ಬಳ್ಳಾರಿ: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಯ ಬಳ್ಳಾರಿ ವಲಯ ಕಚೇರಿಗೆ ₹16.17 ಕೋಟಿ ವಂಚಿಸಿರುವ ಆರೋಪಿ ಸಂತೋಷ್ ಕುಮಾರ್ ಬಳಿ ವಿವಿಧ ಕಂಪನಿಗಳ 8 ಕಾರುಗಳಿವೆ ಎಂದು ಪೊಲೀಸ್ ಇಲಾಖೆ ಹೇಳಿದೆ.

ಆರೋಪಿಯ ಕುರಿತು ಪೊಲೀಸ್ ಇಲಾಖೆ ಭಾನುವಾರ ಮಾಹಿತಿ ಬಿಡುಗಡೆ ಮಾಡಿದೆ. ಆರೋಪಿ ಬಳಿ ವಿವಿಧ ಕಂಪನಿಗಳ 5 ಮೋಟರ್ ಬೈಕ್ಗಳು, 4 ವಿವಿಧ ಕಂಪನಿ ಮೊಬೈಲ್ ಫೋನ್ಗಳು, ಬಂಗಾರದ ಆಭರಣಗಳು ಸೇರಿ ಒಟ್ಟು ₹1.30 ಕೋಟಿ ಮೊತ್ತದ ವಸ್ತುಗಳು ಇರುವುದಾಗಿ ಪೊಲೀಸ್ ಇಲಾಖೆ ಹೇಳಿದೆ.

ಆತನಿಗೆ ಸಂಬಂಧಿಸಿದ ವಿವಿಧ ಖಾತೆಗಳಲ್ಲಿ ₹29.97 ಲಕ್ಷ ಹಣ ಇದ್ದು, ಖಾತೆಗಳನ್ನು ಸ್ಥಗಿತಗೊಳಿಸಿರುವುದಾಗಿ ಇಲಾಖೆ ಹೇಳಿದರು.

ಆರೋಪಿ ವಿರುದ್ಧ ಎಪಿಎಂಸಿ ಠಾಣೆಯಲ್ಲಿ ಎರಡು ಪ್ರಕರಣ, ಬಳ್ಳಾರಿ ಗ್ರಾಮೀಣ, ಪಿಡಿಹಳ್ಳಿಯಲ್ಲಿ ಠಾಣೆಗಳಲ್ಲಿ ತಲಾ ಒಂದೊಂದು ಕೇಸುಗಳಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕೆಐಎಡಿಬಿಗೆ ವಂಚಿಸಿದ ಆರೋಪಿ ಸಂತೋಷ್ ಕುಮಾರ್, ಕೆಆರ್ಎಸ್ ಪಕ್ಷದ ವಿವಿಧ ಕಾರ್ಯಕ್ರಮಗಳಲ್ಲಿ ₹10 ಲಕ್ಷ ಖರ್ಚು ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿಸಿರುವುದಾಗಿ ಮಾಹಿತಿ ನೀಡಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-25-1087285154

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.