ಬಳ್ಳಾರಿ: ಬಳ್ಳಾರಿಯ 100 ಹಾಸಿಗೆಗಳ ಇಎಸ್ಐ ಆಸ್ಪತ್ರೆಗೆ ನಿರ್ಮಾಣಕ್ಕೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಹಾಗೂ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಡಾ.ಮನ್ಸುಖ್ ಮಾಂಡವಿಯ ಭಾನುವಾರ ದೊಡ್ಡಬಳ್ಳಾಪುರದ ಮೂಲಕ ವರ್ಚುವಲ್ ಆಗಿ ಅಡಿಗಲ್ಲು ಹಾಕಿದರು.

ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣವಾಗಿರುವ 100 ಹಾಸಿಗೆಗಳ ಇಎಸ್ಐ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿಯೇ ಬಳ್ಳಾರಿಯ ಇಎಸ್ಐ ಆಸ್ಪತ್ರೆಗೂ ಅಡಿಗಲ್ಲು ಹಾಕಲಾಗಿದೆ.

ಮನ್ಸೂಕ್ ಮಾಡಂವಿಯಾ ಅವರೊಂದಿಗೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಹಾಗೂ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯ ಡಾ.ಕೆ.ಸುಧಾಕರ್, ಇಎಸ್ಐನ ಮೆಡಿಕಲ್ ಕಮಿಷನರ್ ಡಾ.ಆರ್.ಶ್ರೀ ನಿವಾಸ್ ಶಿಲಾನ್ಯಾಸ ನರವೇರಿ ಸಿದರು.

ಬಳ್ಳಾರಿಯಲ್ಲಿ 100 ಹಾಸಿಗೆಗಳ ಇಎಸ್ಐ ಆಸ್ಪತ್ರೆ ನಿರ್ಮಾಣಕ್ಕೆ ಶಿಲಾ ನ್ಯಾಸ ನೆರವೇರಿಸುತ್ತಿರುವುದಕ್ಕೆ ಸಂತೋಷವಾಗಿದೆ. ಕಾರ್ಮಿಕರಿಗೆ ಸಾಮಾ ಜಿಕ ಭದ್ರತೆ ಒದಗಿಸುವ ಭಾಗ ವಾಗಿ ಆಸ್ಪತ್ರೆ ನಿರ್ಮಾಣ ಮಾಡಲಾಗು ತ್ತಿದೆ. ಕಾರ್ಮಿಕರ ಕಲ್ಯಾಣವೇ ಮೋದಿ ಸರ್ಕಾರದ ಸಂಕಲ್ಪ’ ಎಂದು ಸಚಿವ ಮನ್ಸುಕ್ ಮಾಂಡವಿಯ ತಿಳಿಸಿದರು.

ಬಳ್ಳಾರಿಗೆ ಇಎಸ್ಐ ಆಸ್ಪತ್ರೆ ನೀಡಿದ್ದಕ್ಕೆ ಸಚಿವ ಮನ್ಸುಕ್ ಅವರನ್ನು ಅಭಿನಂದಿಸುವುದಾಗಿ ಸಚಿವೆ ಶೋಭಾ ಕರಂದ್ಲಾಜೆ ಸಮಾರಂಭದಲ್ಲಿ ಹೇಳಿದರು. ಆಸ್ಪತ್ರೆ ನಿರ್ಮಾಣವಾದರೆ, ಸುಮಾರು 64,000 ಕಾರ್ಮಿಕರು ಮತ್ತು ಅವರ ಕುಟುಂಬಗಳ ವೈದ್ಯಕೀಯ ಅಗತ್ಯಗಳನ್ನು ಪೂರೈಸಲಿದೆ. ಬಳ್ಳಾರಿ ವಿಭಾಗದ 2 ಲಕ್ಷ ಫಲಾನುಭವಿಗಳಿಗೆ ಪ್ರಯೋಜನವಾಗಲಿದೆ.

ಪ್ರಸ್ತಾವಿತ ಇಎಸ್ಐಸಿ ಆಸ್ಪತ್ರೆಯನ್ನು 5.21 ಎಕರೆ ಗಳಲ್ಲಿ ₹150 ಕೋಟಿ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಆಸ್ಪತ್ರೆ ನಿರ್ಮಾಣಕ್ಕೆ ಬೆಳಗಲ್ ರಸ್ತೆಯಲ್ಲಿ ಭೂಮಿ ನೀಡಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-25-646635255

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.