ಕಂಪ್ಲಿ: ‘ಪ್ರತಿಯೊಬ್ಬರು ಜೀವನದಲ್ಲಿ ಕಾಯಕ ತತ್ವ ಅಳವಡಿಸಿಕೊಂಡು ಸಾರ್ಥಕ ಜೀವನ ನಡೆಸಬೇಕು’ ಎಂದು ಎಮ್ಮಿಗನೂರು ವಾಮದೇವ ಮಹಾಂತ ಶಿವಾಚಾರ್ಯರು ತಿಳಿಸಿದರು.

ತಾಲ್ಲೂಕಿನ ಎಮ್ಮಿಗನೂರು ಗ್ರಾಮದ ಹಂಪಿಸಾವಿರದೇವರ ಮಠದಲ್ಲಿ ನಡೆದ ಗುರುವಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ದೇಶದ ಪ್ರಗತಿಗೆ ಕಾಯಕ ತತ್ವವೇ ಪ್ರಮುಖವಾಗಿದೆ’ ಎಂದರು.

ಶಾಸಕ ಜೆ.ಎನ್. ಗಣೇಶ್ ಮಾತನಾಡಿ, ‘ವಾಮದೇವ ಮಹಾಂತ ಶಿವಾಚಾರ್ಯರ ದೂರದೃಷ್ಟಿ, ಉದಾತ್ತ ಚಿಂತನೆಗಳು ಸರ್ವಕಾಲಕ್ಕೂ ಸಲ್ಲುತ್ತವೆ. ಅವರ ತತ್ವ, ಆದರ್ಶ, ಸಿದ್ಧಾಂತಗಳು ಎಲ್ಲರಿಗೂ ಮಾದರಿ’ ಎಂದರು.

ಹರಗಿನಡೋಣಿ ಸಿದ್ಧಲಿಂಗ ಶಿವಾಚಾರ್ಯರು, ಮಸ್ಕಿಯ ವರರುದ್ರಮುನಿ ಶಿವಾಚಾರ್ಯರು, ಬಳ್ಳಾರಿ ಕಲ್ಯಾಣ ಸ್ವಾಮೀಜಿ, ಎಚ್.ವೀರಾಪುರದ ಜಡೇಶತಾತ, ಜವುಕು ಕೊಟ್ರಯ್ಯತಾತ, ಕುರೇಕುಪ್ಪ ಶರಣಬಸವ ಶರಣರು, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಅಧ್ಯಕ್ಷ ಹೊಸಕೋಟೆ ಜಗದೀಶ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕ ಅಧ್ಯಕ್ಷ ಬಿಚ್ಚಗಲ್ ಪಂಚಾಕ್ಷರಪ್ಪ, ಕಲ್ಯಾಣಚೌಕಿ ಮಠದ ಬಸವರಾಜಶಾಸ್ತ್ರಿ ಮಾತನಾಡಿದರು.

ಆಶುಕವಿ ಚಿತ್ರದುರ್ಗದ ಜಗನ್ನಾಥ, ಬಿ. ಸದಾಶಿವಪ್ಪ, ಮಹೇಶಗೌಡ್ರು, ಶರಣಬಸವನಗೌಡ, ಎಳ್ಳಾರ್ತಿ ರಾಘವೇಂದ್ರರೆಡ್ಡಿ, ಬಜಾರ ಬಸವರಾಜ, ಘನಮಠಯ್ಯ, ಎಸ್. ರಾಮಪ್ಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-25-948765757

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.