ಬಳ್ಳಾರಿ: ಕಾರುಗಳನ್ನು ಬಾಡಿಗೆಗೆ ಪಡೆದು ಮಾಸಿಕ ಆದಾಯದ ಆಸೆ ತೋರಿಸಿ, ನಂತರ ಅವುಗಳನ್ನು ಮರಳಿ ನೀಡದೆ ವಂಚಿಸಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದ್ದು ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ.

ವಿಶಾಲ್ ನಗರದ ನಿವಾಸಿ ಸಿಕಂದರ್ ಬಾಷಾ ಎಂಬುವವರು ನೀಡಿದ ದೂರಿನನ್ವಯ ಎಪಿಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಮೇ 16ರಂದು ಎಫ್ಐಆರ್ ದಾಖಲಾಗಿದೆ.

ಆರೋಪಿಗಳಾದ ಜಾಹಿದ್ ಪಾಷ, ಆಲೀಂ, ರೌಫ್ ಮತ್ತು ಮಹಮ್ಮದ್ ಅಲಿ ಮತ್ತು ಇತರರು ಸ್ವಿಫ್ಟ್ ಡಿಜೈರ್ ಮತ್ತು ಕ್ರೆಟಾ ಕಾರುಗಳನ್ನು ತಿಂಗಳಿಗೆ ₹40 ಸಾವಿರ ಬಾಡಿಗೆ ನೀಡುವುದಾಗಿ ನಂಬಿಸಿ ತೆಗೆದುಕೊಂಡು ಹೋಗಿದ್ದರು. ಆದರೆ, ಬಾಡಿಗೆ ಹಣ ನೀಡದೆ ಹಾಗೂ ಕಾರುಗಳನ್ನು ಮರಳಿ ಕೊಡದೆ ಸಂಪರ್ಕಕ್ಕೆ ಸಿಗದೆ ವಂಚಿಸಿದ್ದಾರೆ. ಆರೋಪಿಗಳು ಇದೇ ರೀತಿ ನಗರದ ಸುಮಾರು 20-25 ಜನರಿಂದ ಕಾರುಗಳನ್ನು ಪಡೆದು ಅನ್ಯ ಜಿಲ್ಲೆಗಳಲ್ಲಿ ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಈ ಹಿಂದೆಯೂ ಇಂಥದ್ದೇ ಪ್ರಕರಣ ಬಳ್ಳಾರಿಯಲ್ಲಿ ನಡೆದಿತ್ತು. ಪ್ರಕರಣ ಬೇಧಿಸಿದ್ದ ಪೊಲೀಸರು 44 ಕಾರುಗಳನ್ನು ವಾರಸುದಾರರಿಗೆ ಹಸ್ತಾಂತರ ಮಾಡಿದ್ದರು. ಈಗ ಮತ್ತೆ ಅಂಥದ್ದೇ ಪ್ರಕರಣ ಬಯಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-25-511422133

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.