ತೆಕ್ಕಲಕೋಟೆ (ಬಳ್ಳಾರಿ ಜಿಲ್ಲೆ): ‘ತೆಕ್ಕಲಕೋಟೆ, ನಿಟ್ಟೂರು, ಉಡೇಗೋಳ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಪತ್ತೆಯಾದ ಪುರಾತನ ಶಾಸನಗಳ ಡಿಜಿಟಲೀಕರಣ ಪ್ರಕ್ರಿಯೆಯನ್ನು ‘ಭಾರತಶ್ರೀ’ ಯೋಜನೆಯಡಿ ಕೈಗೊಳ್ಳಲಾಗುವುದು’ ಎಂದು ಮೈಸೂರಿನ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸಹಾಯಕ ಅಧೀಕ್ಷಕ ಅನಿಲ್ ಕುಮಾರ ಆರ್.ವಿ ತಿಳಿಸಿದರು.

ನಿಟ್ಟೂರು ಗ್ರಾಮದ ಬಳಿ ಈಚೆಗೆ ಪತ್ತೆಯಾದ ರಾಷ್ಟ್ರಕೂಟರ ಕಾಲದ ಬಂಡೆಗಲ್ಲು ಶಾಸನ ಸ್ಥಳಕ್ಕೆ ಸೋಮವಾರ ಭೇಟಿ ನೀಡಿದ ಅವರು, ‘ಪುರಾತನ ಶಾಸನಗಳನ್ನು ಡಿಜಿಟಲೀಕರಣಗೊಳಿಸಿ ಸಂರಕ್ಷಿಸಲಾಗುವುದು. ಸಾರ್ವಜನಿಕರು ಮತ್ತು ಸಂಶೋಧಕರಿಗೆ ಆನ್ಲೈನ್ನಲ್ಲಿ ಲಭ್ಯ ಆಗುವಂತೆ ಮಾಡಲಾಗುವುದು’ ಎಂದರು.

ಪಟ್ಟಣದ ಪ್ರಾಗೈತಿಹಾಸಿಕ ನೆಲೆ ಬಳಿ ಸಿಕ್ಕ ಗೌಡ್ರ ಮೂಲೆ ಬಂಡೆಗಲ್ಲು ಶಾಸನ, ನಿಟ್ಟೂರಿನ ಆಂಜನೇಯ ದೇವಸ್ಥಾನ ಬಳಿಯ ಬಂಡೆಗಲ್ಲು ಶಾಸನ ಹಾಗೂ ರಾಷ್ಟ್ರಕೂಟರ ಕಾಲದ ಬಂಡೆಗಲ್ಲು ಶಾಸನ ಸ್ಥಳಗಳಿಗೆ ಭೇಟಿ ನೀಡಿ ಶಾಸನಗಳ ಪಡಿಯಚ್ಚು ತೆಗೆದುಕೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-51-2060812041

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.