ಬಳ್ಳಾರಿ: ಪಡಿತರ ಅಕ್ಕಿ ಸಾಗಣೆದಾರರೊಬ್ಬರ ಬಳಿ ₹3 ಲಕ್ಷ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿಯ ಇಲಾಖಾ ಅಂಗರಕ್ಷಕ ದೇವರಾಜ್ ಎಂಬುವರನ್ನು ಬಂಧಿಸಲಾಗಿದೆ.

ಬಳ್ಳಾರಿಯ ಮೋಕಾ ಠಾಣೆಯಲ್ಲಿ ಮೇ6ರಂದು ದಾಖಲಾಗಿದ್ದ ಪ್ರಕರಣದನ್ವರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಏನಿದು ಘಟನೆ?: ಏಪ್ರಿಲ್ 28ರಂದು ನಸುಕಿನ ಜಾವ 2.30ರಲ್ಲಿ ಅಕ್ಕಿ ವರ್ತಕ ಶರಭಯ್ಯ ಎಂಬುವವರ ಇಬ್ಬರು ಚಾಲಕರು, ಎರಡು ಸರಕು ಸಾಗಣೆ ವಾಹನಗಳಲ್ಲಿ ಪಡಿತರ ಅಕ್ಕಿಯನ್ನು ತುಂಬಿಕೊಂಡು ಮೋಕ ಫಾರೆಸ್ಟ್ ರಸ್ತೆ ಮಾರ್ಗವಾಗಿ ಆಂಧ್ರಪ್ರದೇಶಕ್ಕೆ ಸಾಗಿಸುತ್ತಿದ್ದರು.

ಈ ವೇಳೆ ಮೋಕ ಅರಣ್ಯ ಪ್ರದೇಶದ ಬಳಿ ಕಾರಿನಲ್ಲಿ ಬಂದ ಅಪರಿಚಿತರು ಅಕ್ಕಿ ಲಾರಿಗಳನ್ನು ಅಡ್ಡಗಟ್ಟಿದ್ದಾರೆ. ವಿಷಯ ತಿಳಿದು ಶರಭಯ್ಯ ಅವರು ಸ್ಥಳಕ್ಕೆ ಧಾವಿಸಿದಾಗ, ಕಾರಿನಿಂದ ಇಳಿದ ಇಬ್ಬರು ವ್ಯಕ್ತಿಗಳು ತಾವು ‘ಎಸ್.ಪಿ. ಸ್ಕ್ವಾಡ್’ ಅಧಿಕಾರಿಗಳೆಂದು ಹೇಳಿಕೊಂಡಿದ್ದಾರೆ.

ಹಣಕ್ಕೆ ಬೇಡಿಕೆ: ‘ನೀವು ಅಕ್ರಮವಾಗಿ ಅಕ್ಕಿ ಸಾಗಿಸುತ್ತಿದ್ದೀರಿ, ನಿಮ್ಮ ಮೇಲೆ ಕೇಸ್ ಹಾಕುತ್ತೇವೆ’ ಎಂದು ಲಾಠಿ ತೋರಿಸಿ ಬೆದರಿಸಿದ ಆರೋಪಿಗಳು, ಕೇಸ್ ದಾಖಲಿಸಬಾರದೆಂದರೆ ₹5 ಲಕ್ಷ ನೀಡುವಂತೆ ಬೇಡಿಕೆಯಿಟ್ಟಿದ್ದಾರೆ. ವರ್ತಕ ಶರಭಯ್ಯ ಅವರು ಮೊದಲು ₹50 ಸಾವಿರ ನೀಡುವುದಾಗಿ ಹೇಳಿದ್ದಾರೆ. ಆ ಬಳಿಕ ₹2 ಲಕ್ಷ ನೀಡುವುದಾಗಿ ಕೇಳಿಕೊಂಡರೂ ಒಪ್ಪದ ಆರೋಪಿಗಳು, ಅಂತಿಮವಾಗಿ ₹3 ಲಕ್ಷ ಪಟ್ಟು ಹಿಡಿದಿದ್ದಾರೆ.

ಹಣ ನೀಡದಿದ್ದರೆ ವಾಹನ ಜಪ್ತಿ ಮಾಡಿ ಜೈಲಿಗೆ ಕಳುಹಿಸುವುದಾಗಿಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ, ಭಯಗೊಂಡ ಶರಭಯ್ಯ ಅವರು ಅಂದು ನಸುಕಿನ 5.30ರ ಸುಮಾರಿಗೆ ₹3 ಲಕ್ಷವನ್ನು ಆರೋಪಿಗಳಿಗೆ ನೀಡಿದ್ದಾರೆ.

ಏ.28ರಂದು ಘಟನೆ ನಡೆದಿದ್ದರೂ, ಶರಭಯ್ಯ ಅವರು ಮೇ 6ರಂದು ಮೋಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರು ಆಧರಿಸಿ ಪೊಲೀಸರು, ಮೂವರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-25-1303065756

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.