ಬಳ್ಳಾರಿ: ‘ನಾವಾಡುವ ಭಾಷೆಯು ಬರವಣಿಗೆಗೆ ನೈಜತೆ ನೀಡುತ್ತದೆ’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಪ್ರೊ.ಅಮರೇಶ ನುಗಡೋಣಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಜ್ಞಾನಾಮೃತ ಕಾಲೇಜಿನಲ್ಲಿ ಎರಡು ದಿನಗಳಿಂದ ನಡೆಯುತ್ತಿದ್ದ ‘ಸಂಗಂ ಸಾಹಿತ್ಯ ಪುರಸ್ಕಾರ’ ಮತ್ತು ದ್ರಾವಿಡ ಬಳಗ ಸರಣಿಯ ಕವಿಗೋಷ್ಠಿಯಲ್ಲಿ ಅವರು ಭಾನುವಾರ ಮಾತನಾಡಿದರು.

‘ಗ್ರಾಮ್ಯ ಭಾಷೆಯನ್ನು ಸಾಹಿತ್ಯಿಕ ಭಾಷೆಯಾಗಿ ಬೇಂದ್ರೆ, ದೇವನೂರು ಮಹಾದೇವ, ವಚನಕಾರರು ಹಾಗೂ ಜಾನಪದೀಯರು ಚೆನ್ನಾಗಿ ಬಳಸಿದ್ದಾರೆ’ ಎಂದು ನಿದರ್ಶನ ಸಹಿತ ಮಾತನಾಡಿದರು.

ಪ್ರೊ.ಅಮರೇಶ ನುಗಡೋಣಿ ಅವರೊಂದಿಗೆ ನಡೆದ ಮಾತುಕತೆಯಲ್ಲಿ ಪಲ್ಲವ ವೆಂಕಟೇಶ್, ಟಿ. ಎಸ್ ಗೊರವರ ಹಾಗೂ ಚೈತ್ರ ಭಾಗವಹಿಸಿದ್ದರು.

ಎರಡೂ ಭಾಷೆಗೆ ಸಾಹಿತ್ಯಿಕ ಇತಿಹಾಸ: ‘ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದ ಕನ್ನಡ ತೆಲುಗಿಗೆ ಸಾವಿರಾರು ವರ್ಷಗಳ ಸಾಹಿತ್ಯಿಕ ಹಾಗೂ ಶಾಸನ ಪರಂಪರೆ ಇದೆ’ ಎಂದು ಕರ್ನೂಲು ಸಾಹಿತಿ ಮಾರುತಿ ಪೌರೋಹಿತಂ ಹೇಳಿದರು.

ಕಾರ್ಯಕ್ರಮದ ಕಥಾ ಸಮಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ತೆಲುಗಿನ ಮೇರು ಕವಿಗಳಾದ ನನ್ನಯ್ಯ, ತಿಕ್ಕಣ್ಣ ಹಾಗೂ ಶ್ರೀನಾಥರಂತೆ ಕನ್ನಡದ ಪಂಪ, ರನ್ನ ಕುವೆಂಪು ಮೊದಲಾದ ಮಹನೀಯರು ಶಿಖರಪ್ರಾಯರು’ ಎಂದು ನೆನೆಸಿದರು.

‘ಎರಡೂ ಭಾಷೆಗಳ ಭಕ್ತಿ, ಜಾನಪದ, ಅಧುನಿಕ, ಬಂಡಾಯ ಸಾಹಿತ್ಯ ಪರಂಪರೆ ವಿಶಿಷ್ಟವಾಗಿದೆ. ಅಲ್ಲದೆ ಸಂಗೀತ, ನಾಟಕ, ಸಿನಿಮಾ ರಂಗಭೂಮಿಗೆ ಅಪಾರ ಕೊಡುಗೆ ನೀಡುತ್ತಿವೆ. ಇಲ್ಲಿನ ಪ್ರಾದೇಶಿಕ ಉಪಭಾಷೆಗಳಲ್ಲಿ ವೈವಿಧ್ಯತೆ ಇದೆ’ ಎಂದು ಭಾಷಾ ವಿಶೇಷತೆ ಕೊಂಡಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-25-1238964988

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.