ಬಳ್ಳಾರಿ: ಕೀಲಿ ಹಾಕಿದ ಮನೆಗಳ ಕಳ್ಳತನ ಕೃತ್ಯಗಳನ್ನು ನಿಯಂತ್ರಿಸಲು ಸಾರ್ವಜನಿಕರ ಸಹಭಾಗಿತ್ವದಲ್ಲಿ ಪೊಲೀಸ್ ಇಲಾಖೆಯು ಬೀಗ ಹಾಕಿದ ಮನೆ ಗಸ್ತು ವ್ಯವಸ್ಥೆ (ಎಲ್ಎಚ್ಬಿಎಸ್) ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿದೆ.

ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಬೀಗ ಹಾಕಿದ, ಯಾರೂ ಇಲ್ಲದ ಮನೆಗಳಿಗೆ ಕಳ್ಳರು ಕನ್ನ ಹಾಕುವ ಪ್ರಕರಣಗಳು ಜರುಗುತ್ತವೆ. ಅದರಲ್ಲೂ ಹಬ್ಬ-ಹರಿದಿನ, ಮದುವೆ ಸಮಾರಂಭಗಳು, ಬೇಸಿಗೆ ರಜಾ ಅವಧಿಯಲ್ಲಿ ಹೆಚ್ಚು. ಅದಕ್ಕಾಗಿ ನೂತನ ವ್ಯವಸ್ಥೆ ಪರಿಚಯಿಸಿದೆ.

ಸಾರ್ವಜನಿಕರು ಏನುಮಾಡಬೇಕು?: ಸಾರ್ವಜನಿಕರು ತಮ್ಮ ಮನೆಗಳಿಗೆ ಕೀಲಿ ಹಾಕಿಕೊಂಡು ಹೋಗುವಾಗ ಜಿಲ್ಲಾ ಪೊಲೀಸ್ ಇಲಾಖೆಯ ವಾಟ್ಸ್ಆ್ಯಪ್ ಸಂಖ್ಯೆಗೆ (94808 03083) ಮಾಹಿತಿ ನೀಡಬೇಕು. ಹೆಸರು, ಮನೆಯ ವಿಳಾಸ, ಮನೆಯ ಜಿಪಿಎಸ್ ವಿವರ, ಮನೆಯ ಪೋಟೋ, ಮನೆಯಿಂದ ಹೊರ ಹೋಗುವ ವಿಷಯ ಒಳಗೊಂಡಿರಬೇಕು.

‘ಮನೆಗಳ ಕುರಿತ ಮಾಹಿತಿಯು ಸಂಬಂಧಪಟ್ಟ ಠಾಣೆಗೆ ಮಾಹಿತಿ ರವಾನೆ ಆಗುತ್ತದೆ. ಬೀಟ್ ಸಿಬ್ಬಂದಿ ಮನೆಗಳ ಮೇಲೆ ನಿಗಾ ಇರಿಸುವರು. ಗೋಪ್ಯತೆ ಕಾಪಾಡುವರು. ಬೀಟ್ ಪೊಲೀಸ್ ಸಿಬ್ಬಂದಿ ಮನೆಗಳ ಸುತ್ತಮುತ್ತ ಗಸ್ತು ತಿರುಗುವರು. ಅನುಮಾನಾಸ್ಪದ ವ್ಯಕ್ತಿಗಳ ಚಲನವಲನ ಕಂಡುಬಂದರೆ ತಕ್ಷಣ ಕ್ರಮಕೈಗೊಳ್ಳಲಾಗುತ್ತದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ಮನೆ ಖಾಲಿ ಇರುವ ಮಾಹಿತಿ ನೀಡಿದ ಬಳಿಕ ಸಂಬಂಧಪಟ್ಟ ಬೀಟ್ ಅಧಿಕಾರಿಗಳು ಮನೆ ಮಾಲೀಕರೊಂದಿಗೆ ಸಂಪರ್ಕದಲ್ಲಿ ಇರುತ್ತಾರೆ. ಅಗತ್ಯವಿದ್ದರೆ ತುರ್ತು ಮಾಹಿತಿ ನೀಡುತ್ತಾರೆ. ಕೆಲ ಪ್ರದೇಶಗಳಲ್ಲಿ ಪೊಲೀಸ್ ವಾಹನಗಳ ಮೂಲಕ ರಾತ್ರಿ ಪಹರೆ ಹೆಚ್ಚಿಸುವ ಯೋಜನೆಯೂ ಇದೆ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-25-966942136

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.