ಬಳ್ಳಾರಿ: ಬಿರು ಬೇಸಿಗೆಯಲ್ಲಿ ಜನರ ದಾಹ ನೀಗಿಸುವ ಉದ್ದೇಶದಿಂದ ಬಳ್ಳಾರಿಯ ಸಾರಿಗೆ ಸಂಸ್ಥೆ ಬಸ್ಗಳಲ್ಲಿ ಉಚಿತ ಕುಡಿಯುವ ನೀರು ವಿತರಿಸುವ ತನ್ನ 11ನೇ ವರ್ಷದ ಸೇವಾ ಕಾರ್ಯಕ್ಕೆ ‘ಸನ್ಮಾರ್ಗ ಗೆಳೆಯರ ಬಳಗ’ವು ಮಂಗಳವಾರ ಚಾಲನೆ ನೀಡಿತು.

ಬಳ್ಳಾರಿ ಮಹಾನಗರ ಪಾಲಿಕೆಯ ಆಯುಕ್ತ ಮಂಜುನಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ‘11 ವರ್ಷಗಳಿಂದ ಸಂಘಟನೆಯು ಬಸ್ಗಳಲ್ಲಿ ನೀರಿನ ಕ್ಯಾನ್ಗಳನ್ನಿಟ್ಟು, ಪ್ರಯಾಣಿಕರಿಗೆ ಶುದ್ದ ಕುಡಿಯುವ ನೀರು ಒದಗಿಸುತ್ತಿದೆ. ಇದು ಶ್ಲಾಘನೀಯ ಕಾರ್ಯ ಎಂದರು. ಹಸಿದವರಿಗೆ ಅನ್ನ ನೀಡುವುದು, ದಣಿದವರಿಗೆ ನೀರು ಕೊಡುವುದು ಪುಣ್ಯದ ಕೆಲಸ’ ಎಂದು ಹೇಳಿದರು.

ಸಂಘಟನೆಯ ಅಧ್ಯಕ್ಷ ಲಕ್ಷ್ಮಿಕಾಂತ್ ರೆಡ್ಡಿ ಮಾತನಾಡಿ, ‘ಸಾರಿಗೆ ಇಲಾಖೆ ಹಾಗೂ ಸಾರ್ವಜನಿಕರ ಸಹಕಾರದಿಂದ ಈ ಜನಮುಖಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಲಾಗುತ್ತಿದೆ’ ಎಂದು ತಿಳಿಸಿದರು.

ಸದ್ಯ 55 ಬಸ್ಗಳಲ್ಲಿ ನೀರಿನ ಕ್ಯಾನ್ಗಳನ್ನು ಇರಿಸಿರುವುದಾಗಿಯೂ, ಇನ್ನೂ 17 ಬಸ್ಗಳಲ್ಲಿ ಕ್ಯಾನ್ ಇರಿಸುವುದಾಗಿಯೂ ಸಂಘದ ಕಾರ್ಯದರ್ಶಿ ಚಂದ್ರಶೇಖರ್ ತಿಳಿಸಿದ್ದಾರೆ.

ನೀರಿನ ಕ್ಯಾನ್ ಇರಿಸುವುದು ಮಾತ್ರವಲ್ಲ, ಅದಕ್ಕೆ ನಿತ್ಯ ನೀರು ತುಂಬು ಕೆಲಸವನ್ನು ಸಂಸ್ಥೆಯೇ ಮಾಡುತ್ತದೆ. ಆದರೆ, ಕೆಲ ಚಾಲಕರು ಮತ್ತು ನಿರ್ವಾಹಕರು ತಾವೇ ನೀರು ತುಂಬಿಸಿಕೊಳ್ಳುತ್ತಾರೆ. ತುಂಬಿಸಿದ ನೀರಿಗೆ ಸಂಸ್ಥೆ ಹಣದ ನೆರವು ನೀಡುತ್ತದೆಯಾದರೂ, ಚಾಲಕರು–ನಿರ್ವಾಹಕರು ಹಣ ಪಡೆಯಲು ನಿರಾಕರಿಸುತ್ತಾರೆ ಎಂದು ಅವರು ಹೇಳಿದರು.

ಬಸ್ಗಳಲ್ಲಿ ನೀರು ಇರಿಸುತ್ತಿರುವುದು ಪ್ರಯಾಣಿಕರು ಮತ್ತು ಸಾರಿಗೆ ಸಂಸ್ಥೆಯ ಅಧಿಕಾರಿ ಸಿಬ್ಬಂದಿಗೆ ಮೆಚ್ಚುಗೆಯಾಗಿದೆ ಎಂದೂ ಅವರು ಹೇಳಿದರು.

ಗೌರವಾಧ್ಯಕ್ಷ ಕೆ.ಪಂಪಾಪತಿ, ತೇಜ, ರಾಘುರಾಮ ರಾವು, ಶೇಖರ (ನಿವೃತ್ತ ಆರ್ಟಿಓ), ಕಾರ್ಯದರ್ಶಿ ಕಪ್ಪಗಲ್ಲು ಬಿ. ಚಂದ್ರಶೇಖರ, ಡಿಟಿಒ ಬಿರಾದಾರ, ಡಿಎಂಇ ಪಾಲಕ್ಷಪ್ಪ, ಕಾರ್ಮಿಕ ಕಲ್ಯಾಣಾಧಿಕಾರಿ ಕರಿಗೌಡ, ಡಿಪೋ ವ್ಯವಸ್ಥಾಪಕ ಹರಿಕೃಷ್ಣ, ಆಶೋಕ ಭಂಡಾರಿ, ಮಾರುತಿ, ಕೆ. ವಿಶ್ವನಾಥ, ಅಪ್ಪು ಮಂಜು, ಜೆ.ಪಿ. ರವಿ ಶೇಖರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-25-1451433131

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.