ಬಳ್ಳಾರಿ: ಮೈಸೂರು ಮತ್ತು ಅಜ್ಮೀರ್ ನಡುವಿನ ವಿಶೇಷ ರೈಲು ಈ ಹಿಂದಿನಂತೆ ಬಳ್ಳಾರಿಯ ಮಾರ್ಗವಾಗಿಯೇ ಸಂಚರಿಸಬೇಕು ಎಂದು ರೈಲ್ವೆ ಕ್ರಿಯಾ ಸಮಿತಿ ಆಗ್ರಹಿಸಿದೆ.

ಸಮಿತಿಯ ಅಧ್ಯಕ್ಷ ಮಹೇಶ್ವರ ಸ್ವಾಮಿ ಶನಿವಾರ ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

‘ಮೈಸೂರು ಅಜ್ಮೀರ್ ರೈಲು ಮೈಸೂರಿನಿಂದ ಹೊರಟು ಹೊಳೆನರಸೀಪುರ, ಹಾಸನ, ಅರಸೀಕೆರೆ, ಚಿಕ್ಕಜಾಜೂರು, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ ಕಂಟೋನ್ಮೆಂಟ್, ಹೊಸಪೇಟೆ ಮೂಲಕ ಅಜ್ಮೀರ್ಗೆ ಸಂಚರಿಸುತ್ತಿತ್ತು. ಇದು ವಾರದಲ್ಲಿ ಒಂದು ದಿನ ಹೋಗಿ ಬರುವ ರೈಲಾಗಿತ್ತು. ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ ಮತ್ತು ಹೊಸಪೇಟೆಯ ಮುಸ್ಲಿಮ್ ಸಮುದಾಯದ ಬಹುಜನರು ಈ ರೈಲಿನ ಮೂಲಕ ಅಜ್ಮೀರ್ ದರ್ಗಾದ ದರ್ಶನಕ್ಕೆ ಹೋಗಿ ಬರುತ್ತಿದ್ದರು. ಗದಗ, ಕೊಪ್ಪಳ, ಹೊಸಪೇಟೆ, ಬಳ್ಳಾರಿಯ ಜನತೆ ಚಿತ್ರದುರ್ಗ, ಹಾಸನ ಮತ್ತು ಮೈಸೂರಿಗೆ ನೇರವಾಗಿ ಹೋಗಿ ಬರುವ ಸೌಲಭ್ಯ ಈ ರೈಲಿನಿಂದ ದೊರೆಯುತ್ತಿತ್ತು. ಇದೇ ತಿಂಗಳ ಮೊದಲ ವಾರದಲ್ಲಿ ರೈಲ್ವೆ ಮಂಡಳಿಯು ರೈಲನ್ನು ಖಾಯಂ ರೈಲಾಗಿ ಸಂಚರಿಸುವ ಆದೇಶ ಮಾಡಿದೆ. ಆದರೆ ಈಗ ಸಂಚರಿಸುವ ಮಾರ್ಗ ಬದಲಾವಣೆ ಮಾಡಿರುವುದು ಸರಿಯಲ್ಲ’ ಎಂದು ಅವರು ಹೇಳಿದ್ದಾರೆ.

ಚಿಕ್ಕಜಾಜೂರು, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ ಕಂಟೋನ್ಮೆಂಟ್ ಮತ್ತು ಹೊಸಪೇಟೆ ಮಾರ್ಗವನ್ನು ಬದಲಾಯಿಸುವ ಮೂಲಕ ಈ ಭಾಗಕ್ಕೆ ಅನ್ಯಾಯ ಮಾಡಲು ರೈಲ್ವೆ ಮಂಡಳಿ ಹೊರಟಿದೆ. ಆದೇಶವನ್ನು ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿ ತೀವ್ರವಾಗಿದೆ ವಿರೋಧಿಸುತ್ತದೆ. ಕೂಡಲೇ ಈ ಆದೇಶವನ್ನು ಹಿಂಪಡೆದು ಹಳೇ ಮಾರ್ಗದಲ್ಲೇ ರೈಲು ಸಂಚರಿಸುವಂತೆ ಮಾಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

‘ಈ ಬಗ್ಗೆ ಪ್ರಧಾನಿ, ರೈಲ್ವೆ ಮಂಡಳಿ ಅಧಿಕಾರಿಗಳಿಗೆ, ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳಿಗೆ ಸಮಿತಿ ಪತ್ರ ಬರೆದಿದೆ. ಈ ರೈಲು ಮೊದಲಿನ ಮಾರ್ಗದಲ್ಲೇ ಸಂಚರಿಸುವಂತೆ ಮರು ಆದೇಶ ಮಾಡದಿದ್ದಲ್ಲಿ ಚಳವಳಿ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-25-1734781265

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.