ಬಳ್ಳಾರಿ: ಎನ್ಎಂಡಿಸಿಯಿಂದ ಸಾವಿರಾರು ಟನ್ ಅದಿರು ಅಕ್ರಮವಾಗಿ ಸಾಗಣೆಯಾದ ಪ್ರಕರಣ ಜೀವಂತವಾಗಿರುವಾಗಲೇ ಬಳ್ಳಾರಿ ಹೊರವಲಯದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 110 ಟನ್ ಅದಿರನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ(ಡಿಎಂಜಿ) ಅಧಿಕಾರಿಗಳು ಮತ್ತು ಗ್ರಾಮೀಣ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಈ ಕುರಿತು ಶುಕ್ರವಾರ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಹಲಕುಂದಿನ ಪ್ರತ್ಯೇಕ ಸ್ಥಳಗಳಲ್ಲಿ ಅದಿರು ಪತ್ತೆಯಾಗಿದೆ. ಎರಡೂ ಕಡೆ ಸಿಕ್ಕಿರುವ ಅದಿರು 52–54 ಗ್ರೇಡ್ ಆಗಿರಬಹುದು ಎಂದು ಡಿಎಂಜಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎಫ್ಐಆರ್ನಲ್ಲಿ ಏನಿದೆ?: ಹಲಕುಂದಿ ಗ್ರಾಮದ ಶಿರಡಿ ಸಾಯಿ ಸ್ಪಾಂಜ್ ಐರನ್ ಘಟಕದ ಹಿಂಭಾಗದ ಖಾಲಿ ಪ್ರದೇಶದಲ್ಲಿ ಅಂದಾಜು 110 ಟನ್ ಕಬ್ಬಿಣದ ಅದಿರಿನ ಲಂಪ್ಸ್ ಅನ್ನು ಅಪರಿಚಿತರು, ಅಕ್ರಮವಾಗಿ ದಾಸ್ತಾನು ಮಾಡಿರುವುದು ಕಂಡುಬಂದಿದೆ. ಡಿಎಂಜಿಯ ಭೂ ವಿಜ್ಞಾನಿ ನವೀನ್ ನೀಡಿದ ದೂರು ಆಧರಿಸಿ ಗ್ರಾಮೀಣ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ, ‘ವಿಆರ್ಕೆಪಿ ಕಾರ್ಖಾನೆ ಕಾಂಪೌಂಡ್ಗೆ ಹೊಂದಿಕೊಂಡ ನಿರ್ಜನ ಪ್ರದೇಶದಲ್ಲಿ ಅಂದಾಜು 4 ಲೋಡ್ಗಳಷ್ಟು (80 ಟನ್) ಕಬ್ಬಿಣದ ಅದಿರು ಪತ್ತೆಯಾಗಿದೆ.

ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಗಡಿಗೆ ಹೊಂದಿಕೊಂಡ ಜಾಗದಲ್ಲಿ ಅದಿರು ಪತ್ತೆಯಾಗಿದೆ. ಕರ್ನಾಟಕ ಗಡಿಯಿಂದಾಚೆಗೆ ಬಂದ್ ಆಗಿರುವ ಅಕ್ರಮ ಗಣಿಗಳು, ಜಪ್ತಿ ಮಾಡಿರುವ ದಾಸ್ತಾನು ಇದೆ. ಅಲ್ಲಿಂದ ಅದಿರನ್ನು ಕದ್ದು ತಂದಿರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-25-1335197247

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.