ಕುರುಗೋಡು: ‘ತಾಲ್ಲೂಕಿನ ಕಲ್ಲುಕಂಭ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಆರಂಭಿಸಿದ ಬಹುತೇಕ ಕಾಮಗಾರಿಗಳು ಅರೆಬರೆಯಾಗಿವೆ. ಕೂಡಲೇ ಕಾರ್ಯಪ್ರವೃತ್ತರಾಗಿ, ಅವುಗಳನ್ನು ಪೂರ್ಣಗೊಳಿಸಬೇಕು’ ಎಂದು ರಾಜ್ಯ ಸಾಮಾಜಿಕ ಲೆಕ್ಕ ಪರಿಶೋಧನಾ ನಿರ್ದೇಶನಾಲಯದ ನಿರ್ದೇಶಕ ಕೆ.ಸಿ. ಮಲ್ಲಪ್ಪ ತಾಕೀತು ಮಾಡಿದರು.

ತಾಲ್ಲೂಕಿನ ಕಲ್ಲುಕಂಭ ಗ್ರಾಮ ಪಂಚಾಯಿತಿ ಕಚೇರಿಗೆ ಶುಕ್ರವಾರ ಭೇಟಿ ನೀಡಿ, ನರೇಗಾ ಯೋಜನೆಯ ಕಾಮಗಾರಿಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.

‘ಉದ್ಯೋಗಕ್ಕಾಗಿ ನೋಂದಾಯಿಸಿದ ಕಾರ್ಮಿಕರಿಗೆ ಜಾಗೃತಿ ಮೂಡಿಸಿ, ಕೆಲಸಕ್ಕೆ ಕರೆತರಬೇಕು. ನನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕು. ಎಲ್ಲ ಕಾರ್ಮಿಕರಿಗೆ ಕಡ್ಡಾಯವಾಗಿ, ವರ್ಷಕ್ಕೆ 100 ದಿನ ಉದ್ಯೋಗ ನೀಡುವ ಜತೆಗೆ ಪ್ರತಿಯೊಬ್ಬರಿಗೆ ದಿನಕ್ಕೆ ₹370 ನೀಡಬೇಕು’ ಎಂದು ಸೂಚಿಸಿದರು.

ಅರ್ಜಿ ಸಲ್ಲಿಸಿದರೂ ಸಕಾಲಕ್ಕೆ ಉದ್ಯೋಗ ನೀಡುತ್ತಿಲ್ಲ ಎಂಬ ಕಾರ್ಮಿಕರ ದೂರಿಗೆ ಪ್ರತಿಕ್ರಿಯಿಸಿದ ಅವರು, ‘ಉದ್ಯೋಗಕ್ಕಾಗಿ ನಮೂನೆ 6ರಲ್ಲಿ ಅರ್ಜಿ ಸಲ್ಲಿಸಿ. ನಿಗದಿತ ಅವಧಿಯೊಳಗೆ ಉದ್ಯೋಗ ನೀಡದಿದ್ದರೆ ಅಧಿಕಾರಿಗಳ ವೇತನದಲ್ಲಿ ಕೂಲಿ ಹಣ ಕೊಡಿಸುವೆ’ ಎಂದು ಭರವಸೆ ನೀಡಿದರು.

‘ವಿಬಿಜಿರಾಮ್ಜಿ ಯೋಜನೆಯಡಿ ಹೆಚ್ಚು ಮಾನವದಿನ ಸೃಜಿಸಲು ಯೋಜನೆ ತಯಾರಿಸಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಲೆಕ್ಕ ಪರಿಶೋಧನಾಧಿಕಾರಿ ಸೋಮಶೇಖರ್, ತಾಲ್ಲೂಕು ಲೆಕ್ಕ ಪರಿಶೋಧನಾಧಿಕಾರಿ ಶ್ರೀಧರ ಗೌಡ, ನರೇಗಾ ಉಪ ನಿರ್ದೇಶಕ ಶಿವರಾಮ ರೆಡ್ಡಿ ಮತ್ತು ಪಿಡಿಒ ಅನಿಲ್ ಕುಮಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-25-1054611106

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.