ಕುಡತಿನಿ (ಬಳ್ಳಾರಿ ಜಿಲ್ಲೆ): ಕೈಗಾರಿಕೆ ಸ್ಥಾಪಿಸಲು ಸ್ವಾಧೀನಪಡಿಸಿಕೊಂಡ ಕೃಷಿ ಜಮೀನನ್ನು ಅನ್ಯ ಕಂಪನಿಗೆ ನೀಡಿದ್ದನ್ನು ಖಂಡಿಸಿ ನೂರಾರು ಭೂಸಂತ್ರಸ್ತ ರೈತರು ಶನಿವಾರ, ಲಕ್ಷ್ಮಿಮಿತ್ತಲ್ ಕಂಪನಿಯ ಜಮೀನಿಗೆ ಎತ್ತಿನ ಗಾಡಿಗಳ ಮೂಲಕ ನುಗ್ಗಲು ಯತ್ನಿಸಿದರು. ಆಗ ರೈತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ, ನೂಕಾಟ ಉಂಟಾಯಿತು.

ಪಟ್ಟಣದ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದರು. ರೈತರು, ಬೇರೆ ಮಾರ್ಗದಿಂದ ಜಮೀನಿಗೆ ನುಗ್ಗಲು ಯತ್ನಿಸಿದಾಗ ತಡೆಯಲು ಪೊಲೀಸರು ಹರಸಾಹಸಪಟ್ಟರು. ಈ ಸಂದರ್ಭದಲ್ಲಿ ಎತ್ತಿನಗಾಡಿಯೊಂದು ರಸ್ತೆಯಲ್ಲಿ ಬಿತ್ತು. ಮತ್ತೊಂದು ಎತ್ತಿನ ಗಾಡಿ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಹೊರಳಿತು.

ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಯು. ಬಸವರಾಜ ಅವರು, ‘ಲಕ್ಷ್ಮಿ ಮಿತ್ತಲ್ ಕಂಪನಿ ಮಾಲೀಕತ್ವದ ಕೈಗಾರಿಕೆ ಸ್ಥಾಪಿಸಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯವರು ಸುಮಾರು 5 ಸಾವಿರ ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡಿದ್ದರು. ಅದರಲ್ಲಿ 800 ಎಕರೆ ಜಮೀನಿನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸದೆ ಜಿಂದಾಲ್ ಕಂಪನಿಗೆ ಭೂಮಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿರುವುದು ಖಂಡನೀಯ’ ಎಂದರು.

ರೈತರನ್ನು ಪೊಲೀಸರು ವಶಕ್ಕೆ ಪಡೆದರು. ವಿವಿಧ ಸಂಘಟನೆಗಳ ಮುಖಂಡರಾದ ಸತ್ಯಬಾಬು, ಜಂಗ್ಲಿಸಾಬ್, ಎಂ. ತಿಪ್ಪೇಸ್ವಾಮಿ, ವಿ. ರಾಜಶೇಖರ್, ವಿ.ಎಸ್. ವೆಂಕಟರಮಣ ಬಾಬು, ತಿಮ್ಮಪ್ಪ, ಬಾವಿ ಶಿವಕುಮಾರ್, ಸಿದ್ದಪ್ಪ, ಮಲ್ಲಯ್ಯ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-51-732943034

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.