ಬಳ್ಳಾರಿ: ಬಳ್ಳಾರಿ ನಗರದ ಡಾ. ರಾಜ್ಕುಮಾರ್ ರಸ್ತೆಯಲ್ಲಿರುವ ಆಟೊ ಎಲ್ಪಿಜಿ ಸ್ಟೇಷನ್ ಬಳಿ ಸೋಮವಾರ ನೂರಾರು ಆಟೋಗಳ ಸಾಲು ಕಂಡು ಬಂತು.

ನಗರದಲ್ಲಿರುವ ಏಳು ಎಲ್ಪಿಜಿ ಸ್ಟೇಷನ್ಗಳು ಭಾನುವಾರ ಬಂದ್ ಆಗಿದ್ದವು. ಹೀಗಾಗಿ ಎಲ್ಪಿಜಿ ಸಿಗದೇ ಆಟೊ ಚಾಲಕರು ದಿನವಿಡೀ ಪರದಾಡಿದ್ದರು. ಸೋಮವಾರ ಬೆಳಿಗ್ಗೆ ರಾಜ್ಕುಮಾರ್ ರಸ್ತೆಯಲ್ಲಿನ ಸ್ಟೇಷನ್ನಲ್ಲಿ ಎಲ್ಪಿಜಿ ಲಭ್ಯವಾಗುತ್ತಿರುವ ವಿಷಯ ತಿಳಿಯುತ್ತಲೇ ಆಟೊ ಚಾಲಕರು ಬೆಳಿಗ್ಗೆ 6 ಗಂಟೆಯಿಂದಲೇ ಎಲ್ಪಿಜಿ ಕೇಂದ್ರಕ್ಕೆ ಮುಗಿಬಿದ್ದರು.

ಇದೊಂದೇ ಕೇಂದ್ರದಲ್ಲಿ ಸೋಮವಾರ ಎಲ್ಜಿಪಿ ವಿತರಣೆಗೊಂಡಿತು. ಉಳಿದ ಕೇಂದ್ರಗಳಲ್ಲಿ ‘ನೋ ಸ್ಟಾಕ್’ ಫಲಕ ಹಾಕಲಾಗಿತ್ತು.

ರಾಜ್ಕುಮಾರ್ ರಸ್ತೆಯ ಬಿಪಿಎಸ್ಸಿ ಶಾಲೆ ಪಕ್ಕದ ಆಟೊ ಎಲ್ಪಿಜಿ ಸ್ಟೇಷನ್ನಿಂದ ಆರಂಭಿಸಿ ಇತ್ತ ಹೊಸ ಜಿಲ್ಲಾಡಳಿತ ಭವನದ ವರೆಗೆ, ಅತ್ತ ಬೈಪಾಸ್ ವರೆಗೆ ಆಟೊಗಳು ಸಾಲುಗಟ್ಟಿ ನಿಂತಿದ್ದವು. ಬಿರು ಬಿಸಲಿನಲ್ಲೂ ಆಟೊ ಚಾಲಕರು ಸಾಲಿನಲ್ಲಿ ನಿಂತು ಗ್ಯಾಸ್ ಹಾಕಿಸಿಕೊಳ್ಳುತ್ತಿದ್ದದ್ದು ಕಂಡು ಬಂತು.

ಅನಂತಪುರಕ್ಕೆ ತೆರಳುವ ಈ ಮಾರ್ಗದಲ್ಲಿ ಆಟೊಗಳ ಸಾಲಿನ ಕಾರಣಕ್ಕೆ ಟ್ರಾಫಿಕ್ ಸಮಸ್ಯೆಯೂ ಉಂಟಾಯಿತು.

ಲೀಟರ್ಗೆ ₹105: ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭವಾಗುವುದಕ್ಕೂ ಮೊದಲು ಲೀಟರ್ ಎಲ್ಪಿಜಿ ಬೆಲೆ ₹56 ಇತ್ತು. ಅದು ಏರುತ್ತಾ ಸಾಗಿ ಸದ್ಯ ₹105ಕ್ಕೆ ತಲುಪಿದಿದೆ. ಇದು ಆಟೊ ಚಾಲಕರನ್ನು ಇನ್ನಿಲ್ಲದ ತೊಂದರೆಗೆ ದೂಡಿದೆ ಎಂದು ಚಾಲಕ ಎರ್ರಿಸ್ವಾಮಿ ಎಂಬುವವರು ದೂರಿದರು.

‘ನಾವು ಕೇಳಿದಷ್ಟು ಎಲ್ಪಿಜಿಯನ್ನು ನೀಡುತ್ತಿಲ್ಲ. ಕೆಲವೇ ಲೀಟರ್ಗಳಷ್ಟು ಮಾತ್ರ ಹಾಕಲಾಗುತ್ತಿದೆ. ಬೆಲೆಯೂ ಏರಿಕೆಯಾಗಿದೆ. ಸರ್ಕಾರ ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು’ ಎಂದು ಆಟೊ ಚಾಲಕರು ಆಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-25-1174559541

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.