ಬಳ್ಳಾರಿ: ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಏಪ್ರಿಲ್ 1ರಿಂದ ಜಾರಿಯಲ್ಲಿರುವ ಮಧ್ಯಾಹ್ನದ ವರೆಗಿನ ಕರ್ತವ್ಯ ಯಾರಿಗೆ ಲಾಭವಾಗಿದೆ ಎಂಬ ಪ್ರಶ್ನೆ ಅಧಿಕಾರಿಗಳು, ಸಾರ್ವಜನಿಕರನ್ನು ಕಾಡಲಾರಂಭಿಸಿದೆ.

ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಏಪ್ರಿಲ್ ಮತ್ತು ಮೇ ಅವಧಿಯಲ್ಲಿ ತಾಪಮಾನ ಹೆಚ್ಚುವುದು ಹಾಗೂ ಬಿಸಿಗಾಳಿ ಬೀಸುವುದು ವಾಡಿಕೆ. ಹೀಗಾಗಿ ಸರ್ಕಾರಿ ಕಚೇರಿಗಳ ವೇಳಾಪಟ್ಟಿಯನ್ನು ಬೆಳಿಗ್ಗೆ 8ರಿಂದ ಮಧ್ಯಾಹ್ನ 1.30ರವರೆಗೆ ಬದಲಾಯಿಸಲಾಗಿದೆ.

2025ನೇ ಸಾಲಿನಲ್ಲೂ ಇಂಥದ್ದೇ ಆದೇಶವನ್ನು ಸರ್ಕಾರ ಹೊರಡಿಸಿತ್ತು.

ಕೆಲಸದ ಅವಧಿಯನ್ನು ಹೀಗೆ ಬೆಳಿಗ್ಗೆ 8 ರಿಂದ ಮಧ್ಯಾಹ್ನದ 1.30 ವರೆಗೆ ನಿಗದಿ ಪರಿಷ್ಕರಿಸಿರುವುದು ಒಂದು ಕಡೆ ಸರ್ಕಾರಿ ಅಧಿಕಾರಿಗಳಿಗೂ ಅನುಕೂಲವಾಗಿಲ್ಲ.

ಇತ್ತ ಸಾರ್ವಜನಿಕರ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಿಲ್ಲ ಎಂಬಂತಾಗಿದೆ. ಕೆಳ ಹಂತದ ಸಿಬ್ಬಂದಿ ಮಾತ್ರ ಕೆಲಸದ ಅವಧಿಯ ಪರಿಷ್ಕರಣೆಯ ಲಾಭ ಪಡೆಯುವಂತಾಗಿದೆ.

‘ಬೆಳಗ್ಗೆ 8ಕ್ಕೆ ಕೆಲಸ ಆರಂಭವಾ ದರೂ, ಸಿಬ್ಬಂದಿ ಬರುವುದು 9 ಗಂಟೆ ನಂತರವೇ. ಮಧ್ಯಾಹ್ನ 1 ಗಂಟೆಗೇ ಹೊರಡಲು ಸಿದ್ಧತೆ ನಡೆಸುತ್ತಾರೆ. 1.30 ಗಂಟೆ ಹೊತ್ತಿಗೆ ಗಾಡಿ ಹತ್ತಿ ಹೊರಟೇ ಬಿಡುತ್ತಾರೆ. ನಮ್ಮದು ಹಾಗಲ್ಲ. ಫೀಲ್ಡ್ ವಿಸಿಟ್, ಸಭೆ, ಕೇಂದ್ರ ಕಚೇರಿ ಕೇಳುವ ಮಾಹಿತಿ ಒದಗಿಸಲು ದಿನದ ಪೂರ್ಣಾವಧಿ ವರೆಗೆ ಕಚೇರಿಯಲ್ಲಿ ಇರಲೇಬೇಕಾಗುತ್ತದೆ. ಬೆಳಿಗ್ಗೆ 8ರಿಂದ ರಾತ್ರಿ 7ರ ವರೆಗೆ ಕೆಲಸ ಮಾಡು ವಂತಾಗಿದೆ. ನಮ್ಮ ಹಿತಕ್ಕಾಗಿ ಜಾರಿಗೆ ತಂದಿರುವ ಪರಿಷ್ಕೃತ ಸಮಯ ನಮ್ಮನ್ನು ಹೈರಾಣು ಮಾಡುತ್ತಿದೆ’ ಎಂದು ಹಲವು ಇಲಾಖೆಗಳ ಉಪ ನಿರ್ದೇಶಕರು ಬೇಸರದಿಂದ ನುಡಿದಿದ್ದಾರೆ.

