ಬಳ್ಳಾರಿ: ಜಿಂದಾಲ್ ವಿದ್ಯಾನಗರ ಟೌನ್ಶಿಪ್ ಪ್ರದೇಶದಲ್ಲಿ ಕಳೆದ 10 ತಿಂಗಳಿನಿಂದ ಬೀಡುಬಿಟ್ಟಿದ್ದ ಕರಡಿ ಹಾಗೂ ಅದರ ಎರಡು ಮರಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬುಧವಾರ ರಾತ್ರಿ ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ.

ಈ ಕರಡಿಗಳು ಟೌನ್ಶಿಪ್ನಲ್ಲಿ ಪದೇ ಪದೆ ಕಾಣಿಸಿಕೊಳ್ಳುತ್ತಿದ್ದರೂ, ಇದುವರೆಗೆ ಯಾರಿಗೂ ತೊಂದರೆ ಮಾಡಿರಲಿಲ್ಲ. ಸಾರ್ವಜನಿಕರ ಭದ್ರತೆ ಮತ್ತು ಪ್ರಾಣಿಗಳ ರಕ್ಷಣೆ ಎರಡನ್ನೂ ಗಮನದಲ್ಲಿಟ್ಟುಕೊಂಡು ಅರಣ್ಯ ಇಲಾಖೆ ಸೆರೆ ಕಾರ್ಯಾಚರಣೆ ನಡೆಸಿದೆ. ಇದೇ ಮೊದಲ ಬಾರಿಗೆ ‘ಆಟೊಮ್ಯಾಟಿಕ್ ಮೊಬೈಲ್ ಆ್ಯಪ್ ಕೇಜ್ ಲಾಕಿಂಗ್ ಸಿಸ್ಟ್ಂ ಅನ್ನು ಬಳಸಲಾಗಿದೆ. ತಾಯಿ ಮತ್ತು ಅದರ ಮರಿಗಳನ್ನು ಏಕಕಾಲದಲ್ಲಿ ಸುರಕ್ಷಿತವಾಗಿ ಸೆರೆಹಿಡಿಯಲು ಈ ತಂತ್ರಜ್ಞಾನ ನೆರವಾಗಿದೆ.

ತಾಯಿ ಕರಡಿಗೆ ರೇಡಿಯೊ ಕಾಲರ್ ಅಳವಡಿಸಿ, ಸೂಕ್ತ ಅರಣ್ಯ ಪ್ರದೇಶದಲ್ಲಿ ಮರಿಗಳೊಂದಿಗೆ ಬಿಡುಗಡೆ ಮಾಡಲಾಯಿತು.

ಕರಡಿ ಮತ್ತು ಮರಿಳಗಳಿಗೆ ಪಶುವೈದ್ಯೆ ಪ್ರಕೃತಿ ಚಿಕಿತ್ಸೆ ನೀಡಿದರು. ಕಾರ್ಯಾಚರಣೆಯಲ್ಲಿ ಬಳ್ಳಾರಿ ವಲಯ ಡಿಸಿಎಫ್ ಕೆ.ಎನ್ ಬಸವರಾಜ್, ಎಸಿಎಫ್ ಶರಣ್ಕುಮಾರ್, ಆರ್ಎಫ್ಒ ಸೈಯದ್ ದಾದಾ ಖಲಂದರ್, ಮಂಜುನಾಥ್, ಡಿಆರ್ಎಫ್ಒ ಮೋಹನ್ ಸೇರಿದಂತೆ ಗುರುಸ್ವಾಮಿ, ವೆಂಕಟೇಶ್ ಮತ್ತು ಶ್ರೀಧರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-25-792332145

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.