ಬಳ್ಳಾರಿ: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) ₹16.17 ಕೋಟಿಯನ್ನು ಸ್ವಂತಕ್ಕೆ ಬಳಸಿಕೊಂಡ ಆರೋಪಿ ಸಂತೋಷ್ ಕುಮಾರ್ ಪೊಲೀಸ್ ವಶದಲ್ಲಿದ್ದಾಗಲೇ ಪರಾರಿಯಾಗಿದ್ದು, ಮತ್ತೆ ಸಿಕ್ಕಿಬಿದ್ದಿದ್ಧಾನೆ.

ತಪ್ಪಿಸಿಕೊಂಡಿದ್ದ ಆರೋಪಿಯನ್ನು 24 ಗಂಟೆಯೊಳಗೆ ಪೊಲೀಸರು ಮತ್ತೆ ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕೆಐಎಡಿಬಿಯ ಬಳ್ಳಾರಿ ವಲಯ ಕಚೇರಿಯಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ ಆರೋಪಿ ಸಂತೋಷ್ ಕುಮಾರ್, 2024ರ ಅಕ್ಟೋಬರ್ನಿಂದ 2025ರ ಡಿಸೆಂಬರ್ನ ನಡುವಿನ ಅವಧಿಯಲ್ಲಿ ಇಲಾಖೆಯ ಚೆಕ್ಗಳಿಗೆ ನಕಲಿ ಸಹಿ, ಮೊಹರು ಬಳಸಿ ₹16.17 ಕೋಟಿ ದುರ್ಬಳಕೆ ಮಾಡಿಕೊಂಡಿದ್ದ. ಈ ಕುರಿತು ಮಾರ್ಚ್ 20ರಂದು ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಂದಿನಿಂದಲೂ ತಲೆಮರೆಸಿಕೊಂಡಿದ್ದ ಆರೋಪಿ ಸಂತೋಷ್ ಕುಮಾರ್ನನ್ನು ಏಪ್ರಿಲ್ 15ರಂದು ಪೊಲೀಸರು ಆತನ ಮನೆಯಲ್ಲಿ ಬಂಧಿಸಿದ್ದರು. ಆದರೆ, ಪೊಲೀಸ್ ವಶದಲ್ಲಿರುವಾಗಲೇ 16ರಂದು ಮಧ್ಯರಾತ್ರಿ ಪರಾರಿಯಾಗಿದ್ದ. ಈ ಬಗ್ಗೆ ಎಪಿಎಂಸಿ ಠಾಣೆಯಲ್ಲಿ ಪ್ರತ್ಯೇಕ ಎಫ್ಐಆರ್ ದಾಖಲಾಗಿತ್ತು.

ಠಾಣೆಯಲ್ಲಿ ಗಾಳಿಯಾಡದೇ ಉಸಿರಾಡಲು ಕಷ್ಟವಾಗುತ್ತಿರುವುದಾಗಿಯೂ, ಮೂತ್ರ ವಿಸರ್ಜನೆ, ನೀರು ಕುಡಿಯುವ ನೆಪ ಹೇಳಿ ಪೊಲೀಸರನ್ನು ಗೊಂದಲಕ್ಕೀಡು ಮಾಡಿದ್ದ ಸಂತೋಷ್ ಪರಾರಿಯಾಗಿದ್ದ.

600 ಕಿ.ಮೀ ಸುತ್ತಾಡಿಸಿದ: ಆರೋಪಿ ಸಂತೋಷ ಠಾಣೆಯಿಂದ ಪರಾರಿಯಾಗುತ್ತಲೇ ಆತನ ಪತ್ತೆಗಾಗಿ ಬಳ್ಳಾರಿ ನಗರ ಡಿಎಸ್ಪಿ ವಿ. ಗೋವಿಂದರಾಜು ಅವರು ಬಳ್ಳಾರಿ ಗ್ರಾಮೀಣ ಉಪವಿಭಾಗದ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳುಳ್ಳ ಐದು ತಂಡಗಳನ್ನು ರಚನೆ ಮಾಡಿದ್ದರು.

ಆರೋಪಿಯ ಜಾಡು ಹಿಡಿದು ಪೊಲೀಸರು ಚಿತ್ರದುರ್ಗದ ಚಳ್ಳಕೆರೆ, ವಿಜಯನಗರದ ಕೂಡ್ಲಿಗಿ, ಗುಡೇಕೋಟೆ, ಕಾನಹೊಸಹಳ್ಳಿ ಸೇರಿದಂತೆ ಹಲವೆಡೆ ಹುಡುಕಾಟ ನಡೆಸಿದ್ದರು. ಗುರುವಾರ ರಾತ್ರಿ ನಗರದ ಬಂಡಿಹಟ್ಟಿಯ ಮನೆಯೊಂದರಲ್ಲಿ ಆತ ತಂಗಿದ್ದಾಗ ಪೊಲೀಸರು ಮತ್ತೆ ಬಂಧಿಸಿದ್ದಾರೆ. ಆತನ ಬಂಧನಕ್ಕಾಗಿ ಪೊಲೀಸರು 600 ಕಿ.ಮೀಗೂ ಹೆಚ್ಚು ಓಡಾಡಿದ್ದರು ಎನ್ನಲಾಗಿದೆ.

ಪ್ರಕರಣ ಸಿಐಡಿಗೆ: ಪ್ರಕರಣವು ₹15 ಕೋಟಿ ಮೀರಿದ ವಂಚನೆಗೆ ಸಂಬಂಧಿಸಿದ್ದಾಗಿದ್ದು, ಸಿಐಡಿಗೆ ಹಸ್ತಾಂತರ ಆಗಬೇಕಾಗಿದೆ. ಪ್ರಕರಣವನ್ನು ಸಿಐಡಿಗೆ ನೀಡಲು ನಿರ್ಧರಿಸಲಾಗಿದ್ದು, ಒಂದೆರಡು ದಿನಗಳಲ್ಲಿ ದಾಖಲೆಗಳ ಹಸ್ತಾಂತರವಾಗಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-25-1200328074

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.