ಬಳ್ಳಾರಿ: ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು ಪತಿಯು ಕೊಲೆ ಮಾಡಿದ ಘಟನೆ ನಗರದಲ್ಲಿ ನಡೆದಿದೆ. ಕೌಲ್ ಬಜಾರ್ ನಿವಾಸಿ ಆಫ್ರೀನ್ ಬಾನು (21) ಕೊಲೆಯಾದವರು. ಆಕೆಯ ಪತಿ ನೂರ್ ಅಹಮದ್ ಕೊಲೆ ಆರೋಪಿಯಾಗಿದ್ದು, ಕೌಲ್ ಬಜಾರ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕೌಟುಂಬಿಕ ಕಲಹ: ಎರಡು ವರ್ಷಗಳ ಹಿಂದೆ ಪ್ರೀತಿಸಿ, ವಿವಾಹವಾಗಿದ್ದ ಆಫ್ರೀನ್ ಬಾನು ಮತ್ತು ನೂರ್ ಅಹಮದ್ ಅವರಿಗೆ ಎಂಟು ತಿಂಗಳ ಗಂಡು ಮಗುವಿದೆ. ಆದರೆ, ಕಲಹ ಹೆಚ್ಚಾದ ಕಾರಣ ಅಫ್ರೀನ್ ಅವರು ಪತಿಯನ್ನು ತೊರೆದು, ತವರು ಮನೆಗೆ ತೆರಳಿದ್ದರು.

ಹುಟ್ಟುಹಬ್ಬದ ದಿನವೇ ಸಂಚು: ‘ಮೇ 21ರಂದು ತನ್ನ ಜನ್ಮದಿನದ ಪ್ರಯುಕ್ತ ಪತ್ನಿಗೆ ಕರೆ ಮಾಡಿದ್ದ ನೂರ್ ಅಹಮದ್, ಮನೆಗೆ ಬರುವುದಾಗಿ ತಿಳಿಸಿದ್ದ. ಗಂಡನ ಮಾತನ್ನು ನಂಬಿದ ಆಫ್ರೀನ್ ಬಾನು, ವಿಶೇಷ ಅಡುಗೆ ಸಿದ್ಧಪಡಿಸಿ, ಕೇಕ್ ಕತ್ತರಿಸಿ ಪತಿಯ ಜನ್ಮದಿನವನ್ನು ಸಡಗರದಿಂದ ಆಚರಿಸಿದ್ದರು.

‘ಅದೇ ದಿನ ಸಂಜೆ ಪತ್ನಿಯನ್ನು ಬೈಕ್ನಲ್ಲಿ ಕರೆದೊಯ್ದ ನೂರ್ ಅಹಮದ್, ನಗರದ ನಿರ್ಜನ ಪ್ರದೇಶದಲ್ಲಿ ಆಕೆಯ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಕೊಲೆ ಮಾಡಿದ. ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ಕುಡತಿನಿ ಸಮೀಪದ ಅರಣ್ಯ ಪ್ರದೇಶದಲ್ಲಿ ಎಸೆದು ಪರಾರಿಯಾಗಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

‘ರಾತ್ರಿಯಾದರೂ ಮಗಳು ಮನೆಗೆ ಬಾರದಿರುವುದನ್ನು ಕಂಡು ಆತಂಕಗೊಂಡ ಪೋಷಕರು ಠಾಣೆಗೆ ದೂರು ನೀಡಿದರು. ನೂರ್ ಅಹಮದ್ಗೆ ವಿಚಾರಣೆಗೆ ಒಳಪಡಿಸಿದಾಗ, ಆತ ಕೃತ್ಯ ಮಾಡಿರುವುದಾಗಿ ಒಪ್ಪಿಕೊಂಡು’ ಎಂದು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-25-1407293240

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.