ಕುಡತಿನಿ (ಸಂಡೂರು): ಪಟ್ಟಣದ ಮೂರನೇ ವಾರ್ಡ್ನಲ್ಲಿನ ರಸ್ತೆಯಲ್ಲಿ ಹರಡಿದ ಜಾಲಿ ಗಿಡವನ್ನು ತೆರವುಗೊಳಿಸುವಂತೆ ಒತ್ತಾಯಿಸಿ ವಾರ್ಡ್ ನಿವಾಸಿಗಳು, ರಕ್ಷಣಾ ವೇದಿಕೆಯ ಕಾವಲು ಪಡೆಯ ಮುಖಂಡರು ಶನಿವಾರ ಪ್ರತಿಭಟನೆ ನಡೆಸಿದರು.

ರಕ್ಷಣಾ ವೇದಿಕೆಯ ಕಾವಲು ಪಡೆಯ ಕುಡತಿನಿ ಘಟಕದ ಅಧ್ಯಕ್ಷ ಕೆ. ನಾಗರಾಜ ಮಾತನಾಡಿ, ‘ಪಟ್ಟಣದ ಮೂರನೇ ವಾರ್ಡ್ನಲ್ಲಿನ ರಸ್ತೆಯಲ್ಲಿ ಜಾಲಿ ಬೇಲಿಯು ಹೆಚ್ಚಿನ ಪ್ರಮಾಣದಲ್ಲಿ ಹರಡಿದ್ದು ಜನರು ಸಂಚಾರಕ್ಕಾಗಿ ಪರದಾಡುತ್ತಿದ್ದಾರೆ. ಜಾಲಿ ಗಿಡ ದಟ್ಟವಾಗಿ ಹರಡಿದ್ದರಿಂದ ವಿವಿಧ ವಾಹನಗಳ ಸವಾರರಿಗೆ ಅಪಘಾತವಾಗಿದ್ದು, ವಾಹನಗಳ ಸವಾರರು ಪ್ರಾಣ ಭಯದಲ್ಲೇ ಸಂಚರಿಸುವಂತಾಗಿದೆ. ಸ್ಥಳೀಯ ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಶೀಘ್ರವಾಗಿ ರಸ್ತೆಗೆ ಹರಡಿದ ಜಾಲಿ ಗಿಡವನ್ನು ತೆರೆಗೊಳಿಸಬೇಕು’ ಎಂದು ಒತ್ತಾಯಿಸಿದರು.

ವಾರ್ಡ್ನ ನಿವಾಸಿಗಳಾದ ರಾಜಾಸಾಬ್, ಯು.ರುದ್ರಪ್ಪ, ಕೊಳ್ಳಿತಿಮ್ಮಪ್ಪ, ಎಂ.ಶ್ರೀನಿವಾಸ್, ಎಸ್.ವಿರೂಪಾಕ್ಷಪ್ಪ, ಶಂಕರಪ್ಪ, ರಾಕೇಶ್, ಶಿವಪ್ಪ, ಉಮೇಶ್, ಮೋಹನ, ವೀರೇಶ್, ಸ್ವಾಮಿ, ತಿಮ್ಮಯ್ಯ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-25-1805775254

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.