ಬಳ್ಳಾರಿ: ಬಳ್ಳಾರಿ ನಗರದಲ್ಲಿ ಮಂಗಳವಾರ ಒಂದೇ ದಿನ 6.01 ಸೆಂಟಿಮೀಟರ್ ಮಳೆ ಸುರಿದಿರುವುದಾಗಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಬಳ್ಳಾರಿ ಘಟಕ ಮಾಹಿತಿ ನೀಡಿದೆ.

ಬಳ್ಳಾರಿ ತಾಲ್ಲೂಕಿನಲ್ಲಿ 1.93, ಸಂಡೂರು– 0.2, ಕಂಪ್ಲಿ – 0.15, ಸಿರುಗುಪ್ಪ – 0.1, ಕುರುಗೋಡು –0.18 ಸೆಂ.ಮೀ ಮಳೆಯಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಸರಾಸರಿ 1.96 ಸೆಂ.ಮೀ ವರ್ಷಧಾರೆಯಾಗಿದೆ ಎಂದು ತಿಳಿದು ಬಂದಿದೆ.

ಮಂಗಳವಾರ ಮಧ್ಯಾಹ್ನ 2.45ರಿಂದ 4 ಗಂಟೆಯ ನಡುವಿನ ಅವಧಿಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ 22 ಬಾರಿ ಸಿಡಿಲು ಬಿದ್ದಿದೆ. ಆದರೆ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಗೊತ್ತಾಗಿದೆ.

ಈ ಮಳೆಯ ಕಾರಣಕ್ಕೆ ನಗರದಲ್ಲಿ 75 ವಿದ್ಯುತ್ ಕಂಬಗಳು, 12 ಟ್ರಾನ್ಸ್ಫಾರ್ಮರ್ಗಳು, 2 ಕಿ.ಮೀಯಷ್ಟು ವಿದ್ಯುತ್ ತಂತಿ, 128 ಮರಗಳು ಧರೆಗುರುಳಿವೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ಅಂದಾಜಿಸಿದೆ.

ಬಿರುಗಾಳಿಗೆ ಸಂಡೂರು ತಾಲ್ಲೂಕಿನಲ್ಲಿ ಒಂದು ಮನೆಯ ಚಾವಣಿ ಹಾರಿಹೋಗಿದೆ. ಬಳ್ಳಾರಿಯಲ್ಲೂ ಎರಡು ಮನೆಗಳಿಗೆ ಹಾನಿಯಾಗಿದೆ ಎನ್ನಲಾಗಿದ್ದು, ನಿಖರ ಮಾಹಿತಿ ಸಿಕ್ಕಿಲ್ಲ.

ಬಳ್ಳಾರಿ ನಗರದ ಹಲವು ಭಾಗಗಳಲ್ಲಿ ಮಂಗಳವಾರ ಮಧ್ಯಾಹ್ನದಿಂದಲೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಜೆಸ್ಕಾಂಗೆ ಸರಣಿ ದೂರುಗಳು ಬರುತ್ತಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹಲವು ಪ್ರದೇಶಗಳಲ್ಲಿ ಮಂಗಳವಾರ ಇಡೀ ರಾತ್ರಿ ವಿದ್ಯುತ್ ಪೂರೈಕೆಯಾಗದೇ ಜನ ಪರಿತಪಿಸಿದ್ದಾರೆ.

‘ಬುಧವಾರ ಸಂಜೆ ಹೊತ್ತಿಗೆ 3 ಪರಿವರ್ತಕ (ಟಿ.ಸಿ)ಗಳನ್ನು ಬದಲಿಸಿದ್ದೇವೆ. ಕ್ರೇನ್ಗಳನ್ನು ಬಾಡಿಗೆ ಪಡೆದು 15 ಟಿ.ಸಿಗಳನ್ನು ಬದಲಿಸುತ್ತಿದ್ದೇವೆ. ರಾತ್ರಿ ಹೊತ್ತಿಗೆ ಎಲ್ಲ ಕಡೆ ವಿದ್ಯುತ್ ಸರಾಗ ಸರಬರಾಜು ಆಗಲಿದೆ’ ಎಂದು ಜೆಸ್ಕಾಂನ ಕಾರ್ಯನಿರ್ವಾಹಕ ಎಂಜಿನಿಯರ್ ಹುಸೇನ್ ಸಾಬ್ ‘ಪ್ರಜಾವಾಣಿ’ಗೆ ತಿಳಿಸಿದರು.

ಮಳೆ ಕಾರಣಕ್ಕೆ ಜಿಲ್ಲೆಯ ಅಲ್ಲಲ್ಲಿ ತೋಟಗಾರಿಕೆ ಬೆಳೆಗೆ ಹಾನಿಯಾಗಿದೆ ಎಂದು ಹೇಳಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಶ್ರೀಕಾಂತ ಕೋಟೆಮನೆ, ‘ಮಳೆಯಿಂದಾಗಿ ಆಗಿರುವ ತೋಟಗಾರಿಕೆ ಬೆಳೆ ಹಾನಿಯ ಸರ್ವೆ ಕಾರ್ಯ ನಡೆಯುತ್ತಿದೆ. ಎರಡು ದಿನಗಳಲ್ಲಿ ಸಂಪೂರ್ಣ ಮಾಹಿತಿ ಸಿಗಲಿದೆ’ ಎಂದು ಹೇಳಿದರು.

ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿರುವ ಮನೆಗಳು ಮಾತ್ರವಲ್ಲದೇ ಸರ್ಕಾರಿ ಕಚೇರಿಗಳಿಗೂ ನೀರು ನುಗ್ಗಿದ್ದು, ಕಡತಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-25-458259514

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.