ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ (ಡಿಎಂಜಿ)ಯ ಅಡಿಯಲ್ಲಿ ಬರುವ 9 ಸಂಯುಕ್ತ ಖನಿಜ ತನಿಖಾ ಠಾಣೆಗಳ ಬಲವರ್ಧನೆಗೆ ಬಳ್ಳಾರಿ ಜಿಲ್ಲಾಡಳಿತ ತಿಂಗಳ ಹಿಂದೆಯೇ ತೀರ್ಮಾನಿಸಿರುವುದು ದಾಖಲೆಗಳಿಂದ ಗೊತ್ತಾಗಿದೆ.

ಗಣಿ ಇಲಾಖೆಯ ಮಹತ್ವದ ಸಂಗತಿಗಳ ಕುರಿತು ತೀರ್ಮಾನಿಸಲು ಮಾರ್ಚ್ 17ರಂದು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲಾ ಟಾಸ್ಕ್ ಫೋರ್ಸ್ (ಗಣಿ) ಸಭೆ ನಡೆದಿತ್ತು.

‘ಡಿಎಂಜಿ ವ್ಯಾಪ್ತಿಗೆ ಒಳಪಡುವ 9 ಖನಿಜ ತನಿಖಾ ಠಾಣೆಗಳಲ್ಲಿ ಅದಿರು ಸಾಗಣೆ ವಾಹನಗಳ ತಪಾಸಣೆ ಕಾರ್ಯ ನಡೆಯುತ್ತಿದೆ. ತನಿಖಾ ಠಾಣೆಗಳ ಸಿಬ್ಬಂದಿಗಳ ನೇಮಕಾತಿ ಮತ್ತು ತನಿಖಾ ಠಾಣೆಯಲ್ಲಿರುವ ಯಂತ್ರಗಳ ದುರಸ್ತಿ, ಬದಲಾವಣೆ ಮತ್ತು ವಾರ್ಷಿಕ ನಿರ್ವಹಣೆಗೆ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ನ ಒಟ್ಟಾರೆ ಹಣದ ಶೇ. 5ರ ಅನುದಾನದಲ್ಲಿ ಹಣ ಬಿಡುಗಡೆ ಮಾಡಬೇಕು’ ಎಂದು ಡಿಎಂಜಿ ಅಧಿಕಾರಿಗಳು ಟಾಸ್ಕ್ಫೋರ್ಸ್ ಸಭೆಯಲ್ಲಿ ಮನವಿ ಮಾಡಿದ್ದರು.

ಜತೆಗೆ ಜಿಲ್ಲಾ ನಿರ್ಮಿತಿ ಕೇಂದ್ರದಿಂದ ನಿರ್ಮಿಸುತ್ತಿರುವ ಖನಿಜ ತನಿಖಾ ಠಾಣೆಗಳ ಕಾಮಗಾರಿಗಳು ಪೂರ್ಣಗೊಳ್ಳದೆ ಇರುವುದನ್ನು ಅರಣ್ಯ ಸಂರಕ್ಷಣಾಧಿಕಾರಿ ಸಭೆ ಗಮನಕ್ಕೆ ತಂದಿದ್ದರು.

ಇದೆಲ್ಲವನ್ನೂ ಗಮನಿಸಿದ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ., ತನಿಖಾ ಠಾಣೆಗಳ ಕಾಮಗಾರಿಯನ್ನು ಪೂರ್ಣಗೊಳಿಸಿ ಡಿಎಂಜಿಗೆ ಹಸ್ತಾಂತರ ಮಾಡುವಂತೆ ಯೋಜನಾ ನಿರ್ಮಿತಿ ಕೇಂದ್ರಕ್ಕೆ ಸೂಚಿಸಿದ್ದರು.

ಅಲ್ಲದೆ, ತನಿಖಾ ಠಾಣೆಗಳ ಎಲ್ಲಾ ವೆಚ್ಚಗಳನ್ನು ನಿರ್ವಹಿಸಲು ಡಿಎಂಎಫ್ ನಿಧಿಯಿಂದ ಅನುದಾನ ಒದಗಿಸಲು ತೀರ್ಮಾನಿಸಲಾಗಿತ್ತು. ತನಿಖಾ ಠಾಣೆಗಳ ಮತ್ತು ಇಲಾಖಾ ವಾಹನಗಳ ನಿರ್ವಹಣೆ, ಪರಿಕರಗಳ, ಬಿಡಿಭಾಗಗಳ ಬದಲಾವಣೆ ಮತ್ತು ದುರಸ್ತಿ ಕಾರ್ಯಗಳ ಸಂಬಂಧಿತ ಬಾಕಿ ಇರುವ ಬಿಲ್ಗಳ ಮೊತ್ತವನ್ನು ಡಿಎಂಎಫ್ ನಿಧಿಯಿಂದ ತುರ್ತಾಗಿ ಪವಾತಿಸುವ ಬಗ್ಗೆ ತೀರ್ಮಾನಿಸಲಾಗಿತ್ತು.

ಇತ್ತೀಚೆಗೆ ಸಂಡೂರು ತಾಲ್ಲೂಕಿನ ಬನ್ನಿಹಟ್ಟಿ ಖನಿಜ ತನಿಖಾ ಠಾಣೆ ಮೇಲೆ ದಾಳಿ ಮಾಡಿದ್ದ ಸಂಸದ ಇ. ತುಕಾರಾಂ ಚೆಕ್ಪೋಸ್ಟ್ಗಳ ದುಸ್ಥಿತಿ ಕಂಡು ಆಕ್ರೋಶ ವ್ಯಕ್ತಪಡಿಸಿದ್ದರು. ಜಿಲ್ಲಾಡಳಿತ ಮತ್ತು ಗಣಿ ಇಲಾಖೆಗಳು ತನಿಖಾ ಠಾಣೆಗಳನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದ್ದರು.

ತನಿಖಾ ಠಾಣೆಗಳಿಗೆ ಸಿಐಎಸ್ಎಫ್: ಜಿಲ್ಲೆಯ ಎಲ್ಲಾ ಖನಿಜ ತನಿಖಾ ಠಾಣೆಗಳಿಗೆ ‘ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ (ಸಿಐಎಸ್ಎಫ್)’ ಒದಗಿಸುವ ಸಂಬಂಧ ಅನುಮತಿಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲು ಜಿಲ್ಲಾಧಿಕಾರಿ ಡಿಎಂಜಿಗೆ ಸೂಚನೆಯನ್ನೂ ನೀಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-25-1224781825

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.