ಬಳ್ಳಾರಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಹೊಸ ಮುಖ್ಯಮಂತ್ರಿಯಾಗಿ ಕನಕಪುರದ ಶಾಸಕ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬುಧವಾರ ಅಧಿಕಾರ ಸ್ವೀಕರಿಸುವರು. ಈ ಸಂದರ್ಭದಲ್ಲಿ ರಚನೆಯಾಗುವ ಸಚಿವ ಸಂಪುಟದಲ್ಲಿ ಬಳ್ಳಾರಿ ಜಿಲ್ಲೆಯ ಯಾರಿಗೆಲ್ಲ ಸಚಿವ ಸ್ಥಾನ ಸಿಗಲಿದೆ ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ನಡೆದಿದೆ.

ಬಳ್ಳಾರಿಯ ಶಾಸಕರಿಗೆ ಸಚಿವ ಸ್ಥಾನ ಸಿಗುವುದು ಅನುಮಾನ ಎಂಬ ಮಾತುಗಳ ನಡುವೆಯೇ ಸಚಿವಗಿರಿಗಾಗಿ ಸಾಕಷ್ಟು ಕಸರತ್ತು ನಡೆದಿದೆ. ನಾಲ್ವರು ಶಾಸಕರು ಸಚಿವ ಸ್ಥಾನಕ್ಕಾಗಿ ಪ್ರಯತ್ನ ನಡೆಸಿದ್ದಾರೆ.

ಯಾರ ನಡುವೆ ಪೈಪೋಟಿ?: ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ, ಸಂಡೂರಿನಿಂದ ಇದೇ ಮೊದಲ ಸಲ ಆಯ್ಕೆಯಾಗಿರುವ ಅನ್ನಪೂರ್ಣಾ, ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಹಾಗೂ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಸಚಿವ ಸ್ಥಾನಕ್ಕಾಗಿ ಪ್ರತ್ಯೇಕ ಪ್ರಯತ್ನ ನಡೆಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು, ‘ಬಿ. ನಾಗೇಂದ್ರ ಅವರಿಗೆ ಸಚಿವ ಸ್ಥಾನ ಸಿಗಲಿ’ ಎಂದು ಬಹಿರಂಗವಾಗಿ ಹೇಳಿದ್ದಾರೆ. ಆದರೆ, ಕೆಲ ತಿಂಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ಯುವ ಮತ್ತು ಮೊದಲ ಬಾರಿಯ ಶಾಸಕರ ಸಭೆಯಲ್ಲಿ ಭರತ್ ರೆಡ್ಡಿ ಅವರೂ ಭಾಗವಹಿಸಿದ್ದರು. ತಮಗೂ ಸಚಿವ ಸ್ಥಾನ ಸಿಗಬೇಕು ಎಂಬ ಇಚ್ಛೆ ವ್ಯಕ್ತಪಡಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಪ್ರಶ್ನೆ ಎದುರಾಗಿದ್ದು ಏಕೆ?: ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ಸಿಗಲಿದೆಯೇ ಎಂಬ ಅನಿಶ್ಚಿತತೆಗೆ ಪ್ರಮುಖ ಕಾರಣಗಳಿವೆ. ಜಿಲ್ಲೆಯಲ್ಲಿ ಬಿ. ನಾಗೇಂದ್ರ ಅವರನ್ನು ಹೊರತುಪಡಿಸಿದರೆ ಹಿರಿಯ ಶಾಸಕರು ಎನಿಸಿಕೊಂಡವರು ಇಲ್ಲ. ಹಿರಿತನದ ಆಧಾರದ ಮೇಲೆ ನೋಡುವುದಾದರೆ ಜಿಲ್ಲೆಯ ಉಳಿದವರಿಗೆ ಅವಕಾಶವೇ ಇಲ್ಲ ಎಂಬಂತಿದೆ.

