ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೂವಿನಹಡಗಲಿ | ಸೂರ್ಯಕಾಂತಿಗೆ ರೋಗ: ಅಧಿಕಾರಿಗಳಿಂದ ಪರಿಶೀಲನೆ

Published 7 ಆಗಸ್ಟ್ 2024, 14:34 IST
Last Updated 7 ಆಗಸ್ಟ್ 2024, 14:34 IST
ಅಕ್ಷರ ಗಾತ್ರ

ಹೂವಿನಹಡಗಲಿ: ತಾಲ್ಲೂಕಿನ ಇಟ್ಟಿಗಿ ಹೋಬಳಿ ವ್ಯಾಪ್ತಿಯ ಸೂರ್ಯಕಾಂತಿ ಬೆಳೆಗೆ ತೆನೆ ಕತ್ತರಿಸುವ ರೋಗ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಮಂಗಳವಾರ ಉತ್ತಂಗಿ ಗ್ರಾಮದ ರೋಗಪೀಡಿತ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಸಹಾಯಕ ಕೃಷಿ ನಿರ್ದೇಶಕ ಮಹ್ಮದ್ ಆಶ್ರಫ್, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಂದಾಳು ಮಂಜುನಾಥ ಭಾನುವಳ್ಳಿ ಅವರ ತಂಡ ಉತ್ತಂಗಿಯ ರೈತರ ಹೊಲಗಳನ್ನು ವೀಕ್ಷಿಸಿದರು.

‘ರಸ ಹೀರುವ ಕೀಟದ ದಾಳಿಯಿಂದ ಗಿಡ ಸತ್ವ ಕಳೆದುಕೊಂಡು ತೆನೆ ಕಳಚಿ ಬೀಳುತ್ತಿದೆ. ಹೂವಾಡುವ, ಕಾಳು ಕಟ್ಟುವ ಹಂತದ ಬೆಳೆಗೆ ಕೀಟನಾಶಕ ಸಿಂಪರಣೆ ಮಾಡಿದಲ್ಲಿ ಬೇರೆ ದುಷ್ಪರಿಣಾಮಗಳು ಉಂಟಾಗುತ್ತವೆ. ಬೆಳೆ ಹಾನಿಯ ಪ್ರಮಾಣ ಶೇ 5ಕ್ಕಿಂತ ಕಡಿಮೆ ಇದ್ದು, ರೋಗ ತೀವ್ರವಾಗಿ ಹರಡದೇ ಇರುವುದರಿಂದ ರೈತರು ಆತಂಕಪಡಬೇಕಿಲ್ಲ’ ಎಂದು ಸಹಾಯಕ ಕೃಷಿ ನಿರ್ದೇಶಕ ಮಹ್ಮದ್ ಆಶ್ರಫ್ ಹೇಳಿದರು.

‘ಈ ರೋಗದ ಬಗ್ಗೆ ಅಧ್ಯಯನ ನಡೆಸಿ, ಪರಿಹಾರಗಳನ್ನು ಕಂಡುಕೊಳ್ಳಲು ರಾಯಚೂರು ಕೃಷಿ ವಿಶ್ವವಿದ್ಯಾಯಲಯದ ಸೂರ್ಯಕಾಂತಿ ಬೆಳೆಯ ತಜ್ಞರಿಗೆ ಪತ್ರ ಬರೆಯುತ್ತಿದ್ದು, ಅವರನ್ನು ಆಹ್ವಾನಿಸಿ ರೈತರಿಗೆ ಮಾಹಿತಿ ಕೊಡಿಸುತ್ತೇವೆ’ ಎಂದು ತಿಳಿಸಿದರು. ಕೀಟತಜ್ಞ ಕಿರಣಕುಮಾರ್ ಇದ್ದರು.

ಸೋಮವಾರದ ‘ಪ್ರಜಾವಾಣಿ’ಯಲ್ಲಿ ‘ಸೂರ್ಯಕಾಂತಿ ಬೆಳೆಗೆ ರೋಗ : ರೈತರ ಆತಂಕ’ ವರದಿ ಪ್ರಕಟವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT