ಕಂಪ್ಲಿ: ಖರೀದಿಸಿದ ಮನೆ ಪ್ರವೇಶಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿರುವ ಘಟನೆ ತಾಲ್ಲೂಕಿನ ಸುಗ್ಗೇನಹಳ್ಳಿ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ. ಗ್ರಾಮದ ನಾಗೇಶ್ವರಿ ಎಂಬುವವರ ಮನೆಯನ್ನು ವಾಲ್ಮೀಕಿ ಸುರೇಶ್ ಅವರು ಖರೀದಿಸಲು ಮುಂದಾಗಿದ್ದರು. ಆದರೆ ಮಾತುಕತೆ ಬಗೆಹರಿದಿರಲಿಲ್ಲ. ಅಷ್ಟರಲ್ಲಿ ಎಚ್. ನಾಗರಾಜ ಅವರು ನಾಗೇಶ್ವರಿ ಅವರ ಮನೆ ಖರೀದಿಸಿ ಒಪ್ಪಂದಂತೆ ಹಣ ಪಾವತಿಸಿ ಏ.1ರಂದು ಮನೆ ಪ್ರವೇಶಿಸಿ ಪೂಜೆ ಸಲ್ಲಿಸಲು ಬಂದಿದ್ದರು. ಈ ವೇಳೆ ಸುರೇಶ್ ಹಾಗೂ ಇತರರು ‘ನಾವು ಖರೀದಿ ಮಾಡಬೇಕಿದ್ದ ಮನೆಯನ್ನು ನೀವು ಹೇಗೆ ಖರೀದಿ ಮಾಡಿದ್ದೀರಿ’ ಎಂದಾಗ ಪರಸ್ಪರ ಅವಾಚ್ಯ ಶಬ್ಧಗಳ ನಿಂದನೆ, ಹಲ್ಲೆ ನಡೆದಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಾಗಿದ್ದು, ವಾಲ್ಮೀಕಿ ಸುರೇಶ್ 16 ಜನರ ವಿರುದ್ಧ ಮತ್ತು ನಾಗರಾಜ 9 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260403-25-349806964

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.