ಬಳ್ಳಾರಿ: ತಾಲ್ಲೂಕಿನ ಅಸುಂಡಿ ಮತ್ತು ಯಾಳ್ಪಿ ಗ್ರಾಮಗಳ ವ್ಯಾಪ್ತಿಯಲ್ಲಿ ನಿಯಮ ಬಾಹಿರವಾಗಿ ಮರಳು ಗಣಿಗಾರಿಕೆ ನಡೆಸುತ್ತಿರುವ ಆರೋಪದ ಮೇಲೆ ಲೈಸೆನ್ಸ್ದಾರರಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕರು ಮೇ 22ರಂದು ನೋಟಿಸ್ ಜಾರಿ ಮಾಡಿದ್ದಾರೆ.

ತಾಲ್ಲೂಕು ಮರಳು ಸಮಿತಿಯ ಅಧ್ಯಕ್ಷರು, ಬಳ್ಳಾರಿ ಉಪ ವಿಭಾಗಾಧಿಕಾರಿ (ಎ.ಸಿ) ಯೂ ಆಗಿರುವ ರಾಜೇಶ ಎಚ್.ಡಿ ಹಾಗೂ ಭೂ ವಿಜ್ಞಾನಿ ಮೇ 4 ರಂದು ನಡೆಸಿದ ಜಂಟಿ ಸ್ಥಳ ಪರಿಶೀಲನೆಯ ವರದಿಯ ಆಧಾರದ ಮೇಲೆ ಗಣಿ ಇಲಾಖೆ ಉಪ ನಿರ್ದೇಶಕಿ ದ್ವಿತೀಯಾ ಇ.ಸಿ ಈ ಕ್ರಮ ಕೈಗೊಂಡಿದ್ದಾರೆ.

ರಾಮಕೃಷ್ಣ ರಾವ್ ಎಂಬುವವರಿಗೆ ಸಂಬಂಧಿಸಿದ ಎರಡೂ ಮರಳು ಗುತ್ತಿಗೆಗಳು (ಬಿಎಲ್ಆರ್-380 ಮತ್ತು ಬಿಎಲ್ಆರ್-379) ನಿಗದಿತ ಮಿತಿಯನ್ನು ಮೀರಿ ಹೆಚ್ಚು ಆಳದವರೆಗೆ ಗಣಿಗಾರಿಕೆ ನಡೆಸಿರುವುದು. ಗಣಿ ಪ್ರದೇಶದಿಂದ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಸುಸ್ಥಿತಿಯಲ್ಲಿಡದೇ ಇರುವುದು, ಗಣಿ ಗುತ್ತಿಗೆಗಳ ಬಳಿ ಸಿಸಿಟಿವಿ ಕ್ಯಾಮೆರಾ ಕಾರ್ಯನಿರ್ವಹಣೆ ಸ್ಥಗಿತಗೊಂಡಿರುವುದು, ಅಸುಂಡಿ ಗ್ರಾಮದ ವ್ಯಾಪ್ತಿಯ ಗಣಿ ಗುತ್ತಿಗೆ (ಬಿಎಲ್ಆರ್-379) ಪ್ರದೇಶದ ಹೊರಭಾಗದಲ್ಲಿ ಸುಮಾರು 8500 ಮೆಟ್ರಿಕ್ ಟನ್ ಸಾದಾ ಮರಳನ್ನು ಅಕ್ರಮವಾಗಿ ದಾಸ್ತಾನು ಮಾಡಿರುವುದು ಜಂಟಿ ಸ್ಥಳ ಪರೀಶಿಲನೆ ವೇಳೆ ಬಹಿರಂಗವಾಗಿತ್ತು. ಇದೇ ಆಧಾರದಲ್ಲಿ ಈ ಗುತ್ತಿಗೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೇ 21ರಂದು ಗಣಿ ಇಲಾಖೆಗೆ ಎಸಿ ಸೂಚಿಸಿದ್ದರು.

ಇದಾದ ಮರುದಿನವೇ ಕ್ಷಿಪ್ರ ಕ್ರಮ ಕೈಗೊಂಡಿರುವ ಗಣಿ ಇಲಾಖೆ ಉಪ ನಿರ್ದೇಶಕಿ ಎರಡೂ ಗಣಿ ಗುತ್ತಿಗೆಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ನೋಟಿಸ್ ತಲುಪಿದ 7 ದಿನಗಳ ಒಳಗಾಗಿ ಸೂಕ್ತ ಸಮಜಾಯಿಷಿ ನೀಡುವಂತೆ ಸೂಚಿಸಿರುವ ಅವರು, ವಿಫಲವಾದಲ್ಲಿ ನಿಯಮಾನುಸಾರ ಗುತ್ತಿಗೆ ರದ್ದತಿ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಜಿಲ್ಲಾ ಮರಳು ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿಗೆ ಅವರು ವರದಿ ನೀಡಿದ್ದಾರೆ.

ಜಂಟಿ ಸ್ಥಳ ಪರಿಶೀಲನೆ ವರದಿ ಆಧರಿಸಿ ಮರಳು ಗುತ್ತಿಗೆದಾರನಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಅಕ್ರಮದ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು
ದ್ವಿತೀಯಾ ಇ.ಸಿ, ಉಪ ನಿರ್ದೇಶಕಿ, ಗಣಿ ಇಲಾಖೆ

ಒತ್ತಡ ತಂತ್ರ ವಿರುದ್ಧ ಅಧಿಕಾರಿಗಳ ಕಾರ್ಯತಂತ್ರ?

ಸದ್ಯ ಬಳ್ಳಾರಿಗೆ ಮರಳು ಪೂರೈಕೆಯಾಗುತ್ತಿರುವುದು ಅಸುಂಡಿ ಮತ್ತು ಯಾಳ್ಳಿ ಗ್ರಾಮಗಳಲ್ಲಿರುವ ಈ ಎರಡು ಮರಳು ಗುತ್ತಿಗೆಗಳಿಂದ ಮಾತ್ರ. ಅಕ್ರಮ ಎಸಗಿರುವ ಹಿನ್ನೆಲೆಯಲ್ಲಿ ಗಣಿ ಗುತ್ತಿಗೆಗಳನ್ನು ಅಮಾನತು ಮಾಡಿದರೆ, ಕೆಲ ಮಂದಿ ಕೃತಕವಾಗಿ ಮರಳು ಅಭಾವ ಸೃಷ್ಟಿಸುವ, ಜನರಿಗೆ ಸಮಸ್ಯೆಯಾಗುತ್ತಿದೆ ಎಂದು ಬಿಂಬಿಸಿ ಜಿಲ್ಲಾಡಳಿತದ ಮೇಲೆ ಒತ್ತಡ ಹೇರುವ ಸಾಧ್ಯತೆಗಳಿವೆ ಎಂಬ ಸೂಕ್ಷ್ಮ ಸಂಗತಿಯನ್ನು ಗಣಿ ಇಲಾಖೆ ಅಧಿಕಾರಿಗಳು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದಾರೆ. ಜನರಿಗೆ ತೊಂದರೆಯಾಗದಂತೆ ಸೂಕ್ತ ಎನಿಸುವ, ಆದರೆ ಅಕ್ರಮದ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವತ್ತ ಜಿಲ್ಲಾಡಳಿತ ಮತ್ತು ಗಣಿ ಇಲಾಖೆ ಚಿಂತನೆ ನಡೆಸುತ್ತಿದೆ ಎಂದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.