ಕಂಪ್ಲಿ: ಪಟ್ಟಣದ 4ನೇ ವಾರ್ಡ್ ಕೆಂಚಮ್ಮ ದೇವಸ್ಥಾನ ಬಳಿ ನಡೆದ ಬೆಂಕಿ ಅವಘಡದಲ್ಲಿ ವಸತಿ ಶೆಡ್ ಭಸ್ಮವಾದ ಘಟನೆ ಸೋಮವಾರ ಜರುಗಿದೆ.

‘ಅಡುಗೆ ಅನಿಲದ ಪೈಪ್ಗೆ ಬೆಂಕಿ ತಗುಲಿ ಬಳಿಕ ಎರಡು ಸಿಲೆಂಡರ್ಗಳಿಗೂ ಬೆಂಕಿ ವ್ಯಾಪಿಸಿ ವಸತಿ ಶೆಡ್ನಲ್ಲಿದ್ದ ಪಡಿತರ, ₹ 1ಲಕ್ಷ ನಗದು, ಪಾತ್ರೆ ಇತರೆ ವಸ್ತುಗಳೆಲ್ಲ ಸಂಪೂರ್ಣ ಸುಟ್ಟಿವೆ’ ಎಂದು ಶೆಡ್ ಕಳಕೊಂಡ ಸಂತ್ರಸ್ತ ಯಲ್ಲಪ್ಪ ತಿಳಿಸಿದರು.

‘ರೆಫ್ರಿಜಿರೇಟರ್ ಕಂಪ್ರೆಸ್ಸರ್ ಲೀಕ್ ಆಗಿ ಬೆಂಕಿ ಹೊತ್ತಿರುವ ಸಾಧ್ಯತೆಗಳಿವೆ’ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಶರತ್ ಗ್ಯಾಸ್ ಏಜೆನ್ಸಿಯ ರವಿಕುಮಾರ್ ಶಂಕೆ ವ್ಯಕ್ತಪಡಿಸಿದರು. ಗಂಗಾವತಿಯ ಅಗ್ನಿಶಾಮಕ ದಳ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದರು. ಶಾಸಕ ಜೆ.ಎನ್. ಗಣೇಶ್, ತಹಶೀಲ್ದಾರ್ ಜೂಗಲ ಮಂಜುನಾಯಕ, ಆಹಾರ ನಿರೀಕ್ಷಕ ವಿರುಪಾಕ್ಷಗೌಡ ಸ್ಥಳಕ್ಕೆ ಭೇಟಿ ನೀಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-25-552902209

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.