ಸರ್ಕಾರಿ ಸರ್ವೇಯರ್ ಇಲ್ಲದ ಕಡೆ ಭೂಮಾಪನ ನಿಧಾನವಾಗಿದೆ. ಮುಂದಿನ ವಾರ ಸಮಸ್ಯೆ ಬಗೆಹರಿಯುವ ನಿರೀಕ್ಷೆಗಳಿವೆ. ಇಲ್ಲವಾದರೆ, ಹೆಚ್ಚು ಸರ್ವೇಯರ್‌ಗಳು ಇರುವ ಜಿಲ್ಲೆಗಳಿಂದ ತಾತ್ಕಾಲಿಕವಾಗಿ ಸಿಬ್ಬಂದಿ ನಿಯೋಜನೆ ಮಾಡಬಹುದು.
– ಪ್ರಮೋದ್, ಉಪ ನಿರ್ದೇಶಕರು, ಭೂ ದಾಖಲೆಗಳ ಇಲಾಖೆ, ಬಳ್ಳಾರಿ
ಭೂಮಾಪಕರ ಸಮಸ್ಯೆ ಇತ್ಯರ್ಥಕ್ಕೆ ಮಾತುಕತೆಗಳು ನಡೆಯುತ್ತಿವೆ. ಆದರೆ, ನಿರ್ಧಾರಗಳು ಹೊರಬಿದ್ದಿಲ್ಲ. ರಾಜ್ಯ ಸಮಿತಿ ಏನು ಹೇಳುತ್ತದೆಯೋ ಹಾಗೆ ಮಾಡುತ್ತೆವೆ. ಅಲ್ಲಿವರೆಗೆ ಮುಷ್ಕರ ಮುಂದುವರಿಯಲಿದೆ.
– ರಾಜಕುಮಾರ್, ಪರವಾನಿಗಿ ಭೂಮಾಪಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