‘ಮಧ್ಯಾಹ್ನದ ವರೆಗಿನ ಕೆಲಸ ದಿಂದಾಗಿ ಸಾರ್ವಜನಿಕರಿಗೆ ಯಾವುದೇ ಅನುಕೂಲವಾಗಿಲ್ಲ. ಕಚೇರಿಗಳಲ್ಲಿ ಕೆಲಸಗಳು ಆಗುತ್ತಿಲ್ಲ. ಸಾರಿಗೆ ನೌಕರರು, ಬ್ಯಾಂಕ್ ಸಿಬ್ಬಂದಿ, ಸರ್ಕಾರಿ ಆಸ್ಪತ್ರೆಯ ವೈದ್ಯರು, ಆಸ್ಪತ್ರೆ ಸಿಬ್ಬಂದಿ, ಪೊಲೀಸರು ದಿನವೆಲ್ಲಾ ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ತಾಲೂಕು ಕಚೇರಿ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಇತರೆ ಇಲಾಖೆಯ ಕಚೇರಿಗಳನ್ನು 5 ಗಂಟೆಯ ವರೆಗೆ ತೆರೆಯುವುದೇ ಉತ್ತಮ’ ಎಂದು ವಿನಾಯಕ್ ಮುದೇ ನೂರು ಎಂಬುವವರು ಅಭಿಪ್ರಾಯಪಟ್ಟಿದ್ದಾರೆ.

ಈ ಬಾರಿ ಬೇಸಿಗೆಯಲ್ಲಿ ಸರ್ಕಾರಿ ಕಚೇರಿಗಳ ಸಮಯ ಬದಲಾವಣೆ ಮಾಡಬಾರದು ಎಂದು ಜಿಲ್ಲಾಡಳಿತವು ಪ್ರಾದೇಶಿಕ ಆಯುಕ್ತರಿಗೆ ಮನವಿ ಮಾಡಿತ್ತು ಎನ್ನಲಾಗಿದೆ. ಆದರೂ, ಸಿಬ್ಬಂದಿ ಹಿತಕ್ಕಾಗಿ ಸರ್ಕಾರಿ ನೌಕರರ ಸಂಘ ಪಟ್ಟು ಹಿಡಿದು ಸಮಯ ಬದಲಾವಣೆ ಮಾಡಿಸಿಕೊಂಡು ಬಂದಿತು ಎಂದು ಜಿಲ್ಲಾಡಳಿತದ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಸಿಬ್ಬಂದಿ ಆರೋಗ್ಯದ ದೃಷ್ಟಿಯಿಂದ ಸಮಯ ಪರಿಷ್ಕರಣೆ ಮಾಡಲಾಗಿದೆ. ನಿಗದಿತ ಅವಧಿಯಲ್ಲಿ ಸಿಬ್ಬಂದಿ ಕೆಲಸದಲ್ಲಿರಲೇಬೇಕು. ಸಾರ್ವಜನಿಕರಿಗೆ ನೆರವಾಗಲೇಬೇಕು.
–ಸದಾನಂದ ನೆಲ್ಕುದುರಿ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ

ಕಳೆದ ಮೂರ್ನಾಲ್ಕು ದಿನಗಳಿಂದಲಂತೂ ಬಿಸಿಲು ಭೀಕರವಾಗಿದೆ. ಆರೋಗ್ಯದ ದೃಷ್ಟಿಯಿಂದ ಸಮಯ ಬದಲಾವಣೆ ಒಳ್ಳೆಯದೇ. ಆದರೆ, ಸಂದರ್ಭ ಬಂದಾಗ ಸಮಯ ಲೆಕ್ಕಿದೇ ಕೆಲಸ ಮಾಡಬೇಕು

–ನಾಗೇಂದ್ರ ಪ್ರಸಾದ್ ಕೆ.,ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.