ಬಳ್ಳಾರಿ: ರೈಲ್ವೆ ಖಾತೆ ರಾಜ್ಯ ಮಂತ್ರಿ ವಿ. ಸೋಮಣ್ಣ ಅವರನ್ನು ಶನಿವಾರ ದೆಹಲಿಯಲ್ಲಿ ಭೇಟಿಯಾದ ‘ರೈಲ್ವೆ ಕ್ರಿಯಾ ಸಮಿತಿ’ಯ ನಿಯೋಗವು ಬಳ್ಳಾರಿ ಜಿಲ್ಲೆಗೆ ಸಂಬಂಧಿಸಿದ ರೈಲ್ವೆ ಸಮಸ್ಯೆಗಳ ಪರಿಹಾರಕ್ಕಾಗಿ ಮನವಿ ಸಲ್ಲಿಸಿತು.

ಮೈಸೂರು–ಅಜ್ಮೀರ್ ರೈಲು ಈ ಹಿಂದೆ ಚಿತ್ರದುರ್ಗ–ರಾಯದುರ್ಗ–ಬಳ್ಳಾರಿ–ಹೊಸಪೇಟೆ ಮಾರ್ಗದಲ್ಲಿ ವಾರದಲ್ಲಿ ಒಂದು ದಿನ ಸಂಚರಿಸುತ್ತಿತ್ತು. ಅದನ್ನು ಮರಳಿ ಪ್ರಾರಂಭಿಸಬೇಕು ಹಾಗೂ ಇದೇ ರೈಲು ದಾವಣಗೆರೆ ಮತ್ತು ಕೊಟ್ಟೂರು ಮಾರ್ಗದಲ್ಲಿ ವಾರದಲ್ಲಿ ಒಂದು ದಿನ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಯಿತು.

ಬಳ್ಳಾರಿ–ಸಿರುಗುಪ್ಪ–ಸಿಂಧನೂರು ರೈಲ್ವೆ ಮಾರ್ಗದ ಪ್ರಮುಖ ಬೇಡಿಕೆಯನ್ನೂ ಸಚಿವರ ಮುಂದಿಡಲಾಯಿತು. ಇದಕ್ಕೆ ಸ್ಪಂದಿಸಿದ ಸಚಿವರು, ಈ ಮಾರ್ಗದ ಆರಂಭಕ್ಕೆ ಹಾಗೂ ಬಳ್ಳಾರಿ ಮಾರ್ಗದಲ್ಲಿ ‘ವಂದೇ ಭಾರತ್’ ಇಲ್ಲವೇ ‘ಸೂಪರ್ ಫಾಸ್ಟ್ ಜನ ಶತಾಬ್ದಿ’ ಅಥವಾ ‘ಇಂಟರ್ ಸಿಟಿ’ ರೈಲು ಪ್ರಾರಂಭಿಸುವಂತೆ ಶಿಫಾರಸು ಮಾಡಿದರು.

ರೈಲ್ವೆ ಕ್ರಿಯಾ ಸಮಿತಿಯ ಅಧ್ಯಕ್ಷ ಕೆ.ಎಂ. ಮಹೇಶ್ವರ ಸ್ವಾಮಿ, ಸಿರುಗುಪ್ಪ ರೈಸ್ ಮಿಲ್ ಮಾಲೀಕರ ಸಂಘದ ಅಧ್ಯಕ್ಷ ಎನ್.ಜಿ. ಬಸವರಾಜಪ್ಪ, ಸಿರುಗುಪ್ಪ ಎಪಿಎಂಸಿ ಮಾಜಿ ನಿರ್ದೇಶಕ ಪಲ್ಲೇದ್ ಯೋಗರಾಜ್, ಕೋಳೂರು ಚಂದ್ರಶೇಖರ ಗೌಡ, ಕೊಸಗಿ ನಾಗರಾಜ್ ಶೆಟ್ಟಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-25-1376881159

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.