ಕಂಪ್ಲಿ: 'ಅಂಗವೈಕಲ್ಯ ಶಾಪವಲ್ಲ. ಸೂಕ್ತ ಸೌಲಭ್ಯಗಳನ್ನು ನೀಡಿದರೆ ಅವರು ಎಲ್ಲರಂತೆ ಬಾಳಲು ಸಾಧ್ಯವಿದೆ' ಎಂದು ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ(ಡಿ.ಡಿ.ಆರ್.ಸಿ) ನೋಡಲ್ ಅಧಿಕಾರಿ ನಾಗೇಂದ್ರ ಯಾದವ್ ತಿಳಿಸಿದರು.

ತಾಲ್ಲೂಕಿನ ನಂ.10 ಮುದ್ದಾಪುರ ಗ್ರಾಮದ ಗ್ರಂಥಾಲಯ ಆವರಣದಲ್ಲಿ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ ಮತ್ತು ಬೆಂಗಳೂರಿನ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂಗವಿಕಲರ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.

ಮಕ್ಕಳಿಗೆ ವಿಶೇಷ ಶಾಲೆ, ಥೆರಪಿ, ಸ್ವಯಂ ಉದ್ಯೋಗಕ್ಕಾಗಿ ಮಾಹಿತಿ ನೀಡಲಾಯಿತು. ಅಗತ್ಯ ಸಾಧನ ಸಲಕರಣೆ ಒದಗಿಸಲು ಶಿಬಿರದಲ್ಲಿ 40ಜನ ಅಂಗವಿಕಲರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು.

ಡಿ.ಡಿ.ಆರ್.ಸಿ ಚಲನವಲನ ಮುಖ್ಯಸ್ಥ ನಾರಾಯಣ ನಾಯಕ್, ಫಿಜಿಯೋಥೆರಪಿಸ್ಟ್ ದೇವರಾಜ, ಕ್ಲಿನಿಕಲ್ ಸೈಕಲಾಜಿಸ್ಟ್ ಆಶಾ, ಬಳ್ಳಾರಿಯ ಎಂ.ಆರ್.ಡಬ್ಲ್ಯು ರಾಣಿ, ಗ್ರಂಥಪಾಲಯ ಪಾಲಕ ರಮೇಶ್ ಜಡೆ, ವಿ.ಆರ್.ಡಬ್ಲ್ಯು ದೇವಿಕಾ ಇತರರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-25-401250807

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.