ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಕೋಟ್ಯಂತರ ರೂಪಾಯಿ ವೆಚ್ಚದ ರಸ್ತೆ, ಗ್ರಂಥಾಲಯ, ಅಂಗನವಾಡಿ ಹಾಗೂ ಶಿಕ್ಷಣಕ್ಕೆ ಪೂರಕವಾದ ಯೋಜನೆಗಳಿಗೆ ಕರ್ನಾಟಕ ಗಣಿಗಾರಿಕೆ ಪರಿಸರ ಪುನಶ್ಚೇತನ ನಿಗಮ (ಕೆಎಂಇಆರ್ಸಿ) ಅನುಮೋದನೆ ನೀಡಿದೆ.

‘ಗಣಿಗಾರಿಕೆ ಪರಿಣಾಮ ವಲಯಕ್ಕಾಗಿ ಸಮಗ್ರ ಪರಿಸರ ಯೋಜನೆ (ಸಿಇಪಿಎಂಐಝಡ್)’ಗಳ 28ನೇ ಸಭೆಯು ನ್ಯಾಯಮೂರ್ತಿ ಬಿ.ಸುದರ್ಶನ ರೆಡ್ಡಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದಿತ್ತು. ಈ ಸಭೆಯ ನಡಾವಳಿ ಸದ್ಯ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಜಿಲ್ಲೆಯಲ್ಲಿ 21 ಡಿಜಿಟಲ್ ಗ್ರಂಥಾಲಯಗಳ ನಿರ್ಮಾಣಕ್ಕೆ ಸಭೆಯಲ್ಲಿ ಹಸಿರು ನಿಶಾನೆ ದೊರೆಯಿತು. ಸಿರುಗುಪ್ಪ–9, ಕಂಪ್ಲಿ–4, ಕುರುಗೋಡು–8 ಗ್ರಂಥಾಲಯಗಳನ್ನು ನಿರ್ಮಿಸಲು ₹10.50 ಕೋಟಿ ಮಂಜೂರು ಮಾಡಲಾಯಿತು. ಇದಕ್ಕೂ ಹಿಂದಿನ ಸಭೆಯಲ್ಲಿ ಬಳ್ಳಾರಿ, ಸಂಡೂರು ತಾಲ್ಲೂಕುಗಳಲ್ಲಿ 31 ಗ್ರಂಥಾಲಯಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿತ್ತು.

ಬಳ್ಳಾರಿ, ಸಂಡೂರು, ಸಿರುಗುಪ್ಪ, ಕಂಪ್ಲಿ ಹಾಗೂ ಕುರುಗೋಡು ತಾಲ್ಲೂಕುಗಳಲ್ಲಿ ಒಟ್ಟು 198 ಹೊಸ ಅಂಗನವಾಡಿ ಕಟ್ಟಡಗಳ ನಿರ್ಮಾಣ ಹಾಗೂ 91 ಅಂಗನವಾಡಿಗಳಲ್ಲಿ ಮೂಲಸೌಕರ್ಯ ಸುಧಾರಣೆಗೆ ₹83.07 ಕೋಟಿ ಅನುದಾನ ನೀಡಲು ಕೆಎಂಇಆರ್ಸಿ ಅನುಮೋದನೆ ನೀಡಿತು.

ಇದರಡಿ ಬಳ್ಳಾರಿ ತಾಲ್ಲೂಕಿನಲ್ಲಿ 61 ಹೊಸ ಅಂಗನವಾಡಿಗಳು, ಸಂಡೂರಿನಲ್ಲಿ 24, ಸಿರುಗುಪ್ಪದಲ್ಲಿ 60, ಕಂಪ್ಲಿಯಲ್ಲಿ 34 ಮತ್ತು ಕುರುಗೋಡಿನಲ್ಲಿ 19 ಹೊಸ ಕಟ್ಟಡಗಳನ್ನು ನಿರ್ಮಿಸಲಾಗುತ್ತದೆ.

ಸಿರುಗುಪ್ಪ ತಾಲ್ಲೂಕಿನ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ವಿತರಣೆ ಯೋಜನೆಯೂ ಸಭೆಯಲ್ಲಿ ಅನುಮೋದನೆ ಪಡೆದಿದೆ. ಇದಕ್ಕೆ ₹15.44 ಕೋಟಿ ನೀಡಲಾಗಿದೆ.

ತಾರಾನಾಥ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಂಬಂಧಿಸಿದ ಮೂರು ಯೋಜನೆಗಳಿಗೆ ಪರಿಷ್ಕೃತ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಆಸ್ಪತ್ರೆ ಮೇಲ್ದರ್ಜೆಗೇರಿಕೆ, ಬಾಲಕಿಯರ ವಸತಿ ನಿಲಯ ಹಾಗೂ ಟೀಚಿಂಗ್ ಫಾರ್ಮಸಿ ನಿರ್ಮಾಣ ಯೋಜನೆಗಳಿಗೆ ಹೆಚ್ಚುವರಿ ಪೀಠೋಪಕರಣ, ಉಪಕರಣ ಮತ್ತು ಸಾಧನಗಳ ಖರೀದಿಗಾಗಿ ಒಟ್ಟು ₹6.43 ಕೋಟಿ ಹೆಚ್ಚುವರಿ ವೆಚ್ಚಕ್ಕೆ ಅನುಮತಿ ನೀಡಲಾಗಿದೆ. ಇದರೊಂದಿಗೆ ಯೋಜನೆಗಳ ಒಟ್ಟು ವೆಚ್ಚ ₹35.39 ಕೋಟಿಗೆ ಏರಿಕೆಯಾಗಿದೆ.

ಬಳ್ಳಾರಿ ಬಿಎಂಸಿಆರ್ಸಿ–ವಿಮ್ಸ್ನಲ್ಲಿ ‘ಅಡ್ವಾನ್ಸ್ಡ್ ಸ್ಕಿಲ್ ಲ್ಯಾಬ್, ಸಿಮ್ಯುಲೇಷನ್ ಸೆಂಟರ್ ಮತ್ತು ಇನೋವೇಷನ್ ಇಂಕ್ಯೂಬೇಷನ್ ಸೆಂಟರ್’ ಸ್ಥಾಪನೆಗೆ ₹41.09 ಕೋಟಿ ಹಾಗೂ 200 ಹಾಸಿಗೆಗಳ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ ₹330.58 ಕೋಟಿ ವೆಚ್ಚದ ಎರಡು ಮಹತ್ವದ ಯೋಜನೆಗಳಿಗೂ ಸಭೆಯಲ್ಲಿ ಅಂತಿಮ ಅನುಮೋದನೆ ದೊರೆಯಿತು.

ಸಂಡೂರು ತಾಲ್ಲೂಕಿನ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ₹137.46 ಕೋಟಿ ಮೌಲ್ಯದ ಆರು ಪ್ಯಾಕೇಜ್ಗಳಿಗೆ ಅನುಮೋದನೆ ದೊರೆತಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-25-264697498

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.