು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಆಯೋಜಿಸಿರುವುದು ಅಭಿನಂದನೀಯ’ ಎಂದು ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಪಿ. ಗಾದೆಪ್ಪ ಅಭಿಪ್ರಾಯಪಟ್ಟರು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನೇತೃತ್ವದಲ್ಲಿ ಜಿಲ್ಲಾಡಳಿತ, ವಿವಿಧ ಇಲಾಖೆಗಳು, ಬಳ್ಳಾರಿ ಎಪಿಎಂಸಿ ದಲ್ಲಾಳಿ ವರ್ತಕರ ಸಂಘ, ಎಪಿಎಂಸಿ ವರ್ತಕರ ಸಂಘ, ಹತ್ತಿ ಬೆಳೆಗಾರರು ಮತ್ತು ರೈತ ಸಮೂಹಗಳ ಸಹಕಾರದೊಂದಿಗೆ ನಡೆದ ‘ಗುಣಮಟ್ಟದ ಬೀಜ ಮತ್ತು ವೈಜ್ಞಾನಿಕ ಬಿತ್ತನೆ’ ವಿಷಯದ ಕೃಷಿ ಮೇಳವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಹಕಾರದಲ್ಲಿ ‘ರಾಸಾಯನಿಕ ಮುಕ್ತ’ ಹಣ್ಣುಗಳು ಮತ್ತು ತರಕಾರಿ ಮಾರಾಟಕ್ಕೆ ಮಹಾನಗರ ಪಾಲಿಕೆಯು ‘ರೈತ ಸಂತೆ’ಗಳನ್ನು ಏರ್ಪಡಿಸಲು ಉತ್ಸುಕವಾಗಿದೆ. ಈ ಕುರಿತು ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.

ಬಳ್ಳಾರಿ ಶಾಸಕ ನಾರಾ ಭರತ ರೆಡ್ಡಿ ಅವರು, ‘ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಜನಪರ ಕಾಳಜಿ ಗಮನಾರ್ಹ. ಈ ಸಂಸ್ಥೆಯು ಎಲ್ಲಾ ಕ್ಷೇತ್ರಗಳಲ್ಲಿ ಗಮನಾರ್ಹವಾಗಿ ಸೇವೆ ಸಲ್ಲಿಸುತ್ತಿದೆ’ ಎಂದರು.

ಲಿಡ್ಕರ್ ಅಧ್ಯಕ್ಷರಾದ ಮುಂಡ್ರಗಿ ನಾಗರಾಜ್ ಅವರು, ‘ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಜನಪರವಾಗಿರುವ ಸಂಸ್ಥೆಯಾಗಿದೆ. ಈ ಸಂಸ್ಥೆಯು ಹಮ್ಮಿಕೊಂಡಿರುವ ರೈತಣ್ಣ ಊಟ, ರೈತರ ವಸತಿ, ಕೌಶಲ್ಯಾಭಿವೃದ್ಧಿ ಸೆಂಟರ್ ಸೇರಿದಂತೆ ಇತರೆಲ್ಲ ಸೇವೆಗಳು ಅನೇಕರಿಗೆ ಅನುಕೂಲವಾಗಿದೆ’ ಎಂದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಇ. ಚಿದಾನಂದಪ್ಪ, ‘ರೈತರು ಮತ್ತು ಕೃಷಿ ಮುಂದಿನ ಪೀಳಿಗೆಗಾಗಿ ಉಳಿಯಲು ಸರ್ಕಾರ ಸ್ವಾಮಿನಾಥನ್ ವರದಿಯನ್ನು ಅನುಷ್ಟಾನ ಮಾಡಬೇಕು’ ಎಂದು ಹೇಳಿದರು.

ತುಂಗಭದ್ರ ರೈತ ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ, ‘ಶೀಘ್ರದಲ್ಲೇ ಪ್ರಾರಂಭವಾಗುವ ತುಂಗಭದ್ರ ಹೂಳಿನ ಜಾತ್ರೆ-2026ರಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಂಡು ಮುಂದಿನ ಪೀಳಿಗೆಗಾಗಿ ಜಲಾಶಯವನ್ನು ಸಂರಕ್ಷಣೆ ಮಾಡೋಣ’ ಎಂದು ಮನವಿ ಮಾಡಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಂ. ಸೋಮಸುಂದರ್, ‘ರೈತರು ಎಂಎಸ್ಪಿ (ಕನಿಷ್ಠ ಬೆಂಬಲ ಬೆಲೆ)ಯ ವ್ಯವಸ್ಥೆಯಲ್ಲಿ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಆದ್ಯತೆ ನೀಡಬೇಕು. ಆಧುನಿಕ ಮತ್ತು ವೈಜ್ಞಾನಿಕ - ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ದೃಢೀಕೃತ ಬೀಜಗಳನ್ನು ಖರೀದಿಸಿ, ಬಿತ್ತನೆ ಮಾಡಬೇಕು’ ಎಂದರು.

ಕೃಷಿ ವಿಜ್ಞಾನಿಗಳಾಗಿರುವ ಡಾ. ಎ.ಜಿ. ಶ್ರೀನಿವಾಸ್, ಡಾ. ರವಿಶಂಕರ್ ಜಿ. ಡಾ. ಪಾಲಯ್ಯ ಮತ್ತು ಡಾ. ಎಂ. ಭೀಮಣ್ಣ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಉಪನ್ಯಾಸ ನೀಡಿದರು.

ಆದರ್ಶ ರೈತರಾಗಿರುವ ಕೆ.ಜೆ. ಜಯರಾಂ ಮತ್ತು ವದ್ದಟ್ಟಿಯ ಗಂಟ ಪಾಪಾರಾವ್ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ಕೃಷಿ ಮೇಳದ ಅಂಗವಾಗಿ ನಗರೆ ಶ್ರೀ ನಗರೇಶ್ವರ ದೇವಸ್ಥಾನದಿಂದ ಜೋಡೆತ್ತಿ ಬಂಡಿ, ಹಕ್ಕಿಪಿಕ್ಕಿ ತಂಡ, ಕೋಲಾಟ, ಡೊಳ್ಳು ಕುಣಿತ, ವೀರಭದ್ರ ಕುಣಿತ ಸೇರಿ ವಿವಿಧ ಕಲಾಪ್ರಕಾರಗಳ ಜಾಥಾ ಆಕರ್ಷಕವಾಗಿ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-25-359832488

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.