ಬಳ್ಳಾರಿ: ಸರ್ಕಾರಿ ಜಮೀನಿನ ಪಹಣಿ ಮಾಡಿಸಿಕೊಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಹಿರೇಹಡ್ಲಿಗಿ ಗ್ರಾಮದ ಹೇಮಂತ ಎಂಬಾತ ಕುರುಗೋಡು ತಾಲ್ಲೂಕಿನ ಸೋಮಸಮುದ್ರದ 7.96 ಎಕರೆ ಸರ್ಕಾರಿ ಜಮೀನನ್ನು ರಾಮಣ್ಣ ಮತ್ತು ಗಂಗಣ್ಣ ಎಂಬುವವರ ಹೆಸರಿಗೆ ಮಾಡಿಸಿಕೊಡುವುದಾಗಿ ನಂಬಿಸಿ ವಂಚಿಸಿದ್ದಾನೆ.

ಈ ಕೆಲಸಕ್ಕಾಗಿ ಉಪ ವಿಭಾಗಾಧಿಕಾರಿಗೆ (ಎ.ಸಿ) ಹಣ ನೀಡಬೇಕೆಂದು ಹೇಳಿ ₹13 ಲಕ್ಷ ಹಾಗೂ ಅಗ್ರಿಮೆಂಟ್ಗಾಗಿ ₹2 ಲಕ್ಷ ಸೇರಿ ಒಟ್ಟು ₹15 ಲಕ್ಷ ವಂಚಿಸಿದ್ದಾನೆ. ವಂಚನೆಗೆ ಪುಷ್ಠಿ ನೀಡಲು ಅಧಿಕಾರಿಗಳ ಹೆಸರಿನಲ್ಲಿ ನಕಲಿ ಪತ್ರಗಳು, ನಕಲಿ ಸಹಿ ಹಾಗೂ ನಕಲಿ ಅಂಚೆ ಲಕೋಟೆಗಳನ್ನು ಸೃಷ್ಟಿಸಿದ್ದ ಹೇಮಂತ ಎಂಬಾತ ಸೃಷ್ಟಿ ಮಾಡಿದ್ದ ಎನ್ನಲಾಗಿದೆ.

ಈ ಬಗ್ಗೆ ಬಂದ ದೂರು ಪರಿಗಣಿಸಿದ ಎ.ಸಿ ರಾಜೇಶ ಎಚ್.ಡಿ, ಕಚೇರಿಯಲ್ಲಿ ಪರಿಶೀಲಿಸಿದಾಗ ಇವೆಲ್ಲವೂ ನಕಲಿ ಎಂದು ದೃಢಪಟ್ಟಿದೆ. ‘ಅಧಿಕಾರಿಗಳ ಹೆಸರು ದುರುಪಯೋಗಪಡಿಸಿಕೊಂಡು ಸಾರ್ವಜನಿಕರನ್ನು ಮೋಸಗೊಳಿಸಿರುವ ಹೇಮಂತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಬಳ್ಳಾರಿ ರಾಜೇಶ ಎಚ್.ಡಿ ಬ್ರೂಸ್ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-25-1236661161

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.