ಬಳ್ಳಾರಿ: ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್ಎನ್ ಡಿಎಂಸಿ) ಇತ್ತೀಚಿನ ವರದಿಯ ಪ್ರಕಾರ, ಬಳ್ಳಾರಿ ಜಿಲ್ಲೆಯಲ್ಲಿ ಈ ವರ್ಷದ ಮುಂಗಾರು ಪೂರ್ವ (ಪ್ರೀ-ಮಾನ್ಸೂನ್) ಅವಧಿಯಲ್ಲಿ ಮಳೆಯ ಕೊರತೆ ಕಂಡುಬಂದಿದೆ. ಏಪ್ರಿಲ್ 30ಕ್ಕೆ ಕೊನೆಗೊಂಡ ವರದಿಯಂತೆ ಜಿಲ್ಲೆಯ ಒಟ್ಟಾರೆ ಮಳೆಯ ಪ್ರಮಾಣದಲ್ಲಿ ಕುಸಿತ ದಾಖಲಾಗಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಜನವರಿಯಿಂದ ಏಪ್ರಿಲ್ ಅಂತ್ಯದವರೆಗೆ ಹಾಗೂ ಪೂರ್ವ ಮುಂಗಾರು ಅವಧಿಯಲ್ಲಿನ ಮಳೆಯ ವಿವರಗಳು ಹೀಗಿವೆ: ಮಾರ್ಚ್ 1 ರಿಂದ ಏಪ್ರಿಲ್ 30 ರವರೆಗೆ ಜಿಲ್ಲೆಯಲ್ಲಿ ಸರಾಸರಿ 24.6 ಮಿ.ಮೀ ಮಳೆಯಾಗಬೇಕಿತ್ತು. 23.5 ಮೀ.ಮೀ ಮಳೆಯಾಗಿದೆ.

ಮಾರ್ಚ್ ತಿಂಗಳಲ್ಲಿ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿರುವುದಾಗಿ ಅಂಕಿ ಅಂಶಗಳು ಹೇಳುತ್ತಿವೆ. ಆ ತಿಂಗಳಲ್ಲಿ 5.3 ಮಿ.ಮೀ ಮಳೆಯಾಗಬೇಕಾಗಿತ್ತು. ಆದರೆ, 11.9 ಮಿ.ಮೀರಷ್ಟು ಮಳೆ ಸುರಿದ್ದು, ಶೇ 125 ರಷ್ಟು ಹೆಚ್ಚು ಮಳೆಯಾಗಿದೆ.

ಆದರೆ, ಏಪ್ರಿಲ್ 1ರಿಂದ 30ರವರೆಗೆ 19.3 ಮಿ.ಮೀ ವಾಡಿಕೆ ಮಳೆಗೆ ಎದುರಾಗಿ 11.6 ಮಿ.ಮೀ ಮಳೆಯಾಗಿದ್ದು, ಶೇ 40ರಷ್ಟು ಕೊರತೆಯುಂಟಾಗಿದೆ. ಆದರೆ, 2025ರಲ್ಲಿ ಏಪ್ರಿಲ್ ತಿಂಗಳಲ್ಲಿ ವಾಡಿಕೆ ಗಿಂತಲೂ ಅಧಿಕ ಮಳೆಯಾಗಿತ್ತು. 19.3 ಮೀ.ಮೀಗೆ ಪ್ರತಿಯಾಗಿ 19.6 ಮಿ.ಮೀ ರಷ್ಟು ಮಳೆ ಸುರಿದಿತ್ತು.

ಈ ವರ್ಷದ ಜನವರಿ 1ರಿಂದ ಇಲ್ಲಿಯ ವರೆಗೆ ಜಿಲ್ಲೆಯಲ್ಲಿ ಸರಾಸರಿ 28.8 ಮಿ.ಮೀ ಮಳೆಯಾಗಬೇಕಾಗಿತ್ತು. ಅದಕ್ಕೆ ಪ್ರತಿಯಾಗಿ 24.2 ಮಿ.ಮೀ ಸುರಿದಿದೆ. ಶೇ 16ರಷ್ಟು ಕೊರತೆಯಾಗಿದೆ.