ಇರುವವರಲ್ಲಿ ನಾಲ್ಕು ಬಾರಿ ಗೆದ್ದು ಹಿರಿಯರು ಎನಿಸಿಕೊಂಡಿರುವ ನಾಗೇಂದ್ರ ಅವರಿಗೆ, ಹಿಂದಿನ ವಾಲ್ಮೀಕಿ ನಿಗಮದ ಹಗರಣದ ಆರೋಪ ಬಾಧಿಸುತ್ತಿದೆ. ಸಂಪುಟವನ್ನು ಕಳಂಕ ಮುಕ್ತವಾಗಿರಿಸಬೇಕು ಎಂಬ ನಿಲುವಿಗೆ ಕಾಂಗ್ರೆಸ್ ಹೈಕಮಾಂಡ್ ಅಂಟಿಕೊಂಡರೆ, ನಾಗೇಂದ್ರ ಅವರಿಗೆ ಸ್ಥಾನ ಸಿಗಲಾರದು ಎಂದು ಪಕ್ಷದ ಮೂಲಗಳು ತಿಳಿಸಿವೆ. ‘ನಾಗೇಂದ್ರ ಅವರ ಮೇಲಿನ ಆರೋಪಗಳನ್ನು ಪಕ್ಷದ ನಾಯಕರ ಗಮನಕ್ಕೆ ತಂದು, ಅವರಿಗೆ ಸಚಿವ ಸ್ಥಾನ ತಪ್ಪಿಸಲು ಸ್ವಪಕ್ಷೀಯರೇ ಕೆಲವರು ಅಡ್ಡಿಯಾಗಿದ್ದಾರೆ’ ಎಂಬ ಮಾತುಗಳೂ ಇವೆ.

ಜಿಲ್ಲೆಗೊಂದು ಸ್ಥಾನದ ಸೂತ್ರ: ಬಳ್ಳಾರಿ ಜಿಲ್ಲೆಯು ಕಾಂಗ್ರೆಸ್ನ ಭದ್ರಕೋಟೆ. ಹೀಗಾಗಿ ಅರ್ಹತಾ ಮಾನದಂಡಗಳನ್ನು ಪಕ್ಕಕ್ಕಿಟ್ಟು 'ಜಿಲ್ಲೆಗೊಂದು ಸಚಿವ ಸ್ಥಾನ' ಎಂಬ ಸೂತ್ರವನ್ನು ಪಾಲಿಸಬೇಕು ಹಾಗೂ ಸ್ಥಳೀಯರಿಗೇ ಜಿಲ್ಲಾ ಉಸ್ತುವಾರಿಯ ಹೊಣೆಯನ್ನೂ ನೀಡಬೇಕು ಎಂಬುದು ಸ್ಥಳೀಯ ಕಾರ್ಯಕರ್ತರ ಒತ್ತಾಯವಾಗಿದೆ.

ಪತ್ನಿ ಪರ ಇ. ತುಕಾರಾಂ ಲಾಬಿ

ಸಂಡೂರಿನಿಂದ ಇದೇ ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿರುವ ಅನ್ನಪೂರ್ಣಾ ಅವರೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು ಅವರ ಪರವಾಗಿ ಪತಿ ಹಾಗೂ ಸಂಸದ ಇ. ತುಕಾರಾಂ ತೀವ್ರ ಲಾಬಿ ನಡೆಸಿದ್ದಾರೆ. ಇದಕ್ಕಾಗಿ ಅವರು ಹಿರಿಯ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ತುಕಾರಾಂ ಅವರು ಈ ಹಿಂದೆ ಸಂಡೂರಿನಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದವರು. ‘ನನ್ನನ್ನು ಬಲವಂತದಿಂದ ಲೋಕಸಭೆಗೆ ಕಳುಹಿಸಲಾಯಿತು. ಶಾಸಕನಾಗಿಯೇ ಉಳಿದಿದ್ದರೆ ನನಗೆ ಸಚಿವ ಸ್ಥಾನ ಖಚಿತವಾಗಿತ್ತು. ಈಗ ನನಗೆ ಇಲ್ಲದಿದ್ದರೂ ನನ್ನ ಕೋಟಾದಲ್ಲಿ ಪತ್ನಿಗೆ ಸಚಿವ ಸ್ಥಾನ ನೀಡಬೇಕು’ ಎಂಬುದು ತುಕಾರಾಂ ಅವರ ಒತ್ತಾಯ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.