ಕಂಪ್ಲಿ: ‘ತಾಲ್ಲೂಕಿನಲ್ಲಿ 430 ಸಿವಿಲ್ ಮತ್ತು 552 ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಆರ್.ನಟರಾಜ್ ತಿಳಿಸಿದರು.

ಇಲ್ಲಿನ ಮಾರುತಿನಗರದಲ್ಲಿ ಭಾನುವಾರ ಸಿವಿಲ್ ಮತ್ತು ಜೆಎಂಎಫ್ಸಿ ನೂತನ ನ್ಯಾಯಾಲಯ ಉದ್ಘಾಟಿಸಿ, ಪ್ರಕರಣಗಳ ಇತ್ಯರ್ಥಕ್ಕಾಗಿ ವಕೀಲರು, ಕಕ್ಷಿದಾರರು 52 ಕಿ.ಮೀ ದೂರದ ಬಳ್ಳಾರಿಗೆ ತೆರಳಬೇಕಾಗಿರುವುದನ್ನು ಅರಿತು ಸರ್ಕಾರ ಪಟ್ಟಣದಲ್ಲಿಯೇ ಕೋರ್ಟ್ ಆರಂಭಿಸಿರುವುದರಿಂದ ಅನುಕೂಲವಾಗಿದೆ ಎಂದರು.

ಕಂಪ್ಲಿಯಲ್ಲಿ 63 ಜನ ವಕೀಲರಿದ್ದು, ಕೋರ್ಟ್ ಕಟ್ಟಡ ಚಿಕ್ಕದಿದೆ. ಮಹಿಳಾ ವಕೀಲರಿಗೆ ಕೊಠಡಿ ಸೇರಿ ಪ್ರತ್ಯೇಕ ಮೂಲ ಸೌಕರ್ಯಗಳ ಅವಶ್ಯವಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಶೀಘ್ರ ನ್ಯಾಯಾಲಯ ಶಾಶ್ವತ ಕಟ್ಟಡ ನಿರ್ಮಿಸಲು ಕ್ರಮಕೈಗೊಳ್ಳಲಿದೆ ಎನ್ನುವ ಆಶಯ ಹೊಂದಿರುವುದಾಗಿ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಜಿ. ಶಾಂತಿ ಅವರು ಮಾತನಾಡಿ, ಪಟ್ಟಣದ ಸರ್ವೆ ನಂಬರ್ 442ಎಯ 3.12ಎಕರೆಯಲ್ಲಿ ನಾಲ್ಕು ಕೋರ್ಟ್ ಹಾಲ್, ನಾಲ್ಕು ಕ್ವಾರ್ಟಸ್, ಬಾರ್ ಅಸೋಸಿಯೇಷನ್, ಲೇಡಿಸ್ ರೂಂ, ಕಚೇರಿ ಸೇರಿ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಮುಂದಿನ ಎರಡು ವರ್ಷದೊಳಗೆ ಕೋರ್ಟ್ ಕಟ್ಟಡ ನಿರ್ಮಾಣಗೊಳ್ಳುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ ಎಂದು ತಿಳಿಸಿದರು.

ಕಕ್ಷಿದಾರರ ಮನೆ ಬಾಗಿಲಿಗೆ ನ್ಯಾಯ ಒದಗಿಸಲು ಕೋರ್ಟ್ ಆರಂಭಿಸಲಾಗಿದೆ. ನ್ಯಾಯಾಲಯ ಸದಾ ಕ್ರಿಯಾಶೀಲವಾಗಿರುವಂತೆ ವಕೀಲರು ಕರ್ತವ್ಯ ನಿರ್ವಹಿಸಬೇಕು. ಸಕಾಲಕ್ಕೆ ಕಕ್ಷಿದಾರರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದು ವಕೀಲರಿಗೆ ಸಲಹೆ ನೀಡಿದರು.

ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಬಿ.ಜಿ. ಪ್ರಮೋದ್, ಉಚ್ಛ ನ್ಯಾಯಾಲಯದ ನ್ಯಾಯಾಧೀಶರ ಪತ್ನಿ ಆರ್. ಅರ್ಚನಾ ನಟರಾಜ, ಹೆಚ್ಚುವರಿ ಅಡ್ಡೋಕೇಟ್ ಜನರಲ್ ಎಸ್. ಇಸ್ಮಾಯಿಲ್ ಜಬೀವುಲ್ಲ, ಬೆಂಗಳೂರಿನ ವಕೀಲರ ಪರಿಷತ್ ಸದಸ್ಯ ಜೆ.ಎಂ. ಅನಿಲ್ಕುಮಾರ್, ಬಳ್ಳಾರಿ, ಸಿರುಗುಪ್ಪ, ಸಂಡೂರು, ನ್ಯಾಯಾಲಯಗಳ ನ್ಯಾಯಾಧೀಶರು, ವಕೀಲರ ಬಳಗದ ಗೌರವ ಅಧ್ಯಕ್ಷ ಕೆ. ಪ್ರಭಾಕರರಾವ್ ಮತ್ತು ಸದಸ್ಯರು, ವಿಜಯನಗರ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಗುಜ್ಜಲ ನಾಗರಾಜ, ಪಿಡಬ್ಲ್ಯುಡಿ ಎಇಇ ಬಿ. ವಿಜಯಭಾಸ್ಕರ್, ಪ್ರಮುಖರಾದ ಆರ್. ಅರ್ಚನಾ ನಟರಾಜ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-25-455280538

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.