ತೆಕ್ಕಲಕೋಟೆ: ‘ನಾಯಿ ಕಡಿತದಿಂದ ಮನುಷ್ಯರಲ್ಲಿ ರೇಬಿಸ್ ಕಾಯಿಲೆ ಬರುವ ಸಾಧ್ಯತೆ ಇರುತ್ತದೆ. ರೇಬಿಸ್ ಕಾಯಿಲೆಗೆ ಒಳಗಾದ ವ್ಯಕ್ತಿ ಬೆಳಕು ಹಾಗೂ ನೀರು ನೋಡಿದಾಗ ಭಯ ಬೀಳುವ ಲಕ್ಷಣಗಳು ಕಂಡುಬರುತ್ತವೆ. ಕಡಿತಕ್ಕೆ ಒಳಗಾದವರು ತಕ್ಷಣವೇ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳಿ’ ಎಂದು ತಾಲ್ಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮೊಹಮ್ಮದ್ ಖಾಸಿಂ ಹೇಳಿದರು.

ಸಮೀಪದ ಬಾಗೇವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಹಳೆಕೋಟೆ ಗ್ರಾಮ ಪಂಚಾಯಿತಿಯಲ್ಲಿ ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣ ಘಟಕ ಸಹಯೋಗದಲ್ಲಿ ನಾಯಿ ಮತ್ತು ಹಾವು ಕಡಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ನಾಯಿ ಅಥವಾ ಹಾವು ಕಡಿದಾಗ ಮೂಢನಂಬಿಕೆಗೆ ಒಳಗಾಗಿ ಅರಿಸಿಣ ಹಚ್ಚುವುದು, ಸುಡುವುದು, ಎಲೆಯ ರಸ ಹಿಂಡುವುದು ಮಾಡಬಾರದು. ಪ್ರಥಮ ಚಿಕಿತ್ಸೆಯಾಗಿ ನಾಯಿ ಕಚ್ಚಿದ ಜಾಗವನ್ನು ಸೋಪ್ ಹಚ್ಚಿ ನಲ್ಲಿಯ ನೀರಿನಿಂದ ಅರ್ಧ ಗಂಟೆಯವರೆಗೆ ತೊಳೆಯಬೇಕು. ನಂತರ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು’ ಎಂದು ಕ್ಷೇತ್ರ ಸಾಂಕ್ರಾಮಿಕ ರೋಗ ನಿರ್ವಾಹಕ ನವೀನ್ ತಿಳಿಸಿದರು.

ಯುವ ಸ್ಪಂದನ ಅಧ್ಯಕ್ಷ ಹಳೆಕೋಟೆ ಖಾಸಿಂ ಮಾತನಾಡಿದರು. ಆರೋಗ್ಯ ನಿರೀಕ್ಷಣಾಧಿಕಾರಿ ಬಸವರಾಜ, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಅಳ್ಳಮ್ಮ, ಸಮುದಾಯ ಆರೋಗ್ಯ ಅಧಿಕಾರಿ ರೇಣುಕಾ, ಶಿಕ್ಷಕರು ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-25-2021722663

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.