ತೋರಣಗಲ್ಲು: ಸಮೀಪದ ತಾರಾನಗರ ಗ್ರಾಮದ ನಾರಿಹಳ್ಳ ಜಲಾಶಯ ನಿರಂತರ ಮಳೆಯಿಂದ ಮೊದಲ ಬಾರಿಗೆ ಭರ್ತಿಯಾಗಿದ್ದು, ಬುಧವಾರ ತಡರಾತ್ರಿ ಎಲ್ಲ ಐದು ಗೇಟ್‍ಗಳ ಮೂಲಕ 700 ಕ್ಯೂಸೆಕ್ ನೀರನ್ನು ನಾರಿಹಳ್ಳಕ್ಕೆ ಹರಿಬಿಡಲಾಗಿದೆ.
ಸಂಡೂರು ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿ ಕಳೆದೊಂದು ವಾರದಿಂದ ನಿರಂತರವಾಗಿ ಉತ್ತಮ ಮಳೆ ಸುರಿಯುತ್ತಿದ್ದು, ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾಗಿದೆ. ಪ್ರಸ್ತುತ ಜಲಾಶಯದಲ್ಲಿ 0.85 ಟಿಎಂಸಿ ನೀರು ಸಂಗ್ರಹಗೊಂಡಿವೆ.
‘ನೀರಿನ ಒಳಹರಿವು ನಿರಂತರವಾಗಿ ಹೆಚ್ಚಾಗಿದ್ದರಿಂದ ಗುರುವಾರ ತಡರಾತ್ರಿಯು 700 ಕ್ಯೂಸೆಕ್ ಅಧಿಕ ನೀರನ್ನು ಹಳ್ಳಕ್ಕೆ ನೀರು ಬೀಡಲಾಗುವುದು’ ಎಂದು ನಾರಿಹಳ್ಳ ಜಲಾಶಯದ ಅಧಿಕಾರಿ ರೆಡ್ಡಿ ತಿಳಿಸಿದ್ದಾರೆ.