ಬಳ್ಳಾರಿ: ತಾಲ್ಲೂಕಿನ ಅಸುಂಡಿ ಮತ್ತು ಯಾಳ್ಪಿ ಗ್ರಾಮಗಳ ವ್ಯಾಪ್ತಿಯಲ್ಲಿ ಸಾದಾ ಮರಳು ಗಣಿಗಾರಿಕೆ ನಡೆಸುತ್ತಿರುವ ಲೈಸೆನ್ಸ್ದಾರರು ನಿಯಮಗಳನ್ನು ಉಲ್ಲಂಘಿಸಿರುವುದು ಬಳ್ಳಾರಿ ಉಪ ವಿಭಾಗಾಧಿಕಾರಿ ಮತ್ತು ಭೂ ವಿಜ್ಞಾನಿಗಳ ಜಂಟಿ ಸ್ಥಳ ತಪಾಸಣಾ ವರದಿಯಿಂದ ಬಹಿರಂಗವಾಗಿದೆ.

ಎಂ. ರಾಮಕೃಷ್ಣ ರಾವ್ ಎಂಬುವವರಿಗೆ ಅಸುಂಡಿ ಗ್ರಾಮದಲ್ಲಿ 12.20 ಎಕರೆ ಹಾಗೂ ಯಾಳ್ಪಿ ಗ್ರಾಮದಲ್ಲಿ 9.90 ಎಕರೆ ಪ್ರದೇಶದಲ್ಲಿ 2022 ರಿಂದ 2027 ರವರೆಗೆ ಮರಳು ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗಿತ್ತು. ಆದರೆ, ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಾವಳಿ 1994 ಮತ್ತು 2024 ರ ತಿದ್ದುಪಡಿ ನಿಯಮಗಳಡಿ ಪದೇ ಪದೇ ನಿಯಮಗಳನ್ನು ಗಾಳಿಗೆ ತೂರಿರುವುದು ತಪಾಸಣೆ ವೇಳೆ ಸಾಬೀತಾಗಿದೆ.

ವರದಿಯಲ್ಲೇನಿದೆ?: ಸಹಾಯಕ ಆಯುಕ್ತರು ಮತ್ತು ಗಣಿ ಇಲಾಖೆಯ ಭೂವಿಜ್ಞಾನಿಗಳು ಮೇ 4 ರಂದು ನಡೆಸಿದ ಜಂಟಿ ತಪಾಸಣೆಯಲ್ಲಿ ಲೈಸೆನ್ಸ್ ಸಂಖ್ಯೆ ಬಿಎಲ್ಆರ್-379 ಮತ್ತು ಬಿಎಲ್ಆರ್-380 ರ ಪ್ರದೇಶಗಳಲ್ಲಿ ಹಲವು ಲೋಪಗಳು ಕಂಡು ಬಂದಿವೆ.

ಅತಿಯಾದ ಗಣಿಗಾರಿಕೆ: ಪರಿಸರ ವಿಮೋಚನಾ ಪತ್ರದ (ಇಸಿ) ನಿಯಮದಂತೆ ಭೂಮಿಯ ಮೇಲ್ಪದರದಿಂದ ಗರಿಷ್ಠ 7 ಮೀಟರ್ ಆಳದವರೆಗೆ ಮಾತ್ರ ಮರಳು ತೆಗೆಯಲು ಅವಕಾಶವಿತ್ತು. ಆದರೆ, ಎರಡೂ ಲೈಸೆನ್ಸ್ ಪ್ರದೇಶಗಳಲ್ಲಿ 7 ಮೀಟರ್ಗಿಂತಲೂ ಹೆಚ್ಚಿನ ಆಳಕ್ಕೆ ಗಣಿಗಾರಿಕೆ ನಡೆಸಿರುವುದು ದೃಢಪಟ್ಟಿದೆ.

ಅಕ್ರಮ ದಾಸ್ತಾನು: ಅಸುಂಡಿ ಗ್ರಾಮದ ಲೈಸೆನ್ಸ್ (ಬಿಎಲ್ಆರ್-379) ವ್ಯಾಪ್ತಿಯ ಹೊರಗೆ ಸುಮಾರು 8500 ಮೆಟ್ರಿಕ್ ಟನ್ ಮರಳನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗಿತ್ತು. ಈ ಹಿಂದೆ ಇದೇ ಕಾರಣಕ್ಕೆ ₹25,000 ದಂಡ ವಿಧಿಸಿದ್ದರೂ ಸಹ, ಲೈಸೆನ್ಸ್ದಾರರು ಮತ್ತೆ ಅದೇ ಉಲ್ಲಂಘನೆಯನ್ನು ಪುನರಾವರ್ತನೆ ಮಾಡಿದ್ದಾರೆ.

ಸಿಸಿ ಟಿವಿ ನಿರ್ವಹಣೆ ಲೋಪ: ಸ್ಟಾಕ್ ಯಾರ್ಡ್ಗಳಲ್ಲಿ ಅಳವಡಿಸಲಾದ ಸಿಸಿ ಟಿವಿ ಕ್ಯಾಮೆರಾಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಹಿಂದಿನ 10 ದಿನಗಳ ವಿಡಿಯೋ ದಾಖಲೆಗಳು ಲಭ್ಯವಿರಲಿಲ್ಲ.

ರಸ್ತೆ ನಿರ್ವಹಣೆ ವೈಫಲ್ಯ: ಮರಳು ಸಾಗಾಣಿಕೆಯಿಂದಾಗಿ ಸಂಪರ್ಕ ರಸ್ತೆಗಳು ದುರಸ್ತಿಯಾಗಿದ್ದರೂ, ಗುತ್ತಿಗೆದಾರರು ಅವುಗಳನ್ನು ಯೋಗ್ಯ ಸ್ಥಿತಿಯಲ್ಲಿ ನಿರ್ವಹಣೆ ಮಾಡಿಲ್ಲ ಎಂದು ಜಂಟಿ ಸ್ಥಳ ಪರಿಶೀಲನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-25-1733866057

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.