ತೆಕ್ಕಲಕೋಟೆ (ಬಳ್ಳಾರಿ ಜಿಲ್ಲೆ): ಇಲ್ಲಿನ ಹೋಬಳಿ ವ್ಯಾಪ್ತಿಯಲ್ಲಿ ಮೂರು ದಿನಗಳಿಂದ ‘ಭಾರತಶ್ರೀ’ ಯೋಜನೆಯಡಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ (ಎಎಸ್ಐ) ಶಾಸನಗಳ ಡಿಜಿಟಲೀಕರಣ ಪ್ರಗತಿಯಲ್ಲಿದೆ. ಇದೇ ವೇಳೆ ಬುಧವಾರ ನಿಟ್ಟೂರು ಗ್ರಾಮದಲ್ಲಿ ವಿಜಯನಗರ ಕಾಲದ ನಿಲುವುಗಲ್ಲು ಶಾಸನ ಪತ್ತೆಯಾಗಿದೆ.

‘ನಿಟ್ಟೂರು ಗ್ರಾಮದ ಆಂಜನೇಯ ದೇವಸ್ಥಾನದ ಮುಂದೆ ಇರುವ ನಿಲುವುಗಲ್ಲು ಶಾಸನದ ಅರ್ಧ ಭಾಗ ಭೂಮಿಯಲ್ಲಿ ಹೂತು ಹೋಗಿದ್ದು ಉಳಿದರ್ಧ ಕಂಡುಬರುತ್ತಿದೆ. ನಿಟ್ಟೂರು ಮತ್ತು ಉಡೇಗೋಳ ಗ್ರಾಮಗಳಲ್ಲಿನ ಅಶೋಕನ ಕಾಲದ ಶಿಲಾಶಾಸನ, ತೆಕ್ಕಲಕೋಟೆಯ ಬಸವೇಶ್ವರ ದೇವಸ್ಥಾನದ ಮುಂದಿನ ಬಿಜ್ಜಳನ ಕಾಲದ ಶಾಸನ ಹಾಗೂ ಗೌಡ್ರ ಮೂಲೆಯಲ್ಲಿರುವ ಕೆರೆ ದಾನ ಶಾಸನಗಳ ಪಡಿಯಚ್ಚು ತೆಗೆದುಕೊಳ್ಳಲಾಗಿದೆ’ ಎಂದು ಎಎಸ್ಐ ಸಹಾಯಕ ಅಧೀಕ್ಷಕ, ಶಾಸನತಜ್ಞ ಅನಿಲ್ ಕುಮಾರ್ ಆರ್. ವಿ. ತಿಳಿಸಿದರು.

‘ಲಭ್ಯವಾದ ಶಾಸನದಲ್ಲಿ 17 ಸಾಲುಗಳಿವೆ. ಇದರ ಕಾಲಮಾನ ಶಾಲಿವಾಹನಶಕ ವರ್ಷ 1465 ಶುಭಕೃತ ಸಂವತ್ಸರ ಭಾದ್ರಪದ ಶುದ್ಧ ಗುರುವಾರ ಎಂದು ನಮೂದಾಗಿದೆ. ಇದು ವಿಜಯನಗರದ ಸದಾಶಿವರಾಯನ ಅಳ್ವಿಕೆಯ ಅವಧಿಯದ್ದು ಎಂದು ತೋರುತ್ತದೆ.ಶ್ರೀವಿಟ್ಟ ಅಡೆಯ ದೇವರ ಅಮೃತ ಪಡಿಗೆ ದಾನ ನೀಡಿದ ಅಂಶ ಒಳಗೊಂಡಿದೆ’ ಎಂದರು.

ಮೈಸೂರು ಶಾಸನ ನಿರ್ದೇಶಕರ ಕಚೇರಿಯ ಸಿಬ್ಬಂದಿ ನಾಗೇಂದ್ರ, ನಿಶಾಂತ್ ಕುಮಾರ್ ಗೌರವ್, ಇತಿಹಾಸ ಸಂಶೋಧನಾರ್ಥಿಗಳಾದ ಮನೋಹರ ಸಿ.ಎಂ, ಎಂ ಹೊನ್ನೂರ, ನಿಟ್ಟೂರು ಮಂಜುನಾಥ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-51-1671320076

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.