ಬಳ್ಳಾರಿ: ಬಳ್ಳಾರಿ ತಾಲ್ಲೂಕಿನ ಕೊಳಗಲ್ಲು ಗ್ರಾಮದಲ್ಲಿ ಬುಧವಾರ ನಡೆಯಲಿರುವ ಎರ್ರಿತಾತನ ಜಾತ್ರಾ ಮಹೋತ್ಸವದ ಬಳಿಕ ಕ್ಷೌರದಂಗಡಿಗಳ ಸಮಸ್ಯೆಯನ್ನು ಸರಿಪಡಿಸುವುದಾಗಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದೆ.

ವಿವಾದಿತ ಜಾತ್ರಾ ಮಹೋತ್ಸದ ಸಂದರ್ಭದಲ್ಲೇ ಹೊಸ ವಿವಾದವೂ ಎದುರಾಗಿರುವುದರಿಂದ ಅಧಿಕಾರಿಗಳು ಎಚ್ಚರಿಕೆಯಿಂದ ಪರಿಸ್ಥಿತಿಯನ್ನು ತಿಳಿಗೊಳಿಸುವ ನಿಲುವಿಗೆ ಬಂದಿದ್ದಾರೆ. ಕ್ಷೌರದಂಗಡಿಗಳ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನವು ಇನ್ಯಾವುದೋ ತಿರುವು ಪಡೆದು, ಗ್ರಾಮದಲ್ಲಿ ಜಾತ್ರೆಗೆ ಅಡಚಣೆ ಆಗಬಾರದು ಎಂಬುದು ಅಧಿಕಾರಿಗಳ ನಿಲುವು. ಆದ್ದರಿಂದಲೇ ಬಹುತೇಕ ಗುರುವಾರ ಅಥವಾ ಶುಕ್ರವಾರ ಸಭೆ ನಡೆಸಿ ಸಮಸ್ಯೆಗೆ ಅಂತ್ಯ ಹಾಡಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ, ತಹಶೀಲ್ದಾರ್, ಗ್ರಾಮ ಪಂಚಾಯಿತಿ, ಪಿಡಿಒಗಳನ್ನು ಒಳಗೊಂಡ ಸಮಿತಿಯು ಈ ಸಮಸ್ಯೆಯನ್ನು ಬಗೆಹರಿಸಲಿದೆ ಎಂದು ಮಾಹಿತಿ ಲಭ್ಯವಾಗಿದೆ.

ಗೊಂದಲಗಳ ನಡುವೆ ಜಾತ್ರೆ: ಕೊಳಗಲ್ಲು ಗ್ರಾಮದಲ್ಲಿ ಗೊಂದಲಗಳ ನಡುವೆಯೇ ಎರ್ರಿತಾತನ ಜಾತ್ರೆ, ರಥೋತ್ಸವಕ್ಕೆ ಮಂಗಳವಾರ ಸಿದ್ಧತೆಗಳು ನಡೆದವು. ಬುಧವಾರದ ರಥೋತ್ಸವಕ್ಕಾಗಿ ಮಠದಿಂದ ರಥವನ್ನು ಹೊರಕ್ಕೆ ತೆಗೆದು ಶುಚಿ, ಅಲಂಕಾರ ಮಾಡುವ ಕೆಲಸಕ್ಕೆ ಬಳ್ಳಾರಿ ತಹಶೀಲ್ದಾರ್ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು. ಈ ವೇಳೆ ಎರಡು ಗುಂಪುಗಳ ನಡುವೆ ವಾದ ವಿವಾದಗಳೂ ನಡೆದವು. ಜಾತ್ರೆಗೆ ಜಿಲ್ಲಾಡಳಿತ ಅನುಮತಿ ನೀಡಿರುವ ಬಗ್ಗೆ ಅಧಿಕೃತ ದಾಖಲೆ ನೀಡುವಂತೆ ಒಂದು ಗುಂಪು ಕೇಳಿತು.

‘ಜಾತ್ರೆ ಮಾಡಿ ಎಂದು ಸರ್ಕಾರದಿಂದ ಆದೇಶ ನೀಡಿದ ಉದಾಹರಣೆ ಇಲ್ಲ. ಆದರೆ, ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ನಿಷೇಧದ ಆದೇಶಗಳನ್ನಷ್ಟೇ ಹೊರಡಿಸಲಾಗುತ್ತದೆ’ ಎಂದು ಜಿಲ್ಲಾಡಳಿತದ ಅಧಿಕಾರಿಗಳು ಮಾಹಿತಿ ನೀಡಿದರು. ಇದೆಲ್ಲದರ ನಡುವೆಯೂ, ಜಾತ್ರೆಗಾಗಿ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ. ಗೊಂದಲಗಳೂ ಉಳಿದುಕೊಂಡಿವೆ. ಗ್ರಾಮದಲ್ಲಿ ಪೊಲೀಸರ ಭದ್ರತೆ ನಿಯೋಜಿಸಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-25-895124518

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.