ಬಳ್ಳಾರಿ: ತಾಲ್ಲೂಕಿನ ಕೃಷ್ಣನಗರ ಕ್ಯಾಂಪ್ನಲ್ಲಿ ಅಳವಡಿಸಲಾಗಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವಿರುವ ನಾಮಫಲಕವನ್ನು ಜಖಂಗೊಳಿಸಿ, ಅವಮಾನ ಮಾಡಿದ ಆರೋಪದ ಮೇಲೆ ಏಳು ಜನರ ವಿರುದ್ಧ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಏ. 25ರಂದು ಪ್ರಕರಣ ದಾಖಲಾಗಿದೆ.

ದೂರಿನ ಅನ್ವಯ ಗ್ರಾಮದ ಕಮ್ಮಾ ಸಮುದಾಯಕ್ಕೆ ಸೇರಿದ ಕುಮಾರ್, ನಾಗೇಂದ್ರ, ಹೈದರಾಬಾದ್ ಸೀನ, ರುದ್ರಯ್ಯ, ಕ್ರಾಂತಿ, ದುರುಗಪ್ಪ, ರಾಜು ಎಂಬುವರ ವಿರುದ್ಧ ಎಫ್ಐಆರ್ ಮಾಡಲಾಗಿದೆ.

ಕೃಷ್ಣಾನಗರ ಕ್ಯಾಂಪ್ನ ವೈಕುಂಠಂ ಎಂಬುವವರ ಮನೆ ಮುಂದಿನ ಸ್ಥಳದಲ್ಲಿ ದಲಿತ ಸಂಘರ್ಷ ಸಮಿತಿ ಮತ್ತು ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಕಳೆದ 15 ವರ್ಷಗಳ ಹಿಂದೆ ಅಂಬೇಡ್ಕರ್ ನಾಮಫಲಕವನ್ನು ಅಳವಡಿಸಲಾಗಿತ್ತು. ವರ್ಷದ ಹಿಂದೆ ಆರೋಪಿಗಳು ಅದೇ ಜಾಗದಲ್ಲಿ ತೆಲುಗು ಚಿತ್ರನಟ ಎನ್ಟಿಆರ್ ಮೂರ್ತಿ ಪ್ರತಿಷ್ಠಾಪನೆ ಮಾಡುವ ನೆಪದಲ್ಲಿ ಅಂಬೇಡ್ಕರ್ ನಾಮಫಲಕವನ್ನು ತೆರವುಗೊಳಿಸುವಂತೆ ಸಂಘದ ಸದಸ್ಯರ ಮೇಲೆ ಒತ್ತಡ ಹೇರಿದ್ದರು. ಇದಕ್ಕೆ ಒಪ್ಪದಿದ್ದಾಗ ದ್ವೇಷ ಸಾಧಿಸುತ್ತಾ ಬಂದಿದ್ದರು ಎನ್ನಲಾಗಿದೆ. ಏಪ್ರಿಲ್ 25ರ ಮುಂಜಾನೆ ಸುಮಾರು 6:30ಕ್ಕೆ ದೂರುದಾರರಾದ ಜಿ. ಕೆಂಚಪ್ಪ ಅವರು ಹಾಲು ತರಲು ಹೋದಾಗ, ನಾಮಫಲಕವನ್ನು ಬಗ್ಗಿಸಿ, ಚಪ್ಪಲಿ ಕಾಲಿನಿಂದ ತುಳಿದು ವಿರೂಪಗೊಳಿಸಿರುವುದ ಕಂಡು ಬಂದಿದೆ. ಘಟನೆ ನಡೆದ ರಾತ್ರಿ ಆರೋಪಿಗಳಾದ ಕುಮಾರ್ ಮತ್ತು ನಾಗೇಂದ್ರ ನಾಮಫಲಕದ ಬಳಿ ಕುಳಿತಿರುವುದನ್ನು ಕೆಂಚಪ್ಪ ಅವರು ನೋಡಿದ್ದರು ಎನ್ನಲಾಗಿದೆ. ಮರುದಿನ ಘಟನೆಯ ಬಗ್ಗೆ ಪ್ರಶ್ನಿಸಿದಾಗ, ಆರೋಪಿಗಳು ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ದೂರಿನ ಬಳಿಕ ಪ್ರತಿದೂರು ದಾಖಲಾಗಿದೆ. ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ವರೆಗೆ ಯಾರನ್ನೂ ಬಂಧಿಸಿಲ್ಲ. ಎರಡೂ ಪ್ರಕರಣಗಳನ್ನೂ ‘ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ’ಕ್ಕೆ ಹಸ್ತಾಂತರಿಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-25-1398147658

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.