ಕಂಪ್ಲಿ: ತಾಲ್ಲೂಕಿನ ಕೊಳವೆಬಾವಿ ಮತ್ತು ಪಂಪ್ಸೆಟ್ ಆಧಾರಿತ ಹೊಲಗಳಲ್ಲಿ ನೂರಾರು ರೈತರು ಪೂರ್ವ ಮುಂಗಾರಿಗೆ ಬೆಳೆದಿರುವ ಹತ್ತಿ, ಸೂರ್ಯಕಾಂತಿ, ಮೆಕ್ಕಜೋಳ ಪೈರಿಗೆ ಮಾರುಕಟ್ಟೆಯಲ್ಲಿ ಸಕಾಲಕ್ಕೆ ರಸಗೊಬ್ಬರ ದೊರೆಯದೆ ಬೆಳೆ ಕುಂಠಿತವಾಗಿದೆ.

ಕೃಷಿ ಇಲಾಖೆಯವರು ರಸಗೊಬ್ಬರ ಅಂಗಡಿ ಮಾಲೀಕರಿಗೆ ಮುಂದಿನ ಆದೇಶ ದವರೆಗೆ ಯಾವುದೇ ರಸಗೊಬ್ಬರ ಮಾರಾಟ ಮಾಡಬಾರದು ಎಂದು ನೋಟಿಸ್ ನೀಡಿರುವುದೇ ಸದ್ಯದ ಬಿಕ್ಕಟ್ಟಿಗೆ ಕಾರಣ ಎನ್ನಲಾಗಿದೆ.

‘ಒಂದು ತಿಂಗಳ ಹಿಂದೆ ಬಿತ್ತನೆ ಮಾಡಿದ ಬಿಟಿ ಹತ್ತಿಗೆ ಇಲ್ಲಿಯವರೆಗೆ ಎಕರೆಗೆ ₹ 17,000 ವೆಚ್ಚ ಮಾಡಿ ದ್ದೇನೆ. ಸದ್ಯ ಯೂರಿಯಾ, ಡಿಎಪಿ, 20:20: 0:13 ರಸಗೊಬ್ಬರ ಅಗತ್ಯವಿದೆ. ಅದ ಕ್ಕಾಗಿ ಬಳ್ಳಾರಿ, ಸಿರುಗುಪ್ಪ, ಗಂಗಾವತಿ, ಕಂಪ್ಲಿ ಸೇರಿದಂತೆ ವಿವಿಧ ರಸಗೊಬ್ಬರ ವ್ಯಾಪಾರಿಗಳ ಅಂಗಡಿಗಳನ್ನು ಬಿರು ಬಿಸಿಲು ಲೆಕ್ಕಿಸದೆ ಎರಡು ದಿನದಿಂದ ಅಲೆಯುತ್ತಿದ್ದರೂ ನಮ್ಮ ಬೆವರ ಹನಿಗೆ ಫಲ ಸಿಕ್ಕಿಲ್ಲ’ ಎಂದು ತಾಲ್ಲೂಕಿನ ರೆಗ್ಯುಲೇಟರ್ ಕ್ಯಾಂಪ್ನ ರೈತ ಎಚ್. ವೀರೇಶ್ ಅಳಲು ವ್ಯಕ್ತಪಡಿಸಿದರು.

‘₹ 1,430ರಿಂದ ₹ 1,450ಕ್ಕೆ ದೊರೆ ಯುತ್ತಿದ್ದ 20:20:0:13 ಒಂದು ಚೀಲ ರಸಗೊಬ್ಬರ ಇಂದು ಕಾಳ ಸಂತೆಯಲ್ಲಿ ₹ 1,750ರಿಂದ ₹ 1,800ಕ್ಕೆ ಮಾರಾಟವಾಗುತ್ತಿದೆ. ಆದರೂ ಗೊಬ್ಬರ ಸಿಗುತ್ತಿಲ್ಲ’ ಎಂದು ಇನ್ನು ಕೆಲ ರೈತರು ಬೇಸರದಿಂದ ತಿಳಿಸಿದರು. ‘ಒಂದು ವಾರದಲ್ಲಿ ಅಗತ್ಯ ರಸಗೊಬ್ಬರ ದೊರೆಯದಿದ್ದಲ್ಲಿ ಹತ್ತಿ ಬೆಳೆ ಹಾಳಾಗಿ ನಷ್ಟ ಹೊಂದುವುದು ಗ್ಯಾರಂಟಿ’ ಎಂದು ರೈತ ಗೋವಿಂದಪ್ಪ ದುರುಗಪ್ಪ ಅಸಮಾಧಾನದಿಂದ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-25-1300455665

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.