ಬಳ್ಳಾರಿ: ಖನಿಜ ಸಾಗಾಣಿಕೆ ಪರವಾನಗಿಯನ್ನು ದುರುಪಯೋಗಪಡಿಸಿಕೊಂಡು ಕಳ್ಳತನದಿಂದ ಕಬ್ಬಿಣದ ಅದಿರನ್ನು ಸಾಗಿಸುತ್ತಿದ್ದ ಜಾಲವನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಭೇದಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಎರಡು ಟಿಪ್ಪರ್ ಲಾರಿಗಳು ಹಾಗೂ ಸುಮಾರು 36 ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಜಪ್ತಿ ಮಾಡಲಾಗಿದ್ದು, ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕೌಲ್ ಬಜಾರ್ನ ಕೆ. ಸತ್ಯನಾರಾಯಣ (52), ಓಬುಳಾಪುರಂನ ಕೆ. ನಾಗರಾಜ (32) ಬಂಧಿತ ಆರೋಪಿಗಳು. ಇವರ ವಿರುದ್ಧ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಸೆಕ್ಷನ್ 318(4) ಮತ್ತು 303(2)ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ವಿವರ: ಮೇ 23ರಂದು ಆಂಧ್ರಪ್ರದೇಶದ ಸೋಮಲಾಪುರ ರೈಲ್ವೇ ಸೈಡಿಂಗ್ಸ್ ಪ್ರದೇಶದಿಂದ ಬಳ್ಳಾರಿಯ ಹಲಕುಂದಿ ಗ್ರಾಮದಲ್ಲಿರುವ ಶ್ರೀ ತಿರುಪತಿ ಸ್ಟೀಲ್ಸ್ ಕಾಸ್ಟ್ ಲಿಮಿಟೆಡ್ ಘಟಕಕ್ಕೆ ಅದಿರು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಅಧಿಕಾರಿಗಳಿಗೆ ಲಭಿಸಿತ್ತು. ಈ ಮಾಹಿತಿ ಮೇರೆಗೆ ಭೂವಿಜ್ಞಾನಿ ನವೀನ್ ಜಿ. ಮತ್ತು ತಂಡದವರು ಬಳ್ಳಾರಿ ಗ್ರಾಮೀಣ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿದರು.

ಹಲಕುಂದಿ ಗ್ರಾಮದ ವಿ.ಆರ್.ಕೆ.ಪಿ ಫ್ಯಾಕ್ಟರಿ ರಸ್ತೆಯ ರೈಲ್ವೇ ಗೇಟ್ ಸಮೀಪ ಸಂಚರಿಸುತ್ತಿದ್ದ ಎರಡು ಲಾರಿಗಳನ್ನು ತಡೆದು ತಪಾಸಣೆ ನಡೆಸಿದಾಗ ಅಕ್ರಮ ಬಯಲಾಗಿದೆ.

ಲಾರಿ ಸಂಖ್ಯೆ ಕೆ.ಎ 34/9696: ಈ ವಾಹನವು ಬೆಳಿಗ್ಗೆ 7.26ಕ್ಕೆ ಪರವಾನಗಿ ಪಡೆದು ಒಮ್ಮೆ ಅದಿರನ್ನು ಅನ್-ಲೋಡ್ ಮಾಡಿತ್ತು. ಆದರೆ ಚಾಲಕ ಅದೇ ಪರವಾನಗಿಯನ್ನು ಬಳಸಿ ಎರಡನೇ ಬಾರಿ ಅದಿರು ತುಂಬಿಕೊಂಡು ಸಾಗಿಸುತ್ತಿದ್ದ.

ಲಾರಿ ಸಂಖ್ಯೆ ಕೆ.ಎ 34/ಬಿ 7858: ಈ ವಾಹನವೂ ಸಹ ಹಳೆಯ ಪರವಾನಗಿಯನ್ನೇ ಬಳಸಿ ಪುನಃ ಅದಿರು ಸಾಗಾಟ ಮಾಡುತ್ತಿರುವುದು ಜಿಪಿಎಸ್ ತಂತ್ರಾಂಶದ ಪರಿಶೀಲನೆಯಿಂದ ದೃಢಪಟ್ಟಿದೆ.

ಜಪ್ತಿ ಮಾಡಲಾದ ಅದಿರಿನ ಒಟ್ಟು ಮೌಲ್ಯ ಹಾಗೂ ರಾಜಧನ ಸೇರಿ ಸರ್ಕಾರಕ್ಕೆ ಸುಮಾರು ₹1,12,716 ನಷ್ಟ ಉಂಟುಮಾಡಲಾಗಿದೆ ಎಂದು ಅಂದಾಜಿಸಲಾಗಿದೆ. ಲಾರಿಗಳ ಮೌಲ್ಯ ಸೇರಿದಂತೆ ಒಟ್ಟು ಸುಮಾರು ₹7.12 ಲಕ್ಷ ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆಯಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-25-1186823005

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.