ಬಳ್ಳಾರಿ: ನಗರದ ಹೊರವಲಯದ ಪಾತ್ರಬೂದಿಹಾಳ್ನ ಸರ್ವೆ ನಂಬರ್ 125ರಲ್ಲಿರುವ 7.87 ಎಕರೆ ವಿಸ್ತೀರ್ಣದ ಸರ್ಕಾರಿ ಹಳ್ಳದ ಜಮೀನನ್ನು ಒತ್ತುವರಿ ಮಾಡಿ, ಸಾರ್ವಜನಿಕರಿಗೆ ಮಾರಾಟ ಮಾಡಿ ವಂಚಿಸಿರುವ ಆರೋಪದ ಮೇಲೆ ಮಹಾನಗರ ಪಾಲಿಕೆ ಸದಸ್ಯೆ ಉಮಾದೇವಿ ಪತಿ ಶಿವರಾಜ್ ಸೇರಿದಂತೆ 13 ಜನರ ವಿರುದ್ಧ ಎಪಿಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.

ಮೇ 22ರಂದು ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮದ್ ಝುಬೇರ್ ಮತ್ತು ಉಪ ವಿಭಾಗಾಧಿಕಾರಿ ರಾಜೇಶ್ ಎಚ್.ಡಿ ನೇತೃತ್ವದ ಸರ್ಕಾರಿ ಭೂ ಸಂರಕ್ಷಣಾ ಸಮಿತಿಯು ಪಾತ್ರಬೂದಿಹಾಳ್ ಗ್ರಾಮದ ಸರ್ವೆ ನಂ. 125ರಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿತ್ತು.

ಈ ವೇಳೆ ಅಲ್ಲಿ ನೆರೆದಿದ್ದವರು ‘ಬಾಪೂಜಿನಗರದ ಹೊನ್ನೂರಪ್ಪ, ಹುಲಿಗೆಮ್ಮ, ಈರಣ್ಣ, ಮಾದಿಗ ನಾಗರಾಜು, ವಿ. ವೆಂಕಟೇಶ ಮತ್ತು 7ನೇ ವಾರ್ಡ್ ಕಾರ್ಪೊರೇಟರ್ ಪತಿ ಶಿವರಾಜ್ ಎಂಬುವವರು ಈ ಜಮೀನು ತಮ್ಮದೆಂದು ನಂಬಿಸಿ, ಲಕ್ಷಾಂತರ ರೂಪಾಯಿ ಪಡೆದು ನಕಲಿ ಸ್ವಾಧೀನ ವಿಕ್ರಯ ಪತ್ರಗಳನ್ನು ನೀಡಿ ನಿವೇಶನ ಮಾರಾಟ ಮಾಡಿದ್ದಾರೆ ಎಂದು ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

‘ಆರೋಪಿಗಳು ವಿವಿಧ ಅಳತೆಯ ನಿವೇಶನಗಳನ್ನು (ಉದಾಹರಣೆಗೆ 600 ಚದರ ಅಡಿ ನಿವೇಶನವನ್ನು ₹1.10 ಲಕ್ಷಕ್ಕೆ ಹಾಗೂ 1768 ಚದರ ಅಡಿ ನಿವೇಶನವನ್ನು ₹4.65 ಲಕ್ಷಕ್ಕೆ) ನೋಂದಣಿ ರಹಿತ ಕರಾರು ಪತ್ರಗಳ ಮೂಲಕ ಮಾರಾಟ ಮಾಡಿದ್ದಾರೆ. ಕೆಲವು ಪ್ರಕರಣಗಳಲ್ಲಿ ಹಕ್ಕು ಬಿಡುಗಡೆ ದಸ್ತಾವೇಜು ಸಂಖ್ಯೆಗಳನ್ನು ಬಳಸಿ, ಸರ್ವೆ ನಂಬರ್ ನಮೂದಿಸದೇ ಅಮಾಯಕರಿಗೆ ವಂಚನೆ ಮಾಡಲಾಗಿದೆ’ ಎಂದು ಆರೋಪಿಸಲಾಗಿದೆ.

ದೂರಿನ ಅನ್ವಯ ಶಿವರಾಜ್, ಹೊನ್ನೂರಪ್ಪ, ಲೊಡುಗು ಗಂಗಣ್ಣ, ನೂರ್ ಜಹಾನ್, ಸೇರಿದಂತೆ ಒಟ್ಟು 13 ಮಂದಿ ಹಾಗೂ ಈ ಕೃತ್ಯಕ್ಕೆ ಸಹಕರಿಸಿದ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಒತ್ತವರಿ ತೆರವು: ಬಳ್ಳಾರಿ ನಗರದಲ್ಲಿ ಸರ್ಕಾರಿ ಜಾಗವನ್ನು ಅಕ್ರಮಿಸಿ, ರಾಜಕಾಲುವೆಗಳನ್ನು ಒತ್ತುವರಿ ಮಾಡಿ ನಿರ್ಮಾಣ ಮಾಡಲಾಗಿದ್ದ ಅಕ್ರಮ ಬಡಾವಣೆಗಳನ್ನು ಜಿಲ್ಲಾಡಳಿತ ಶುಕ್ರವಾರ ತನ್ನ ಕಾರ್ಯಾಚರಣೆಯಲ್ಲಿ ತೆರವುಗೊಳಿಸಿದೆ.

ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಸಿ) ಮೊಹಮದ್ ಝುಬೇರ್ ಮತ್ತು ಉಪ ವಿಭಾಗಾಧಿಕಾರಿ (ಎಸಿ) ರಾಜೇಶ್ ಎಚ್.ಡಿ ನೇತೃತ್ವದ ಅಧಿಕಾರಿಗಳ ತಂಡ ಬೆಳಗ್ಗೆ 6 ಗಂಟೆಗೆ ಬಳ್ಳಾರಿ ನಗರದ ಪಾತ್ರಬೂದಿಹಾಳ್ನಲ್ಲಿ ಕಾರ್ಯಾಚರಣೆ ಆರಂಭಿಸಿತು.

ಸರ್ವೆ ಸಂಖ್ಯೆ 26 ರಲ್ಲಿದ್ದ 3.27 ಎಕರೆಯಲ್ಲಿ ತಲೆಎತ್ತಿದ್ದ ಅಕ್ರಮ ಬಡಾವಣೆ, ಸರ್ವೆ ಸಂಖ್ಯೆ 125(ಪಿ)ರಲ್ಲಿ ರಾಜಕಾಲುವೆ ಸಹಿತ 7.87 ಎಕರೆ ಪ್ರದೇಶವನ್ನು ಜಿಲ್ಲಾಡಳಿತ ವಶಕ್ಕೆ ಪಡೆಯಿತು. ಎರ್ರೆಪ್ಪ ಮತ್ತು ಶಿವರಾಜ್ ಎಂಬುವವರು ಒತ್ತುವರಿದಾರರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-25-826701385

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.