ಬಳ್ಳಾರಿ: ಹೈದರಾಬಾದ್ ಮೂಲದ ದಂಪತಿಗೆ ಉಡುಪಿ ಮೂಲದ ವ್ಯಕ್ತಿಯೊಬ್ಬ ಬಳ್ಳಾರಿಯಲ್ಲಿ ನಕಲಿ ಚಿನ್ನ ನೀಡಿ ₹10 ಲಕ್ಷ ಪಡೆದು ವಂಚಿಸಿದ್ದಾನೆ.

ಬಳ್ಳಾರಿಯ ಮಂಗಮ್ಮ ಕ್ಯಾಂಪ್ ಬಳಿ ಘಟನೆ ನಡೆದಿದ್ದು, ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ. ಹೈದರಾಬಾದ್ ಮೂಲದ ಅಬ್ದುಲ್ ರೆಹಮಾನ್ ಮತ್ತು ನಿರೋಷಾ ದಂಪತಿ ವಂಚನೆಗೊಳಗಾದವರು.

ಮಾರ್ಚ್ 5ರಂದು ಉಡುಪಿ ಮೂಲದ ರಮೇಶ್ ಎಂಬ ವ್ಯಕ್ತಿ ದಂಪತಿಗೆ ಕರೆ ಮಾಡಿ, ನಮ್ಮ ಹೊಲದಲ್ಲಿ ಬಂಗಾರದ ನಾಣ್ಯಗಳು ಸಿಕ್ಕಿವೆ. ಅವುಗಳನ್ನು ಮಾರುತ್ತಿರುವುದಾಗಿ ದಂಪತಿಗೆ ಹೇಳಿದ್ದ. ಮೊದಲು ಒಂದು ಅಸಲಿ ಬಂಗಾರ ನಾಣ್ಯ ನೀಡಿ ದಂಪತಿಯನ್ನು ನಂಬಿಸಿದ್ದಾನೆ. ಮಾರ್ಚ್ 13ರಂದು ರಾತ್ರಿ 10ರ ಸುಮಾರಿಗೆ ಬಳ್ಳಾರಿಯ ಮಂಗಮ್ಮ ಕ್ಯಾಂಪ್ ಬಳಿ 450 ನಾಣ್ಯಗಳನ್ನು ನೀಡುವುದಾಗಿ ದಂಪತಿಯನ್ನು ಕರೆಸಿಕೊಂಡಿದ್ದಾನೆ. ದಂಪತಿ ₹10 ಲಕ್ಷ ಹಣ ನೀಡಿ ನಾಣ್ಯಗಳನ್ನು ಖರೀದಿ ಮಾಡಿದ್ದಾರೆ.

ನಾಣ್ಯಗಳನ್ನು ಪರೀಕ್ಷಿಸಲು ಮುಂದಾದಾಗ ಆರೋಪಿ ರಮೇಶ್ ಮತ್ತು ಆತನ ಸಹಚರರು ಅಲ್ಲಿಂದ ಪರಾರಿಯಾಗಿದ್ದಾರೆ. ಆ ನಾಣ್ಯಗಳು ನಕಲಿ ಎಂದು ತಿಳಿದ ದಂಪತಿಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-25-303407093

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.