ತೆಕ್ಕಲಕೋಟೆ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬುಧವಾರ ಕ್ಷಯ ರೋಗಿಗಳ ಬೆಂಬಲ ಗುಂಪು ಸಭೆ ನಡೆಯಿತು.
ವೈದ್ಯಾಧಿಕಾರಿ ಡಾ.ಶ್ರೀಹರಿ ಮಾತನಾಡಿ,' ರೋಗಿಗಳು ಧೈರ್ಯಗುಂದದೆ ನಿಯಮಿತವಾಗಿ ಮಾತ್ರೆ ಬಳಸಿ ಆರೋಗ್ಯ ಕಾಪಾಡಿಕೊಳ್ಳಿ' ಎಂದು ಸಲಹೆ ನೀಡಿದರು.
ಟಿಬಿ ರೋಗಿಗಳು ಮಾತ್ರೆ ಹಾಗೂ ನಿಕ್ಷಯ್ ಪೌಷ್ಟಿಕ ಸಹಾಯಧನ ನೀಡಲಾಗುತ್ತಿದೆ. 27 ಜನ ಕ್ಷಯ ರೋಗಿಗಳಿಗೆ, ಜಿಂದಾಲ್ ವತಿಯಿಂದ ಪೌಷ್ಟಿಕ ಆಹಾರದ ಕಿಟ್ ಗಳನ್ನು ವಿತರಿಸಲಾಗುತ್ತಿದ್ದು, ಕಾಲ ಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳಿ ಎಂದು ಎಸ್ ಟಿ ಎಸ್ ಹುಲುಗಪ್ಪ ತಿಳಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮೊಹಮ್ಮದ್ ಖಾಸಿಂ ಮಾತನಾಡಿದರು. ಕಾರ್ಯಕ್ರಮದಲ್ಲಿ ಔಷದ ತಜ್ಞ ಸಂಧ್ಯಾ, ಪ್ರಯೋಗಶಾಲಾ ತಂತ್ರಜ್ಞ ಪಾಟೀಲ್ ಮತ್ತು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.
ತೆಕ್ಕಲಕೋಟೆ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಷಯ ರೋಗಿಗಳಿಗೆ ಆಹಾರದ ಕಿಟ್ ವಿತರಿಸಲಾಯಿತು