ಬಳ್ಳಾರಿ: ಮಹಾನಗರ ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ವೀರೇಶ್ ಎಂಬುವರ ಮೇಲೆ ಶುಕ್ರವಾರ ಪಾಲಿಕೆಯ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ (ಕಾಂಗ್ರೆಸ್ ಸದಸ್ಯ) ಕುಬೇರ ಅವರು ಹಲ್ಲೆ ನಡೆಸಿದ್ದಾರೆ.

ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿ ಅವರ ವಾರ್ಡ್ ಭೇಟಿ ಕಾರ್ಯಕ್ರಮ (ಸಲಾಂ ಬಳ್ಳಾರಿ) ವೇಳೆ ಈ ಘಟನೆ ನಡೆದಿದೆ. ಹಲ್ಲೆ ಖಂಡಿಸಿ ಕಾರ್ಪೊರೇಟರ್ ಕುಬೇರ ಅವರ ಬಂಧನಕ್ಕೆ ಆಗ್ರಹಿಸಿ ಪಾಲಿಕೆ ಆಯುಕ್ತ ಮಂಜುನಾಥ್, ಅಧಿಕಾರಿ, ಸಿಬ್ಬಂದಿ, ಬಿಜೆಪಿ ಸದಸ್ಯರು ಪಾಲಿಕೆಯ ಕೇಂದ್ರ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು.

ಶಾಸಕ ನಾರಾ ಭರತ್ ರೆಡ್ಡಿ ಮಾತನಾಡಿ, ‘ಕರ್ತವ್ಯ ನಿರತ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದು ತಪ್ಪು. ಸಲಾಂ ಬಳ್ಳಾರಿ ಕಾರ್ಯಕ್ರಮದ ವೇಳೆ ಕುಬೇರ ಮತ್ತು ವೀರೇಶ್ ನಡುವೆ ಮಾತಿನ ಚಕಮಕಿ ನಡೆದಾಗ, ನಾನೇ ಸಮಾಧಾನಪಡಿಸಿದ್ದೆ. ಘಟನೆ ಬಗ್ಗೆ ಪೂರ್ಣ ಮಾಹಿತಿ ಪಡೆದು, ನ್ಯಾಯ ಒದಗಿಸಲು ಪ್ರಯತ್ನಿಸುವೆ. ಪ್ರತಿಭಟನಾನಿರತರನ್ನು ಪ್ರತಿಭಟನೆ ಹಿಂಪಡೆಯಲು ಕೋರಲಾಗುವುದು’ ಎಂದರು.

ಪಾಲಿಕೆ ಆಯುಕ್ತ ಮಂಜುನಾಥ್ ಮಾತನಾಡಿ, ‘ಪಾಲಿಕೆಯಲ್ಲಿ ಇರುವುದೇ ಶೇ 25ರಷ್ಟು ಸಿಬ್ಬಂದಿ. ನಾವು ಒತ್ತಡದಲ್ಲಿ ಕೆಲಸ ಮಾಡುತ್ತೇವೆ. ಇದರ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಲಾಗುವುದು. ಘಟನೆ ಸಂಬಂಧ ಎಫ್ಐಆರ್ ಮಾಡಿಸಲಾಗುವುದು’ ಎಂದರು.

ಸುದ್ದಿಗಾರರ ಜೊತೆ ವೀರೇಶ ಮಾತನಾಡಿ, ‘ಇನ್ಫೆಂಟ್ರಿ ರಸ್ತೆಯ ಪಾದಚಾರಿ ಮಾರ್ಗದ ಮೇಲೆ ವ್ಯಕ್ತಿಯೊಬ್ಬರು ತಾತ್ಕಾಲಿಕ ಶೆಡ್ ಹಾಕಿದ್ದರು. ಅದನ್ನು ತೆರವು ಮಾಡುವಂತೆ ಸಂಬಂಧಪಟ್ಟವರಿಗೆ ತಿಳಿಸಿದ್ದೆವು. ಅದರೆ ತೆರವು ಪ್ರಕ್ರಿಯೆ ವಿಳಂಬ ಆಗಿರುವುದಕ್ಕೆ ಸಿಟ್ಟಿಗೆದ್ದು ಕುಬೇರ ಹಲ್ಲೆ ಮಾಡಿದರು’ ಎಂದರು.

ವೀರೇಶ್ ಅವರನ್ನು ಶಾಸಕ ನಾರಾ ಭರತ ರೆಡ್ಡಿ, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ, ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮದ್ ಝುಬೇರ ಮತ್ತು ಬಿಜೆಪಿ ಮುಖಂಡರು ಭೇಟಿಯಾದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-25-904855176

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.