ತೆಕ್ಕಲಕೋಟೆ: ಸಮೀಪದ ದರೂರು ಗ್ರಾಮದಲ್ಲಿ ಸೂಫಿ ಸಂತ ಹಜರತ್ ಹೊನ್ನೂರುವಲಿ ಅವರ 85ನೇ ವರ್ಷದ ಉರುಸ್ ಕಾರ್ಯಕ್ರಮ ಮಂಗಳವಾರ ಅದ್ದೂರಿಯಾಗಿ ಜರುಗಿತು.

ಉರುಸ್ ನಿಮಿತ್ತ ಬೆಳಗಿನ ಜಾವ ಗಂಧವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ‘ಸಂದಲ್’ ಮೆರವಣಿಗೆಯಲ್ಲಿ ಸ್ಥಳೀಯ ಜಾನಪದ ತಂಡಗಳಾದ ಡೊಳ್ಳು ಕುಣಿತ, ತಾಷ ತಮಟೆ ವಾದನ ಮೂಲಕ ಸರ್ವ ಧರ್ಮಿಯರು ಸೇರಿ ಮೆರವಣಿಗೆಯ ಮೂಲಕ ದರ್ಗಾಕ್ಕೆ ತಲುಪಿಸಿದರು.

ನಂತರ ಬೆಳಿಗ್ಗೆ 10 ಗಂಟೆಗೆ ಸಜ್ಜಾದೆ ನರ್ಷೀನ್ ಬಿ. ಹಸನ್ ಸಾಬ್ ದಾದ ಅವರಿಗೆ ಯಲ್ಲಾಪುರದ ಮೌಲಾಬಿ ಆಲಂಭಾಕ್ಷಿಸಾಬ್ ಕುಟುಂಬದವರು 55ನೇ ತುಲಾಭಾರ (ನಾಣ್ಯ) ಸೇವೆ ಸೇರಿದಂತೆ ಒಟ್ಟು 6 ಜನ ಭಕ್ತರು ತುಲಾಭಾರ ನಡೆಸಿಕೊಟ್ಟರು. ಉರುಸ್ ಪ್ರಯುಕ್ತ ದರ್ಗಾವು ವಿದ್ಯುತ್ ದೀಪಗಳ ಅಲಂಕಾರದಿಂದ ಝಗಮಗಿಸಿತು.

ಹಿಂದೂ– ಮುಸ್ಲಿಮರು ಸಾವಿರಾರು ಸಂಖ್ಯೆಯಲ್ಲಿ ಬಂದು ಧಾರ್ಮಿಕ ಕಾರ್ಯ ನೆರವೇರಿಸಿ ಭಾವೈಕ್ಯ ಮೆರೆದರು. ತಮ್ಮ ಇಷ್ಟಾರ್ಥ ಈಡೇರಿದವರು ಹರಕೆ ತೀರಿಸಿ ಭಕ್ತಿ ಸಮರ್ಪಿಸಿದರು.

‘ಇಲ್ಲಿ ಯಾವುದೇ ಜಾತಿ, ಮತ ಭೇದವಿಲ್ಲದೆ ಸರ್ವಧರ್ಮೀಯರು ಭಾಗವಹಿಸಿ ಉರುಸ್ ಆಚರಿಸುತ್ತಾರೆ. ಈ ಪರಂಪರೆಯು ಸರ್ವಧರ್ಮ ಸಮಭಾವಕ್ಕೆ ಮಾದರಿ’ ಎಂದು ರಾಜ್ಯ ಪಿಂಜಾರ್ ನದಾಫ್ ಸಂಘದ ರಾಜ್ಯ ಕಾರ್ಯದರ್ಶಿ ಅಲ್ಲಾಭಕ್ಷಿ ತಿಳಿಸಿದರು.

ಉರುಸ್ ಅಂಗವಾಗಿ ಬಳ್ಳಾರಿ, ಹುಬ್ಬಳ್ಳಿ, ಕೊಪ್ಪಳ ಜಿಲ್ಲೆಗಳಿಂದ, ಸುತ್ತಲಿನ ಗ್ರಾಮಗಳಾದ ಕರೂರು, ದರೂರು, ಎಚ್ ಹೊಸಹಳ್ಳಿ, ಸಿರಿಗೇರಿ, ಬಲಕುಂದಿಗಳಿಂದ ಭಕ್ತರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-25-22626354

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.