ಏಪ್ರಿಲ್ 30ರ ಬೆಳಿಗ್ಗೆ 8:30ಕ್ಕೆ ಕೊನೆಗೊಂಡಂತೆ ಜಿಲ್ಲೆಯಲ್ಲಿ 0.2 ಮಿ.ಮೀ ಅತ್ಯಲ್ಪ ಮಳೆಯಾಗಿದೆ. ವಾಸ್ತವವಾಗಿ 0.7 ಮಿ.ಮೀ ರಷ್ಟು ಮಳೆಯಾಗಬೇಕಾಗಿತ್ತು.

ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಕಳೆದ ಏಪ್ರಿಲ್ ತಿಂಗಳಲ್ಲಿ ಮಳೆಯ ಹಂಚಿಕೆ ಅಸಮಾನವಾಗಿದೆ. ಮುಖ್ಯವಾಗಿ ಬಳ್ಳಾರಿ ಮತ್ತು ಕುರುಗೋಡು ಭಾಗದಲ್ಲಿ ಮಳೆಯ ಕೊರತೆ ಎದ್ದು ಕಾಣುತ್ತಿದೆ.

ಕೃಷಿಗೆ ಹಿನ್ನಡೆ: ಏಪ್ರಿಲ್ನಲ್ಲಿ ವಾಡಿಕೆ ಗಿಂತಲೂ ಕಡಿಮೆ ಸುರಿದಿರುವುದರಿಂದ ಬೇಸಿಗೆಯ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ. ಮುಂಗಾರು ಕೃಷಿಗೆ ಭೂಮಿ ಹದಗೊಳಿಸುವ ಪ್ರಕ್ರಿಯೆಗಳಿಗೆ ಹಿನ್ನಡೆಯುಂಟಾಗಿದೆ.

ಕೃಷಿ ಪೂರ್ವ ಚಟವಟಿಕೆ ಮಾಡಿಕೊಳ್ಳಲು ಏಪ್ರಿಲ್ ಮತ್ತು ಮೇ ತಿಂಗಳ ಮಳೆ ಅನುಕೂಲ. ಇಲ್ಲವಾದರೆ, ಕೃಷಿ ಚಟುವಟಿಕೆ ನಿಧಾನವಾಗಲಿದೆ.
ಮಾಧವ ರೆಡ್ಡಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ

ಇಳಿದು ಏರಿದ ತಾಪಮಾನ

ಬಳ್ಳಾರಿಯಲ್ಲಿ ಏಪ್ರಿಲ್ನಲ್ಲಿ 42 ಮೀರಿದ ತಾಪಮಾನ ದಾಖಲಾಗಿದೆ. ಕಳೆದ ಎರಡು ದಿನಗಳಲ್ಲಿ ಬಳ್ಳಾರಿ ಜಿಲ್ಲೆಯ ಅಲ್ಲಲ್ಲಿ ಮಳೆ ಸುರಿದಿತ್ತು. ಹೀಗಾಗಿ ತಾಪಮಾನದಲ್ಲಿ ಅಲ್ಪ ಇಳಿಕೆ ಕಾಣಿಸಿತ್ತು. ಏ. 29ರಿಂದ 30ರ ನಡುವಿನ ಅವಧಿಯಲ್ಲಿ 39.9 ಡಿಗ್ರಿಯಷ್ಟು ಉಷ್ಣಾಂಶ ವರದಿಯಾಗಿತ್ತು. ಆದರೆ, ಶುಕ್ರವಾರದಿಂದ ತಾಪಮಾನ ಮತ್ತೆ ಏರುಗತಿಯಲ್ಲಿ ಸಾಗಿದ್ದು, 41 ಡಿಗ್ರಿ ದಾಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.