ಬಳ್ಳಾರಿ: ಜನಗಣತಿ 2027 ಅಂಗವಾಗಿ ಏ.1ರಿಂದ ಆರಂಭವಾಗಿದ್ದ ಡಿಜಿಟಲ್ ಸ್ವಯಂ ಗಣತಿ ಬುಧವಾರ (ಏಪ್ರಿಲ್ 15) ಅಂತ್ಯವಾಗಿದ್ದು, ಶೇ 18.33 ಸಾಧನೆಯೊಂದಿಗೆ ಬಳ್ಳಾರಿ ಜಿಲ್ಲೆ ಪ್ರಥಮ ಸ್ಥಾನದಲ್ಲಿ ಸ್ಥಿತವಾಗಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 2,98,536 ಕುಟುಂಬಗಳ ಪೈಕಿ 54,735 ಕುಟುಂಬಗಳು ಸ್ವಯಂ ಗಣತಿಯಲ್ಲಿ ಪಾಲ್ಗೊಂಡಿವೆ.

ಬುಧವಾರ ಸಂಜೆ 6ರ ಹೊತ್ತಿಗೆ ರಾಜ್ಯದ ಒಟ್ಟು ಪ್ರಗತಿ ಕೇವಲ ಶೇ 4.80 ಆಗಿದೆ. ಜಿಲ್ಲಾವಾರು ಪ್ರಗತಿಯಲ್ಲಿ ಬಳ್ಳಾರಿ ನಂತರದ ಸ್ಥಾನದಲ್ಲಿ ಸ್ಥಾನದಲ್ಲಿ ದಕ್ಷಿಣ ಕನ್ನಡ (16.78), ಬಾಗಲಕೋಟೆ (16.08) ಮತ್ತು ವಿಜಯನಗರ (11.38) ಜಿಲ್ಲೆಗಳು ಮುಂದಿವೆ. ತುಮಕೂರು (10.48) ಟಾಪ್ 5ರಲ್ಲಿ ಸ್ಥಾನ ಪಡೆದಿದೆ. ಹಲವು ಜಿಲ್ಲೆಗಳು ಹಿಂದುಳಿದಿವೆ. ಕೋಲಾರ (ಶೇ1.12), ಬೆಂಗಳೂರು ನಗರ (ಶೇ1.42), ಬೆಳಗಾವಿ (ಶೇ1.57), ಚಿಕ್ಕಬಳ್ಳಾಪುರ (ಶೇ1.57) ಜಿಲ್ಲೆಗಳಲ್ಲಿ ಕಡಿಮೆ ಪ್ರಗತಿ ದಾಖಲಾಗಿದೆ. ರಾಜ್ಯದ ದೊಡ್ಡ ನಗರವಾದ ಬೆಂಗಳೂರಲ್ಲಿ ಕಡಿಮೆ ಪ್ರಮಾಣದ ನೋಂದಣಿಯಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-25-454662481

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.